ಕರ್ನಾಟಕ

karnataka

ETV Bharat / state

ಗೃಹ ಪ್ರವೇಶಕ್ಕೆ ದಲಿತ ಸಮುದಾಯದ ಮಕ್ಕಳನ್ನು ಕರೆದೊಯ್ಯದ ಶಿಕ್ಷಕಿ ವಿರುದ್ಧ ಜಾತಿ ನಿಂದನೆ ಕೇಸ್​ - beltangady mangalore latest news

ಫೆ. 26 ರಂದು ಲಾಯಿಲ ಗ್ರಾಮದ ಪಡ್ಲಾಡಿ ಹಿ.ಪ್ರಾ.ಶಾಲೆಯ ಶಿಕ್ಷಕಿ ಪರಿಶಿಷ್ಟ ಜಾತಿ, ವರ್ಗಕ್ಕೆ ಸೇರಿದ ಮಕ್ಕಳನ್ನು ನಿಂದಿಸಿದ ಪ್ರಕರಣ ನಡೆದಿತ್ತು. ಸದ್ಯ ಪೋಷಕರ ದೂರಿನನ್ವಯ ಆರೋಪಿ ಶಿಕ್ಷಕಿ ಉಮಾ ರಾವ್ ಅವರ ವಿರುದ್ಧ ಎಟ್ರಾಸಿಟಿ‌ ಕೇಸ್ ದಾಖಲಿಸಿ, ತನಿಕೆ ನಡೆಸುತ್ತಿದ್ದಾರೆ.

Dalit Abuse Case: teacher arrested in Beltangady
ದಲಿತ ನಿಂದನೆ ಪ್ರಕರಣ: ಶಿಕ್ಷಕಿ ವಿರುದ್ಧ ಎಟ್ರಾಸಿಟಿ‌ ಕೇಸ್ ದಾಖಲು

By

Published : Mar 17, 2020, 7:50 AM IST

ಬೆಳ್ತಂಗಡಿ: ಇಲ್ಲಿನ ಲಾಯಿಲ ಗ್ರಾಮದ ಪಡ್ಲಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಶಿಷ್ಟ ಜಾತಿ, ವರ್ಗಕ್ಕೆ ಸೇರಿದ ಮಕ್ಕಳ ಮೇಲೆ ಜಾತಿ ಅಸ್ಪೃಶ್ಯತೆ ಮಾಡಲಾದ ಘಟನೆ ಕಳೆದ ಫೆ. 26 ರಂದು ನಡೆದಿದ್ದು, ಈ ಬಗ್ಗೆ ಶಿಕ್ಷಕಿಯ ವಿರುದ್ಧ ಬೆಳ್ತಂಗಡಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಫೆ. 26 ರಂದು ಲಾಯಿಲ ಗ್ರಾಮದ ಪಡ್ಲಾಡಿ ಹಿ.ಪ್ರಾ.ಶಾಲೆಯ ಸಮೀಪದ ಮೇಲ್ಜಾತಿಯ ಕುಟುಂಬದ ಗೃಹಪ್ರವೇಶ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮಕ್ಕೆ ಶಾಲೆಯ ಹಿರಿಯ ಶಿಕ್ಷಕಿ ಉಮಾ ರಾವ್ ಅವರು ದಲಿತ ಸಮುದಾಯಕ್ಕೆ ಸೇರಿದ ಮಕ್ಕಳನ್ನು ಶಾಲೆಯಲ್ಲಿಯೇ ಬಿಟ್ಟು ಉಳಿದ ಮಕ್ಕಳನ್ನು ಕರೆದುಕೊಂಡು ಹೋಗುವ ಮೂಲಕ ಎಳೆಯ ವಯಸ್ಸಿನ ಮಕ್ಕಳ ನಡುವೆ ಜಾತಿ ಅಸ್ಪ್ರಶ್ಯತೆಯನ್ನು ಪ್ರದರ್ಶಿಸಿದ್ದರು.

ಮಕ್ಕಳು ಮನೆಗೆ ಬಂದು ತಮ್ಮನ್ನು ಮಾತ್ರ ಶಾಲೆಯಲ್ಲಿ ಬಿಟ್ಟು ಉಳಿದವರನ್ನು ಕರೆದುಕೊಂಡು ಹೋದ ವಿಚಾರವನ್ನು ತಿಳಿಸಿದ್ದಾರೆ. ಈ ಬಗ್ಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಪೋಷಕರು ದೂರು ನೀಡಿದ್ದರೂ ಕೂಡಾ ಅವರು ಯಾವುದೇ ಕ್ರಮವನ್ನು ಕೈಗೊಂಡಿರಲಿಲ್ಲ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಸದ್ಯ ನೊಂದ ಮಕ್ಕಳ ಪೋಷಕರು ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದರು.

ಇದೀಗ ಪೊಲೀಸರು ಪ್ರಕರಣದ ಬಗ್ಗೆ ಪ್ರಾಧಮಿಕ ತನಿಖೆಯನ್ನು ನಡೆಸಿದ್ದು, ಆರೋಪಿ ಶಿಕ್ಷಕಿ ಉಮಾ ರಾವ್ ಅವರ ವಿರುದ್ಧ ದಲಿತ ನಿಂದನೆ ಹಾಗೂ ಸಾರ್ವಜನಿಕ ಅಶಾಂತಿಗೆ ಕಾರಣವಾಗಿರುವ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಾಮದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗಿತ್ತು, ಈ ಬಗ್ಗೆ ಶಾಂತಿ ಸಭೆಯನ್ನು ವಿವಿಧ ಇಲಾಖೆಗಳ ಸಹಯೋಗದೊಂದಿಗೆ ನಡೆಸುವ ಚಿಂತನೆ ನಡೆಸಿದ್ದರೂ ಅದು ವಿವಿಧ ಕಾರಣಗಳಿಂದಾಗಿ ಸಾಧ್ಯವಾಗಿರಲಿಲ್ಲ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

ABOUT THE AUTHOR

...view details