ಮಂಗಳೂರು: ಕಳೆದ ಮೂರು ದಿನಗಳಿಂದ ಬಿರುಸಾಗಿ ಸುರಿಯುತ್ತಿದ್ದ ಮಳೆ ಇಂದು ತಗ್ಗಿದ್ದು ಜನಜೀವನ ಸಹಜಸ್ಥಿತಿಗೆ ಮರಳುತ್ತಿದೆ.
ಮಂಗಳೂರಿನಲ್ಲಿ ತಗ್ಗಿದ ವರುಣಾರ್ಭಟ: ಸಹಜ ಸ್ಥಿತಿಯತ್ತ ಜನಜೀವನ - Rain in Mangalore
ಮಂಗಳೂರಿನಲ್ಲಿ ಸುರಿಯುತ್ತಿದ್ದ ಮಳೆ ಪ್ರಮಾಣದಲ್ಲಿ ಇಳಿಮುಖವಾಗಿದ್ದು, ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ.

ಮಂಗಳೂರಿನಲ್ಲಿ ತಗ್ಗಿದ ವರುಣಾರ್ಭಟ
ಮಂಗಳೂರಿನಲ್ಲಿ ತಗ್ಗಿದ ವರುಣಾರ್ಭಟ
ಶುಕ್ರವಾರದಿಂದ ಆರಂಭವಾಗಿದ್ದ ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಳಿಸಿತ್ತು. ಭಾರೀ ಮಳೆಗೆ ಹಲವೆಡೆ ಗುಡ್ಡ ಕುಸಿತವಾಗಿ ಆಸ್ತಿಪಾಸ್ತಿ ಸಹ ನಷ್ಟವಾಗಿತ್ತು. ಏಕಾಏಕಿ ಕಾಣಿಸಿಕೊಂಡ ನೆರೆಯಿಂದ ಹಲವು ಮಂದಿ ಸಂತ್ರಸ್ತರಾಗಿದ್ದಾರೆ.
ಆದರೆ ನಿನ್ನೆ ರಾತ್ರಿಯಿಂದ ಮಳೆ ಪ್ರಮಾಣ ಕಡಿಮೆಯಾಗಿದ್ದು, ಮೂರು ದಿನಗಳಿಂದ ಮೋಡದಲ್ಲಿ ಮರೆಯಾಗಿದ್ದ ಸೂರ್ಯ ಇಂದು ಕಾಣಿಸಿಕೊಂಡಿದ್ದಾನೆ. ಹವಾಮಾನ ಇಲಾಖೆ ಪ್ರಕಾರ ಇಂದು ಕೂಡ ಮಳೆಯಾಗುವ ಮುನ್ಸೂಚನೆಯಿದೆ.