ಉಳ್ಳಾಲ: ಸರ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ವರ್ಷಗಳಿಂದ ಜೈಲಿನಲ್ಲಿದ್ದು, ಸೋಮವಾರವಷ್ಟೇ ಜೈಲಿನಿಂದ ಬಿಡುಗಡೆಗೊಂಡ ವ್ಯಕ್ತಿ ರೈಲು ಡಿಕ್ಕಿ ಹೊಡೆದು ಸಾವನ್ನಪ್ಪಿರುವ ಘಟನೆ ತೊಕ್ಕೊಟ್ಟು ರೈಲ್ವೆ ಹಳಿ ಹತ್ತಿರ ಮಂಗಳವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ಬಜಾಲು ನಿವಾಸಿ ರಾಜೇಶ್ (48) ಮೃತಪಟ್ಟವರು. ಕಾವೂರು ಹಾಗೂ ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳವು ಪ್ರಕರಣಕ್ಕೆ ಸಂಬಂಧಿಸಿ ರಾಜೇಶ್ ಎರಡು ವರ್ಷಗಳಿಂದ ಮಂಗಳೂರು ಜೈಲಿನಲ್ಲಿದ್ದರು. ಮನೆ ಮಂದಿಯೂ ಜಾಮೀನಿಗೆ ಅರ್ಜಿ ಹಾಕುವ ಪ್ರಯತ್ನ ಮಾಡದೇ ಇದ್ದುದರಿಂದ ಜೈಲಿನಲ್ಲೇ ಉಳಿದುಕೊಂಡಿದ್ದರು.