ಮಂಗಳೂರು :ನಾನು ಅನುಶ್ರೀ ಡ್ರಗ್ಸ್ ಪಾರ್ಟಿ ಮಾಡಿದ್ದಾರೆಂಬ ಹೇಳಿಕೆಯನ್ನು ನೀಡಿಲ್ಲ. ಚಾರ್ಜ್ಶೀಟ್ನಲ್ಲಿ ಇರುವುದೆಲ್ಲವೂ ಸಂಪೂರ್ಣ ಸುಳ್ಳು ಎಂದು ನಟ, ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯಿಂದ ಪ್ರಕರಣಕ್ಕೆ ಮಹತ್ತರ ತಿರುವು ಬಂದಿದೆ.
ಅನುಶ್ರೀ ವಿರುದ್ಧ ಹೇಳಿಕೆ ನೀಡಿಲ್ಲ ಎಂದ ಡ್ಯಾನ್ಸರ್ ಕಿಶೋರ್ ಅನುಶ್ರೀಗೂ ಡ್ರಗ್ಸ್ ಕೇಸ್ಗೂ ಯಾವುದೇ ಸಂಬಂಧ ಇಲ್ಲ. ನಾವು ಯಾವುದೇ ಡ್ರಗ್ಸ್ ಪಾರ್ಟಿ ಮಾಡಿಲ್ಲ. ಅನುಶ್ರೀ ಅಂತಹ ಹುಡುಗಿಯೂ ಅಲ್ಲ. ಅನುಶ್ರೀ ಜೊತೆ ಡ್ರಿಂಕ್ಸ್, ಡ್ರಗ್ಸ್ ಪಾರ್ಟಿ ಮಾಡಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ:Drugs Case : ಇಡಿ ಅಧಿಕಾರಿಗಳೆದುರು ವಿಚಾರಣೆಗೆ ಹಾಜರಾದ ಟಾಲಿವುಡ್ ನಟ ರಾಣಾ
ನಾನು ಅನುಶ್ರೀಗೆ ಕೇವಲ ಕೊರಿಯೋಗ್ರಾಫ್ ಮಾಡುತ್ತಿದ್ದೆ. ಹೊರತು ಅನುಶ್ರೀಯವರ ಜೊತೆಗೆ ಬೇರೆ ಯಾವುದೇ ಸಂಬಂಧವಿಲ್ಲ. ಈಗ ಹಬ್ಬಿರುವ ಸುಳ್ಳು ವಿಚಾರದ ಹಿಂದೆ ಬೇರೆ ಯಾರೋ ಇರಬಹುದು. ನಾನು ಎರಡು ಬಾರಿ ಡ್ರಗ್ಸ್ ತೆಗೆದುಕೊಂಡಿದ್ದೇನೆ. ಈಗ ಪ್ರತಿ ತಿಂಗಳು ಕೋರ್ಟ್ಗೆ ಹಾಜರಾಗುತ್ತಿದ್ದೇನೆ ಎಂದು ಕಿಶೋರ್ ಅಮನ್ ಶೆಟ್ಟಿ ಹೇಳಿದರು.
ಇದನ್ನೂ ಓದಿ:"ಅನುಶ್ರೀ ಜೊತೆಗೆ ಮಾದಕ ವಸ್ತು ಸೇವನೆ ಮಾಡಿದ್ದೇವೆ": ಚಾರ್ಜ್ಶೀಟ್ನಲ್ಲಿ ಡ್ಯಾನ್ಸರ್ ಕಿಶೋರ್ ಹೇಳಿಕೆ ದಾಖಲು