ಕರ್ನಾಟಕ

karnataka

ETV Bharat / state

ಕುಡ್ಲದಲ್ಲಿ ಡೆಂಗ್ಯು ಮಹಾಮಾರಿಗೆ ಮಹಿಳೆ ಬಲಿ... 70 ಮಂದಿ ಶಂಕಿತರು ಆಸ್ಪತ್ರೆಗೆ - ಮಂಗಳೂರಿನ ಮಂಕಿಸ್ಟ್ಯಾಂಡ್ ರಸ್ತೆ

ದಿನ ಕಳೆದಂತೆ ಹೆಚ್ಚಾಗುತ್ತಿರುವ ಡೆಂಗ್ಯು ಮಹಾಮಾರಿಯಿಂದ ಜನರನ್ನು ರಕ್ಷಿಸಲು ಹೆಚ್ಚಿನ ಮುಂಜಾಗೃತಾ ಕ್ರಮ ವಹಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜರವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಜೀವ ತೆಗೆಯುತ್ತಿರುವ  ಡೆಂಗ್ಯು ಮಹಾಮಾರಿ

By

Published : Aug 9, 2019, 1:52 AM IST

ಮಂಗಳೂರು: ನಗರದ ಮಂಕಿಸ್ಟ್ಯಾಂಡ್ ರಸ್ತೆ ಬಳಿಯ ಮಹಿಳೆಯೋರ್ವರು ಶಂಕಿತ ಡೆಂಗ್ಯುವಿನಿಂದ ಇಂದು ಕೆಎಂಸಿ ಆಸ್ಪತ್ರೆಯಲ್ಲಿ ನಿಧನರಾದರು.

ಮಂಕಿಸ್ಟ್ಯಾಂಡ್ ರಸ್ತೆ ಬಳಿ ನಿವಾಸಿ ಸದಾಶಿವರ ಎಂಬುವರ ಪತ್ನಿ ಲೀಲಾವತಿ(54) ಮೃತರು. ವಿಪರೀತ ಜ್ವರದಿಂದ ಬಳಲುತ್ತಿದ್ದ ಅವರನ್ನು‌ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ.

ಮಂಗಳೂರಿನ ಮಂಗಳಾದೇವಿ ಸಮೀಪದ ಮಂಕಿಸ್ಟ್ಯಾಂಡ್, ಅರೆಕೆರೆಬೈಲು, ಗೋರಕ್ಷದಂಡು ಮುಂತಾದ ಪ್ರದೇಶಗಳಲ್ಲಿ ಡೆಂಗ್ಯು ತೀವ್ರವಾಗಿ ವ್ಯಾಪಿಸಿದ್ದು, ಇಲ್ಲಿನ ಸುಮಾರು 70ಕ್ಕೂ ಅಧಿಕ ಮಂದಿ ಶಂಕಿತ ಡೆಂಗ್ಯುವಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಅವರಲ್ಲಿ ಹೆಚ್ಚಿನವರು ಗುಣಮುಖರಾಗಿ ಆಸ್ಪತ್ರೆಯಿಂದ ತೆರಳಿದ್ದಾರೆ.

ಇನ್ನೂ ಡೆಂಗ್ಯುವಿಗೆ ಬಲಿಯಾಗುವವರ ಸಂಖ್ಯೆ ಕೂಡ ದಿನಂಪ್ರತಿ ಹೆಚ್ಚಾಗುತ್ತಿದ್ದು, ಈ ಬಗ್ಗೆ ಹೆಚ್ಚಿನ ಮುಂಜಾಗೃತಾ ಕ್ರಮ ವಹಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜರವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ABOUT THE AUTHOR

...view details