ಕರ್ನಾಟಕ

karnataka

ETV Bharat / state

ಕೊರೊನಾಗೆ ದ.ಕ.ಜಿಲ್ಲೆಯ 26 ವರ್ಷದ ಯುವಕನ ಬಲಿ: ಮೃತರ ಸಂಖ್ಯೆ ಎಂಟಕ್ಕೆ ಏರಿಕೆ - Mangalore

ದ.ಕ.ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಯುವಕ ಬಲಿಯಾಗಿದ್ದು, ಇದರೊಂದಿಗೆ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ ಎಂಟಕ್ಕೆ ಏರಿದೆ.

Mangalore
ಕೊರೊನಾ ಸೋಂಕಿಗೆ ಯುವಕ ಬಲಿ

By

Published : Jun 14, 2020, 3:39 PM IST

ಮಂಗಳೂರು: ದ.ಕ.ಜಿಲ್ಲೆಯ ಯುವಕನೊಬ್ಬ ಕೊರೊನಾ ಸೋಂಕಿಗೆ ಬಲಿಯಾಗಿದ್ದು, ಇದರೊಂದಿಗೆ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ ಎಂಟಕ್ಕೆ ಏರಿದೆ.

ಮಹಾರಾಷ್ಟ್ರದಿಂದ ಆಗಮಿಸಿದ್ದ 26 ವರ್ಷದ ಈ ಯುವಕ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ. ಇತ್ತೀಚೆಗೆ ನಗರಕ್ಕೆ ಆಗಮಿಸಿದ್ದ ಈತನನ್ನು ‌ಮೇ 28 ಮತ್ತು 29 ರಂದು ಜಿಲ್ಲಾಡಳಿತದ ಅಧೀನ‌ ಕ್ವಾರೆಂಟೈನ್​ಲ್ಲಿ ಇರಿಸಲಾಗಿತ್ತು. ಬಳಿಕ ಜೂ.10 ರವರೆಗೆ ಹೋಮ್ ಕ್ವಾರೆಂಟೈನ್​ಗೆ ಒಳಗಾಗಿದ್ದ.

ದ.ಕ.ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಯುವಕ ಬಲಿ.

ಇನ್ನು ಜೂ‌.12ರಂದು ಅನಾರೋಗ್ಯದ ಹಿನ್ನೆಲೆಯಲ್ಲಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಕರೆತರುವಾಗ ಮಾರ್ಗಮಧ್ಯೆ ಯುವಕ ಮೃತಪಟ್ಟಿದ್ದ. ಬಳಿಕ ಈತನ ಗಂಟಲು ದ್ರವದ ಪರೀಕ್ಷೆಗೆ ರವಾನೆ ಮಾಡಲಾಗಿದ್ದು, ಇದರ ವರದಿ ಇಂದು ಬಂದಿದೆ. ಈ ಮೂಲಕ ಆತನಿಗೆ ಕೊರೊನಾ ಸೋಂಕು ಇರುವುದು ದೃಢಗೊಂಡಿದೆ.

ಯುವಕನಿಗೆ ಕಿಡ್ನಿ ಸಮಸ್ಯೆ ಇರುವುದು ಮುಂಬೈನಲ್ಲಿ ಇರುವಾಗಲೇ ತಿಳಿದಿತ್ತು. ಆತ ಚಿಕಿತ್ಸೆಗಾಗಿಯೇ ಮಂಗಳೂರಿಗೆ‌ ಆಗಮಿಸಿದ್ದ ಎಂದು ಮೂಲಗಳಿಂದ ತಿಳಿದು ಬಂದಿದೆ.

ABOUT THE AUTHOR

...view details