ಕರ್ನಾಟಕ

karnataka

ETV Bharat / state

"ಅನುಶ್ರೀ ಜೊತೆಗೆ ಮಾದಕ ವಸ್ತು ಸೇವನೆ ಮಾಡಿದ್ದೇವೆ": ಚಾರ್ಜ್​ಶೀಟ್​ನಲ್ಲಿ ಡ್ಯಾನ್ಸರ್ ಕಿಶೋರ್ ಹೇಳಿಕೆ ದಾಖಲು - Mangalore CCB Police

ಡ್ರಗ್ಸ್​​ ಕೇಸ್​ ಸಂಬಂಧ ಬಾಲಿವುಡ್ ನಟ ಕಂ ಡ್ಯಾನ್ಸರ್ ಕಿಶೋರ್ ಮತ್ತು ತರುಣ್ ಎಂಬವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ನಿರೂಪಕಿ ಅನುಶ್ರೀ ಕೂಡ ಡ್ರಗ್ಸ್ ಪಾರ್ಟಿಯಲ್ಲಿ ಭಾಗಿಯಾಗಿದ್ದರು ಎಂಬ ಹೇಳಿಕೆ ನೀಡಿದ್ದರು. ಇದನ್ನು ಚಾರ್ಜ್ ಶೀಟ್​ನಲ್ಲಿ ಉಲ್ಲೇಖಿಸಲಾಗಿದೆ.

Anchor Anushri
"ಅನುಶ್ರೀ

By

Published : Sep 8, 2021, 11:50 AM IST

ಮಂಗಳೂರು: ಆರು ತಿಂಗಳ ಹಿಂದೆ ಭಾರಿ ಸುದ್ದಿ ಮಾಡಿದ್ದ ಆ್ಯಂಕರ್ ಅನುಶ್ರೀ ಡ್ರಗ್ಸ್ ಪಾರ್ಟಿಯಲ್ಲಿ ಭಾಗಿಯಾಗಿದ್ದರು ಎಂಬ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಬಾಲಿವುಡ್ ನಟ ಕಂ ಡ್ಯಾನ್ಸರ್ ಕಿಶೋರ್ ಮತ್ತು ತರುಣ್ ಎಂಬವರನ್ನು ಬಂಧಿಸಿದ ವೇಳೆ ಅವರು ಅನುಶ್ರೀ ಕೂಡ ಡ್ರಗ್ಸ್ ಪಾರ್ಟಿಯಲ್ಲಿ ಭಾಗಿಯಾಗಿದ್ದರು ಎಂಬ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅನುಶ್ರೀಯನ್ನು ವಿಚಾರಣೆ ಮಾಡಿ ಕಳುಹಿಸಲಾಗಿತ್ತು.

ಈ ಪ್ರಕರಣದ ಚಾರ್ಜ್ ಶೀಟ್ ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದು ಇದರಲ್ಲಿ ಡ್ಯಾನ್ಸರ್ ಕಿಶೋರ್, ಅನುಶ್ರೀ ಕೂಡ ಡ್ರಗ್ಸ್ ಸೇವನೆ ಮಾಡಿದ್ದರು ಎಂದು ಹೇಳಿಕೆ ನೀಡಿರುವುದು ದಾಖಲಾಗಿದೆ.

