ಕರ್ನಾಟಕ

karnataka

ETV Bharat / state

ಉಳ್ಳಾಲ: ಅಡ್ಡಾದಿಡ್ಡಿ ವಾಹನ ಚಾಲನೆ ಪ್ರಶ್ನಿಸಿದ ದಂಪತಿ ಮೇಲೆ ಮಾರಣಾಂತಿಕ ಹಲ್ಲೆ - ಚಾಲನೆ ಪ್ರಶ್ನಿಸಿದ ದಂಪತಿ ಮೇಲೆ ಮಾರಣಾಂತಿಕ ಹಲ್ಲೆ

ಸ್ಟೀವನ್‌ ಡಿಸೋಜ ದಂಪತಿ ತೊಕ್ಕೊಟ್ಟು ಚರ್ಚ್‌ನಿಂದ ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ನೆರೆಮನೆಯ ತಂಡ ಕಾರನ್ನು ಅಡ್ಡಾದಿಟ್ಟಿಯಾಗಿ ಚಲಾಯಿಸಿತ್ತು. ರಸ್ತೆ ಕೂಡ ದುರಸ್ತಿಯಲ್ಲಿದ್ದ ಕಾರಣ ದಂಪತಿ ಅಪಘಾತದಿಂದ ಸ್ವಲ್ಪದರಲ್ಲೇ ತಪ್ಪಿದ್ದಾರೆ. ಈ ಸಂಬಂಧ ಸ್ಟೀವನ್​​ ಪ್ರಶ್ನಿಸಿದ್ದರು. ಇದರಿಂದ ಕುಪಿತಗೊಂಡ ನೆರೆಮನೆಯವರು ಸ್ಟೀವನ್‌ ಮನೆಗೆ ನುಗ್ಗಿ ದಂಪತಿ ಮೇಲೆ ಕಟ್ಟಿಗೆಯಿಂದ ತಲೆ, ಕಾಲು, ಬೆನ್ನು, ಸೊಂಟದ ಭಾಗಕ್ಕೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

ಮಾರಣಾಂತಿಕ ಹಲ್ಲೆ
ಮಾರಣಾಂತಿಕ ಹಲ್ಲೆ

By

Published : Jan 2, 2021, 5:12 PM IST

ಉಳ್ಳಾಲ : ಮನಬಂದಂತೆ ವಾಹನ ಚಲಾಯಿಸಿದ್ದನ್ನು ಪ್ರಶ್ನಿಸಿದ ದಂಪತಿಗೆ ನೆರೆಮನೆಯ ನಾಲ್ವರು ಕಟ್ಟಿಗೆಯಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಉಳ್ಳಾಲದ ಹೊಯ್ಗೆ ಎಂಬಲ್ಲಿ ನಡೆದಿದೆ.

ಇಲ್ಲಿನ ನಿವಾಸಿ ಸ್ಟೀವನ್‌ ಡಿಸೋಜ (40) ಹಾಗೂ ಪತ್ನಿ ವೀಣಾ ಡಿಸೋಜ (30) ಹಲ್ಲೆಗೊಳಗಾದವರು. ನೆರೆಮನೆಯ ಪ್ರಕಾಶ್‌ ಡಿಸೋಜ, ಮಧುಜೀವನ್‌ ಡಿಸೋಜ ಆತನ ಪತ್ನಿ ಕೀರ್ತಿ ಡಿಸೋಜ ಹಾಗೂ ಚೇತನ್‌ ಡಿಸೋಜ ಹಲ್ಲೆ ನಡೆಸಿದ್ದಾರೆ ಎಂದು ಹಲ್ಲೆಗೊಳಗಾದ ದಂಪತಿ ಆರೋಪಿಸಿದ್ದಾರೆ.

ಸ್ಟೀವನ್‌ ಡಿಸೋಜ ದಂಪತಿ ತೊಕ್ಕೊಟ್ಟು ಚರ್ಚ್‌ನಿಂದ ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ನೆರೆಮನೆಯ ತಂಡ ಕಾರನ್ನು ಅಡ್ಡಾದಿಟ್ಟಿಯಾಗಿ ಚಲಾಯಿಸಿತ್ತು. ರಸ್ತೆ ಕೂಡ ದುರಸ್ತಿಯಲ್ಲಿದ್ದ ಕಾರಣ ದಂಪತಿ ಅಪಘಾತದಿಂದ ಸ್ವಲ್ಪದರಲ್ಲೇ ತಪ್ಪಿದ್ದಾರೆ. ಈ ಸಂಬಂಧ ಸ್ಟೀವನ್​​ ಪ್ರಶ್ನಿಸಿದ್ದರು. ಇದರಿಂದ ಕುಪಿತಗೊಂಡ ನೆರೆಮನೆಯವರು ಸ್ಟೀವನ್‌ ಮನೆಗೆ ನುಗ್ಗಿ ದಂಪತಿ ಮೇಲೆ ಕಟ್ಟಿಗೆಯಿಂದ ತಲೆ, ಕಾಲು, ಬೆನ್ನು, ಸೊಂಟದ ಭಾಗಕ್ಕೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ಇಬ್ಬರು ಉಳ್ಳಾಲದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.

ಈ ಸಂಬಂಧ ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details