ಕರ್ನಾಟಕ

karnataka

ETV Bharat / state

ಉಳ್ಳಾಲದ ಬಾವಿಯಲ್ಲಿ ಬೆಂಗಳೂರು ಯುವಕನ ಮೃತದೇಹ ಪತ್ತೆ - ಉಳ್ಳಾಲ ಪೊಲೀಸ್

ಬೆಂಗಳೂರು ಮೂಲದ ಯುವಕನ ಮೃತದೇಹ ತೊಕ್ಕೊಟ್ಟು ಸಮೀಪದ ಬಾವಿಯಲ್ಲಿ ಪತ್ತೆಯಾಗಿದೆ. ಉಳ್ಳಾಲ ಪೊಲೀಸರಿಂದ ತನಿಖೆ ಆರಂಭ.

dead body of bangalore youth found in well
ಬಾವಿಯಲ್ಲಿ ಬೆಂಗಳೂರು ಯುವಕನ ಮೃತದೇಹ ಪತ್ತೆ....

By

Published : Dec 4, 2022, 8:44 PM IST

ಉಳ್ಳಾಲ(ದಕ್ಷಿಣ ಕನ್ನಡ): ಬೆಂಗಳೂರು ಮೂಲದ ಯುವಕನ ಮೃತದೇಹ ಅನುಮಾಬನಾಸ್ಪದವಾಗಿ ಉಳ್ಳಾಲ ತಾಲೂಕಿನ ತೊಕ್ಕೊಟ್ಟು ಹತ್ತಿರದ ಬಾವಿಯಲ್ಲಿ ಪತ್ತೆಯಾಗಿದೆ.

ಮೃತ ವ್ಯಕ್ತಿಯ ಹೆಸರು ಮಹಾಂತೇಶ್​​(36) ಮೂಲತಃ ಹಾಸನ ಜಿಲ್ಲೆಯ ಅರಸೀಕೆರೆ ನಿವಾಸಿ, ಸದ್ಯ ಬೆಂಗಳೂರಿನಲ್ಲಿ ವಾಸವಾಗಿದ್ದರು. ನ.30 ರಂದು ಬೆಂಗಳೂರಿನಿಂದ ತೊಕ್ಕೊಟ್ಟು ಬಂದಿದ್ದ ಮಹಾಂತೇಶ್ ಲಾಡ್ಜ್​ನಲ್ಲಿ ತಂಗಿದ್ದರಂತೆ.

ಅಂದು ರಾತ್ರಿ ಲಾಡ್ಜ್​ನಿಂದ ತೆರಳಿದವರು ವಾಪಸಾಗಿರಲಿಲ್ಲ. ಡಿ.1 ರಂದು ಸಂಜೆ ಲಾಡ್ಜ್ ರೂಮಿನ ಅವಧಿ ಮುಗಿದ ಹಿನ್ನೆಲೆ ರೂಮ್ ಬಾಯ್ ರೂಮಿಗೆ ಬಂದು ತಪಾಸಣೆ ನಡೆಸಿದಾಗ ಮಹಾಂತೇಶ್ ಇರಲಿಲ್ಲ.

ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ನ.2 ರಂದು ಮಹಾಂತೇಶ್ ಸಹೋದರಿ ಉಳ್ಳಾಲ ಠಾಣೆಯಲ್ಲಿ ಸಹೋದರನ ನಾಪತ್ತೆ ಕುರಿತು ದೂರು ದಾಖಲಿಸಿದ್ದರು.

ಹೆದ್ದಾರಿ ಅಂಚಿನಲ್ಲಿರುವ ಅಬ್ದುಲ್ ಸಮದ್ ಎಂಬುವರ ಮನೆಯ ಹಿಂದಿನ ಬಾವಿಯಲ್ಲಿ ಮಹಾಂತೇಶ್ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮನೆ ಕೆಲಸದಾಕೆ ಬಾವಿಯೊಳಗೆ ದುರ್ವಾಸನೆ ಬರುತ್ತಿರುವುದನ್ನ ಗಮನಿಸಿ ಬಾವಿ ನೋಡಿದಾಗ ಅಪರಿಚಿತ ವ್ಯಕ್ತಿಯ ಶವ ಕಂಡಿದ್ದಾರೆ.

ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಉಳ್ಳಾಲ ಪೊಲೀಸರು ಕೊಳೆತ ಶವವನ್ನು ಹರಸಾಹಸ ಪಟ್ಟು ಮೇಲಕ್ಕೆತ್ತಿದ್ದಾರೆ. ಉಳ್ಳಾಲ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ:ಬರ್ತ್​ಡೇ ಪಾರ್ಟಿಗೆ ತೆರಳಿದ್ದ ಬಾಲಕಿ ವಾಪಸ್​ ಬಂದಿದ್ದು ಶವವಾಗಿ..!

ABOUT THE AUTHOR

...view details