ಉಳ್ಳಾಲ: ಕೃಷಿ ಕೆಲಸ ಮಾಡಿಕೊಂಡಿದ್ದ ಯುವಕನೋರ್ವ ಆಯ ತಪ್ಪಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಬೋಳಿಯಾರ್ ಗ್ರಾಮದಲ್ಲಿ ನಡೆದಿದೆ.
ಉಳ್ಳಾಲ: ಆಯ ತಪ್ಪಿ ಬಾವಿಗೆ ಬಿದ್ದು ಯುವಕ ಸಾವು - Youth killed in Ulala
ಆಯ ತಪ್ಪಿ ಬಾವಿಗೆ ಬಿದ್ದು ಯುವಕ ಮೃತಪಟ್ಟಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದಲ್ಲಿ ನಡೆದಿದೆ.
ಬಾವಿಗೆ ಬಿದ್ದು ಯುವಕ ಸಾವು
ಗ್ರಾಮದ ಧರ್ಮತೋಟ ನಿವಾಸಿ ವಿನಾನ್ಸ್ ನಿಖಿಲ್ ಕ್ರಾಸ್ತ(28) ಮೃತ ಯುವಕ. ತೋಟದಲ್ಲಿ ಕೃಷಿ ಕೆಲಸ ಮಾಡಿಕೊಂಡಿದ್ದ ನಿಖಿಲ್, ಮೊನ್ನೆ ಮಧ್ಯಾಹ್ನ ಕೆಲಸ ಮುಗಿಸಿ ಮನೆಗೆ ಬಂದಿದ್ದು ಸಂಜೆ ಮತ್ತೆ ತೋಟಕ್ಕೆ ಹೋಗಿ ಬಳಿಕ ನಾಪತ್ತೆಯಾಗಿದ್ದ. ಮನೆ ಮಂದಿ ಹುಡುಕಾಟ ನಡೆಸಿದರೂ ಪ್ರಯೋಜನ ಆಗದ ಕಾರಣ ಸ್ಥಳೀಯರಿಗೆ ಮಾಹಿತಿ ನೀಡಿದ್ದರು.
ಅದರಂತೆ ಸ್ಥಳೀಯ ಸರ್ವ ಧರ್ಮೀಯ ಯುವಕರು ಹುಡುಕಾಟ ನಡೆಸಿದ್ದು, ಯುವಕನ ಚಪ್ಪಲಿ ಬಾವಿಯಲ್ಲಿ ಪತ್ತೆಯಾಗಿದೆ. ನಂತರ ಬಾವಿಯಲ್ಲಿ ಶೋಧ ನಡೆಸಿ ಮೃತದೇಹ ಹೊರ ತೆಗೆದಿದ್ದಾರೆ. ಘಟನೆ ಸಂಬಂಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.