ಬೆಳ್ತಂಗಡಿ (ದಕ್ಷಿಣ ಕನ್ನಡ):ತಾಲೂಕಿನ ಶಿಶಿಲ ಗ್ರಾಮದ ಮುರತಗುಂಡಿ ಸೇತುವೆ ಬಳಿಯ ನದಿಗೆ ಸ್ನಾನ ಮಾಡಲೆಂದು ಹೋದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ನದಿಯಲ್ಲಿ ಸ್ನಾನ ಮಾಡಲೆಂದು ಹೋದ ವ್ಯಕ್ತಿ ನೀರುಪಾಲು - ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮ
ನದಿಯಲ್ಲಿ ಸ್ನಾನ ಮಾಡಲೆಂದು ಹೋದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದ ಮುರತಗುಂಡಿ ಸೇತುವೆ ಬಳಿ ನಡೆದಿದೆ.

ನದಿಗೆ ಸ್ನಾನ ಮಾಡಲೆಂದು ಹೋದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವು
ಶಿಶಿಲ ಗ್ರಾಮದ ಕಾರೆಗುಡ್ಡೆ ನಿವಾಸಿ ಕೆ.ಸುರೇಶ್ (32) ಮೃತ ವ್ಯಕ್ತಿ. ಇವರು ಡಿ. 31ರ ಸಂಜೆ 4.30ರ ಸುಮಾರಿಗೆ ಶಿಶಿಲ ಸೇತುವೆ ಬಳಿಯ ನದಿಗೆ ಸ್ನಾನ ಮಾಡಲು ತೆರಳಿದ್ದವರು ತಡ ರಾತ್ರಿವರೆಗೂ ವಾಪಸ್ ಬಾರದ ಹಿನ್ನೆಲೆ ಹುಡುಕಾಡಿದಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದು ತಿಳಿದು ಬಂದಿದೆ.
ಸುರೇಶ್ಗೆ ಮೂರ್ಛೆ ರೋಗವಿದ್ದು, ಸ್ನಾನ ಮಾಡುವಾಗ ಆಕಸ್ಮಿಕವಾಗಿ ನದಿಗೆ ಬಿದ್ದು ಮೃತಪಟ್ಟಿರುವ ಶಂಕೆಯಿದೆ. ಈ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.