ಕರ್ನಾಟಕ

karnataka

ETV Bharat / state

ದಸರಾ ರಜೆ ದಿನಾಂಕ ನಿಗದಿ: ದಕ್ಷಿಣ ಕನ್ನಡ ಶಾಲೆಗಳ ರಜೆ ದಿನಾಂಕದಲ್ಲಿ ಬದಲಾವಣೆ - ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಸರಾ ರಜೆ

ದಸರಾ ರಜೆ ದಿನಾಂಗ ನಿಗದಿ. ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಅಕ್ಟೋಬರ್ 3 ರಿಂದ 16 ಮತ್ತು ಪದವಿ ಪೂರ್ವಕ್ಕೆ ಅಕ್ಟೋಬರ್ 1 ರಿಂದ 13 ವರೆಗೆ ರಜೆ ನಿಗದಿಪಡಿಸಲಾಗಿತ್ತು. ಆದರೆ ದಕ್ಷಿಣ ಕನ್ನಡದಲ್ಲಿ ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 10 ರವರೆಗೆ ರಜೆ ಘೋಷಿಸಲಾಗಿದೆ.

ದಸರಾ ರಜೆ ದಿನಾಂಕ ನಿಗದಿ
ದಸರಾ ರಜೆ ದಿನಾಂಕ ನಿಗದಿ

By

Published : Sep 13, 2022, 5:00 PM IST

ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಸರಾ ರಜೆಯನ್ನು ಸೆ.26 ರಿಂದ ನೀಡಲು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಸೂಚಿಸಿದ್ದಾರೆ. ಈ‌ ವರ್ಷದ ಶೈಕ್ಷಣಿಕ ಕ್ಯಾಲೆಂಡರ್ ಪ್ರಕಾರ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಅಕ್ಟೋಬರ್ 3 ರಿಂದ 16 ಮತ್ತು ಪದವಿ ಪೂರ್ವಕ್ಕೆ ಅಕ್ಟೋಬರ್ 1 ರಿಂದ 13 ವರೆಗೆ ರಜೆ ನಿಗದಿಪಡಿಸಲಾಗಿತ್ತು.

ಆದರೆ, ಸ್ಥಳೀಯ ಸನ್ನಿವೇಶಗಳಿಗೆ ತಕ್ಕಂತೆ ಶೈಕ್ಷಣಿಕ ಮಾರ್ಗಸೂಚಿಯಲ್ಲಿ ನಿಗದಿಪಡಿಸಿದ ವೇಳಾಪಟ್ಟಿ ಮಾರ್ಪಾಡು ಮಾಡಿ ದಸರಾ ರಜೆ ನೀಡಲು ಸೂಚಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಸರಾ ರಜೆಯನ್ನು ನವರಾತ್ರಿ ಹಬ್ಬಕ್ಕೆ ಪೂರಕವಾಗುವಂತೆ ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 10 ರವರೆಗೆ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿ ಆದೇಶಿಸಿದ್ದಾರೆ.

ಈ ಸಂದರ್ಭದಲ್ಲಿ ಅಕ್ಟೋಬರ್ 2 ರಂದು ಗಾಂಧಿ ಜಯಂತಿ ಆಚರಿಸುವ ಷರತ್ತು ವಿಧಿಸಿ ಈ ಸೂಚನೆ ನೀಡಲಾಗಿದೆ.

(ಇದನ್ನೂ ಓದಿ: ಪ್ರೌಢಶಾಲಾ ಶಿಕ್ಷಕರ ನೇಮಕಾತಿಗೆ ಸರ್ಕಾರ ಆದೇಶ)

ABOUT THE AUTHOR

...view details