ಮಂಗಳೂರು: ಮಹಾನಗರ ಪಾಲಿಕೆಯ ಬಂಗ್ರಕೂಳೂರು, ಪಂಜಿಮೊಗರು ವಾರ್ಡ್ ವ್ಯಾಪ್ತಿಯಲ್ಲಿ ಗೋಲ್ಡ್ ಪಿಂಚ್ ಸಿಟಿ ಸಂಸ್ಥೆಯವರು ಅವೈಜ್ಞಾನಿಕ ಕಾಮಗಾರಿ ನಡೆಸಿರುವುದರಿಂದ ಮನಪಾದ ವೆಟ್ವೆಲ್ ಸಂಪರ್ಕದ ಒಳಚರಂಡಿ ಜಾಲ ಅಲ್ಲಲ್ಲಿ ಕಿತ್ತು ಹೋಗಿದ್ದು, ಇದರಿಂದ ಸಂಪೂರ್ಣ ಮಣ್ಣು ಮುಚ್ಚಿ ಮ್ಯಾನ್ ಹೋಲ್ ಹೂತು ಹೋಗಿದೆಯೆಂದು ಮನಪಾ ಮಾಜಿ ಸದಸ್ಯ ದಯಾನಂದ ಶೆಟ್ಟಿ ಆರೋಪಿಸಿದ್ದಾರೆ.
ಅವೈಜ್ಞಾನಿಕ ಕಾಮಗಾರಿಯಿಂದ ಒಳಚರಂಡಿ ವ್ಯವಸ್ಥೆಗೆ ಧಕ್ಕೆ: ದಯಾನಂದ ಶೆಟ್ಟಿ ಆರೋಪ - drainage system
ಮಂಗಳೂರಿನಲ್ಲಿ ಗೋಲ್ಡ್ ಪಿಂಚ್ ಸಿಟಿ ಸಂಸ್ಥೆಯವರು ಅವೈಜ್ಞಾನಿಕ ಕಾಮಗಾರಿ ನಡೆಸಿರುವುದರಿಂದ ಒಳಚರಂಡಿ ವ್ಯವಸ್ಥೆಗೆ ಧಕ್ಕೆಯಾಗಿದೆ ಎಂದು ಮನಪಾ ಮಾಜಿ ಸದಸ್ಯ ದಯಾನಂದ ಶೆಟ್ಟಿ ಆರೋಪಿಸಿದ್ದಾರೆ.
ಗೋಲ್ಡ್ ಪಿಂಚ್ ಸಿಟಿ ಸಂಸ್ಥೆಯ ಮೇಲೆ ಮನಪಾ ತಕ್ಷಣವೇ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಿ ಎಂದು ಆಗ್ರಹಿಸಿದ ಅವರು, ಡಿಸೆಂಬರ್ನಲ್ಲಿ ಪ್ರಕಾಶಾಭಿನಂದನ ಕಾರ್ಯಕ್ರಮ ನಡೆದ ಸಂದರ್ಭದಲ್ಲಿ ಈ ಕಾರ್ಯ ನಡೆದಿತ್ತು. ಇದರಿಂದ ಅಲ್ಲಿನ ಉರುಂದಾಡಿ, ವಿವೇಕನಗರ ಪ್ರದೇಶಗಳ ನೂರಾರು ಮನೆಗಳ ಒಳಚರಂಡಿ ನೀರು ಹರಿಯುವ ವ್ಯವಸ್ಥೆಗೆ ತೊಂದರೆಯಾಗಿದೆ. ಅಲ್ಲದೆ ಅಲ್ಲಿನ ನಿವಾಸಿಗಳಿಗೆ ಆರೋಗ್ಯ ಸಮಸ್ಯೆಗಳು ಉಲ್ಬಣವಾಗಿದೆ ಎಂದರು.
ಈ ಬಗ್ಗೆ ಗೋಲ್ಡ್ ಪಿಂಚ್ ಸಿಟಿ ಸಂಸ್ಥೆಯವರ ಗುತ್ತಿಗೆ ವಹಿಸಿಕೊಂಡವರಿಗೆ ಡಿಸೆಂಬರ್ನಲ್ಲೇ ಮನಪಾ ನೋಟಿಸ್ ಜಾರಿಗೊಳಿಸಿತ್ತು. ಆದರೂ ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ. ಅಲ್ಲದೆ ಒಳಚರಂಡಿ ಜಾಲ ನಮ್ಮ ಖಾಸಗಿ ಜಾಗದಲ್ಲಿದೆ ಎಂದು ಗೋಲ್ಡ್ ಪಿಂಚ್ ಸಿಟಿಯವರು ಸವಾಲು ಹಾಕುತ್ತಿದ್ದಾರೆ ಎಂದರು.