ಸುಬ್ರಹ್ಮಣ್ಯ(ದಕ್ಷಿಣ ಕನ್ನಡ): ಸುಳ್ಯ ತಾಲೂಕಿನ ಗುತ್ತಿಗಾರು-ಬಳ್ಪ ರಕ್ಷಿತಾರಣ್ಯದ ಮೂಲಕ ಹಾದು ಹೋಗುವ ರಸ್ತೆ ಬದಿಯಲ್ಲಿ ಮಂಗಗಳ ಕಳೇಬರ ಪತ್ತೆಯಾಗಿದೆ. ಸುಮಾರು 30ಕ್ಕೂ ಅಧಿಕ ಮಂಗಗಳು ಸತ್ತು ಬಿದ್ದಿರುವ ಸ್ಥಿತಿಯಲ್ಲಿದ್ದವು. ಈ ಘಟನೆ ಗುರುವಾರ ಮಧ್ಯಾಹ್ನದ ವೇಳೆ ಸಾಮಾಜಿಕ ಜಾಲತಾಣಗಳ ಮೂಲಕ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿ ಆಗಮಿಸಿ ಮಾಹಿತಿ ಪಡೆದಿದ್ದಾರೆ.
ಸುಬ್ರಹ್ಮಣ್ಯ: ಗುತ್ತಿಗಾರು-ಬಳ್ಪ ರಸ್ತೆ ಬದಿ 30ಕ್ಕೂ ಅಧಿಕ ಮಂಗಗಳ ಕಳೇಬರ ಪತ್ತೆ
ಸುಬ್ರಹ್ಮಣ್ಯಕ್ಕೆ ತೆರಳುವ ಗುತ್ತಿಗಾರು-ಬಳ್ಪ ರಸ್ತೆ ಬದಿಯಲ್ಲಿ ಸುಮಾರು 30ಕ್ಕೂ ಅಧಿಕ ಮಂಗಗಳು ಸತ್ತು ಬಿದ್ದಿರುವ ಸ್ಥಿತಿಯಲ್ಲಿ ಪತ್ತೆಯಾಗಿವೆ.
Published : Dec 15, 2023, 10:16 PM IST
ಎಲ್ಲೋ ಮಂಗಗಳನ್ನು ಕೊಂದು ಕಾಡೊಳಗೆ ತಂದು ಹಾಕಿರುವ ಶಂಕೆ ವ್ಯಕ್ತವಾಗಿದ್ದು, ಅರಣ್ಯ ಇಲಾಖೆ ಸಮಗ್ರ ತನಿಖೆ ನಡೆಸುತ್ತಿದೆ. ಘಟನೆ ತಿಳಿದ ನಂತರ ಕಳೇಬರಗಳನ್ನು ಯೇನೆಕಲ್ಲು ನರ್ಸರಿಗೆ ಸಾಗಾಟ ಮಾಡಿದ್ದು, ಶುಕ್ರವಾರ ಬೆಂಗಳೂರು ಮತ್ತು ಮಂಗಳೂರಿನ ಎಫ್ಎಸ್ಎಲ್‌ನಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಇದರಿಂದ ಮಂಗಗಳ ಸಾವಿಗೆ ನಿಖರವಾದ ಕಾರಣ ತಿಳಿದುಬರಲಿದೆ. ಅರಣ್ಯ ಇಲಾಖೆಯು ಪ್ರಕರಣ ದಾಖಲಿಸಿ ತನಿಖೆ ನಡೆಸಲಿದೆ ಎಂದು ಅರಣ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಕೋತಿಗಳ ಹಾವಳಿಗೆ ಬೇಸತ್ತ ಜನ.. ಛಾವಣಿ ಮೇಲಿಂದ ವೃದ್ಧನನ್ನು ತಳ್ಳಿದ ಮಂಗ! ವಿಡಿಯೋ..