ಚಾರ್ಜ್​ಶೀಟ್​ನಲ್ಲಿ ಡ್ಯಾನ್ಸರ್ ಕಿಶೋರ್ ಹೇಳಿಕೆ

ಹೇಳಿಕೆಯಲ್ಲಿ ಏನಿದೆ?: 'ಸುಮಾರು 2007-08ರ ಸಮಯದಲ್ಲಿ ಬೆಂಗಳೂರಿನ ಸಂಜಯ್​ ಎಂಬವರ ಮಾಲೀಕತ್ವದ ಎಕ್ಸೆಲೆನ್ಸಿ ಡ್ಯಾನ್ಸ್ ಅಕಾಡೆಮಿಯಲ್ಲಿದ್ದಾಗ ಟಿವಿ ಆ್ಯಂಕರ್ ಆಗಿರುವ ಅನುಶ್ರೀ ಅವರಿಗೆ ಕುಣಿಯೋಣ ಬಾರಾ ಡ್ಯಾನ್ಸ್ ನಲ್ಲಿ ಕೊರಿಯೋಗ್ರಾಫಿ ಮಾಡುತ್ತಿದ್ದ ನನ್ನ ಸ್ನೇಹಿತ ತರುಣ್ ನನ್ನನ್ನು ಅನುಶ್ರೀಗೆ ಪರಿಚಯ ಮಾಡಿಸಿದ್ದ. ಬಳಿಕ ನನ್ನಲ್ಲೂ ಕೊರಿಯೋಗ್ರಾಫಿ ಮಾಡಲು ಹೇಳಿದ್ದರಿಂದ ಕೊರಿಯೋಗ್ರಾಫಿ ಮಾಡಿದ್ದೆ. ಈ ಪ್ರೋಗ್ರಾಂನಲ್ಲಿ ಅನುಶ್ರೀ ವಿನ್ ಆಗಿದ್ದರು. ಡ್ಯಾನ್ಸ್ ಪ್ರಾಕ್ಟಿಸ್ ಮಾಡುವ ಸಮಯದಲ್ಲಿ ತರುಣ್ ಬಾಡಿಗೆ ಮನೆಯಲ್ಲಿ ತಡರಾತ್ರಿ ತನಕ ಪ್ರಾಕ್ಟಿಸ್ ಮಾಡುತ್ತಾ ಊಟ ಮಾಡುವ ಸಮಯದಲ್ಲಿ ಮಾದಕ ಪಿಲ್ಸ್​ಗಳನ್ನು ಸೇವನೆ ಮಾಡಿದ್ದೇವೆ. ಕೆಲವು ದಿನಗಳಲ್ಲಿ ಅನುಶ್ರೀ ಮತ್ತು ತರುಣ್ ಇಬ್ಬರೇ ರೂಂನಲ್ಲಿ ಉಳಿದುಕೊಳ್ಳುತ್ತಿದ್ದರು. ಈ ಪ್ರೋಗ್ರಾಂನಲ್ಲಿ ವಿಜಯಿಯಾದುದಕ್ಕೆ ನಾನು, ತರುಣ್ ಮತ್ತು ಅನುಶ್ರೀ ಬೆಂಗಳೂರಿನಲ್ಲಿ ಮಾದಕ ವಸ್ತು ಸೇವಿಸಿ ಡ್ರಿಂಕ್ಸ್ ಪಾರ್ಟಿ ಮಾಡಿದ್ದೇವೆ. ಇದರ ಖರೀದಿಯಲ್ಲಿ ಅನುಶ್ರೀ ಭಾಗಿಯಾಗಿದ್ದಾರೆ. ನಾವು ಹಲವಾರು ಬಾರಿ ಮಾದಕ ವಸ್ತುಗಳನ್ನು ಸೇವಿಸಿರುತ್ತೇವೆ. ಇದನ್ನು ಅನುಶ್ರೀ ಅವರೇ ಖರೀದಿಸಿ ತಂದು ನಮಗೆ ನೀಡುತ್ತಿದ್ದರು. ಇದನ್ನು ಸೇವನೆ ಮಾಡುವುದರಿಂದ ಡ್ಯಾನ್ಸ್ ಮಾಡಲು ಹೆಚ್ಚು ತಾಕತ್ತು ಕೊಡುತ್ತದೆ. ಇದರಿಂದ ಡ್ಯಾನ್ಸ್ ಮಾಡಲು ಖುಷಿ ಸಿಗುತ್ತದೆ. ಪ್ರಾಕ್ಟಿಸ್ ಮಾಡಲು ಸುಲಭವಾಗುತ್ತದೆ ಎಂದು ನಾವು ಮಾತಾಡುತ್ತಿದ್ದೆವು. ಡ್ರಗ್ಸ್ ಯಾರು ನೀಡುತ್ತಾರೆ ಎಂಬುದು ಅನುಶ್ರೀಯವರಿಗೆ ನಮಗಿಂತ ಹೆಚ್ಚು ತಿಳಿದಿದೆ' ಎಂದು ಕಿಶೋರ್ ನೀಡಿದ ಹೇಳಿಕೆ ಚಾರ್ಜ್ ಶೀಟ್​ನಲ್ಲಿ ದಾಖಲಾಗಿದೆ ಎಂದು ತಿಳಿದುಬಂದಿದೆ.

ABOUT THE AUTHOR

...view details