ಕರ್ನಾಟಕ

karnataka

ETV Bharat / state

ಚಂಪಾಷಷ್ಠಿ ದಿನ ಹೊರರಾಜ್ಯದ ಭಕ್ತರಿಗೆ ಕುಕ್ಕೆ ಸುಬ್ರಹ್ಮಣ್ಯ ಪ್ರವೇಶ ನಿಷೇಧ - ಕಡಬ ಸುದ್ದಿ

ಕುಕ್ಕೆ ಸುಬ್ರಹ್ಮಣ್ಯಕ್ಕೆ ಚಂಪಾಷಷ್ಠಿ ಸಮಯದಲ್ಲಿ ಹೊರಜಿಲ್ಲಾ ಮತ್ತು ಹೊರ ರಾಜ್ಯದ ಭಕ್ತರ ಪ್ರವೇಶ ನಿರ್ಬಂಧ ವಿಧಿಸಿರುವ ಬಗ್ಗೆ ಜಿಲ್ಲಾಧಿಕಾರಿಗಳು ಮಾಧ್ಯಮದ ಜೊತೆಗೆ ಮಾತನಾಡಿದರು.

kukke
ಕುಕ್ಕೆ ಸುಬ್ರಹ್ಮಣ್ಯ

By

Published : Dec 17, 2020, 8:16 PM IST

ಕಡಬ(ದಕ್ಷಿಣ ಕನ್ನಡ): ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಅವರು ಕಡಬ ತಾಲೂಕು ಕಚೇರಿಗೆ ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದರು.

ಕಡಬ ತಾಲೂಕು ಕಚೇರಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ

ನೂತನ ಕಡಬ ತಾಲೂಕು ಘೋಷಣೆಯಾದ ಬಳಿಕ ಇದು ಜಿಲ್ಲಾಧಿಕಾರಿಕಾರಿಗಳ ಮೊದಲ ಭೇಟಿಯಾಗಿತ್ತು. ನೂತನ ಕಡಬ ತಾಲೂಕು ಘೋಷಣೆಯಾದರೂ ಇಲ್ಲಿ ಯಾವುದೇ ಇಲಾಖಾ ಕಚೇರಿಗಳು ಕಾರ್ಯನಿರ್ವಹಿಸುತ್ತಿಲ್ಲ ಎನ್ನುವ ದೂರುಗಳು ಜಿಲ್ಲಾಧಿಕಾರಿಗಳಿಗೆ ಸಲ್ಲಿಕೆಯಾಗಿವೆ. ಮಾತ್ರವಲ್ಲದೇ ಸರಕಾರಿ ಆಸ್ಪತ್ರೆಯ ಅವ್ಯವಸ್ಥೆ, ಪಟ್ಟಣ ಪಂಚಾಯತ್ ಅವ್ಯವಸ್ಥೆಗಳು, ಅಕ್ರಮ ಮರಳುಗಾರಿಕೆ, ಕಂದಾಯ ಇಲಾಖೆ, ತಾಲೂಕು ಕಚೇರಿಗಳಲ್ಲಿ ಕೆಲಸ ವಿಳಂಬ ಮತ್ತು ಮಧ್ಯವರ್ತಿಗಳ ಹಾವಳಿ, ಕಡಬದ ರಸ್ತೆ ಬದಿಯ ಮೀನು ಮಾರಾಟ ಮಾರುಕಟ್ಟೆಗೆ ಸ್ಥಳಾಂತರವಾಗದ ಬಗ್ಗೆಯೂ ಹೆಚ್ಚಿನ ದೂರುಗಳು ಸಾರ್ವಜನಿಕರು ನೀಡಿದ್ದಾರೆ.

ಇದನ್ನೂ ಓದಿ:ಕುಕ್ಕೆ‌ ಸುಬ್ರಹ್ಕಣ್ಯ ಷಷ್ಠಿ ಹಿನ್ನೆಲೆ: ಡಿ. 17 ರಿಂದ ನಾಲ್ಕು ದಿನ ದೇವಾಲಯ ಪ್ರವೇಶ ನಿಷೇಧ

ಸಾರ್ವಜನಿಕರ ಸಮಸ್ಯೆಗಳನ್ನು ಮತ್ತು ದೂರುಗಳನ್ನು ಸ್ವೀಕರಿಸಿ ನಂತರದಲ್ಲಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಚಂಪಾಷಷ್ಠಿ ಸಮಯದಲ್ಲಿ ಹೊರಜಿಲ್ಲೆ ಮತ್ತು ಹೊರ ರಾಜ್ಯದ ಭಕ್ತರ ಪ್ರವೇಶ ನಿರ್ಬಂಧ ವಿಧಿಸಿರುವ ಬಗ್ಗೆ ಜಿಲ್ಲಾಧಿಕಾರಿಗಳು ಮಾಧ್ಯಮದ ಜೊತೆಗೆ ಮಾತನಾಡಿ, ಕೆಲವು ಸಮಸ್ಯೆಗಳನ್ನು ಕೂಡಲೇ ಬಗೆಹರಿಸುವ ಮತ್ತು ಉನ್ನತ ಅಧಿಕಾರಿಗಳಿಗೆ ತಿಳಿಸಿ ಬಗೆಹರಿಸುವ ಸಮಸ್ಯೆಗಳನ್ನು ಅವರ ಗಮನಕ್ಕೆ ತಂದು ಪರಿಹಾರ ಕಲ್ಪಿಸುವ ವ್ಯವಸ್ಥೆ ಮಾಡಲಾಗುವುದು ಎಂದಿದ್ದಾರೆ.

ABOUT THE AUTHOR

...view details