ಕರ್ನಾಟಕ

karnataka

ETV Bharat / state

ವರ್ಷದ ಪ್ರಥಮ ಕಂಬಳಕ್ಕೆ ಅದ್ಧೂರಿ ಚಾಲನೆ : ಅಪ್ಪು ಹೆಸರಲ್ಲಿ ಕೋಣ ಓಡಿಸಿದ ಅಭಿಮಾನಿಗಳು

ಹೊಕ್ಕಾಡಿಗೋಳಿಯಲ್ಲಿ ಮಹಿಷಮರ್ಧಿನಿ ಕಂಬಳ ಸಮಿತಿಯಿಂದ ನಡೆಯುವ ಇತಿಹಾಸ ಪ್ರಸಿದ್ಧ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ದಿ.ಪುನೀತ್​ ರಾಜಕುಮಾರ್​ ಹೆಸರಲ್ಲಿ ಕೋಣ ಓಡಿಸುವ ಮೂಲಕ ಅಭಿಮಾನ ಮೆರೆಯಲಾಯಿತು.

ವರ್ಷದ ಪ್ರಥಮ ಕಂಬಳಕ್ಕೆ ಅದ್ಧೂರಿ ಚಾಲನೆ
ವರ್ಷದ ಪ್ರಥಮ ಕಂಬಳಕ್ಕೆ ಅದ್ಧೂರಿ ಚಾಲನೆ

By

Published : Dec 5, 2021, 6:53 PM IST

ಬಂಟ್ವಾಳ (ದ.ಕ.): ಕೋಣಗಳ ಓಟವಿರುವ ದಕ್ಷಿಣ ಕನ್ನಡ ಜಿಲ್ಲೆಯ ಜಾನಪದ ಕ್ರೀಡೆ ಕಂಬಳದ ಸರಣಿಯ ಮೊದಲ ಕಂಬಳ ಬಂಟ್ವಾಳ ತಾಲೂಕಿನ ಹೊಕ್ಕಾಡಿಗೋಳಿಯಲ್ಲಿ ಶನಿವಾರದಿಂದ ಆರಂಭವಾಗಿದೆ.

ವರ್ಷದ ಪ್ರಥಮ ಕಂಬಳಕ್ಕೆ ಅದ್ಧೂರಿ ಚಾಲನೆ

ವೀರ ವಿಕ್ರಮ ಬಯಲು ಕಂಬಳ ಹೆಸರಲ್ಲಿ ಆರಂಭಗೊಂಡ ಈ ಕ್ರೀಡೆಯಲ್ಲಿ ಪುನೀತ್ ಹೆಸರಲ್ಲಿ ಅವರ ಅಭಿಮಾನಿಗಳು ಕೋಣ ಓಡಿಸಿ ಗಮನ ಸೆಳೆದರು. ಹೊಕ್ಕಾಡಿಗೋಳಿ ಕುಂಜಾಡಿ ಯಶೋಧರ ಮಹಾಬಲ ಪೂಜಾರಿ ಹಾಗೂ ಕಿರಣ್ ಮಂಜಿಲ ಇವರಿಬ್ಬರು ತಮ್ಮ ಅಚ್ಚುಮೆಚ್ಚಿನ "ಅಪ್ಪು" ಹೆಸರಲ್ಲಿ ಕಂಬಳಕರೆಯಲ್ಲಿ ಕೋಣಗಳನ್ನು ಓಡಿಸಿ ಅಭಿಮಾನ ಮೆರೆದರು.

ಹೊಕ್ಕಾಡಿಗೋಳಿಯಲ್ಲಿ ಮಹಿಷಮರ್ಧಿನಿ ಕಂಬಳ ಸಮಿತಿಯಿಂದ ನಡೆಯುವ ಇತಿಹಾಸ ಪ್ರಸಿದ್ಧ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳವಿದು. ಪೂಂಜ ಕ್ಷೇತ್ರದ ಆಸ್ರಣ್ಣ ಕೃಷ್ಣ ಪ್ರಸಾದ್ ಆಚಾರ್ಯ ಕಂಬಳ ಉದ್ಘಾಟಿಸಿದರು.

ಕಂಬಳ ಸಮಿತಿ ಅಧ್ಯಕ್ಷ ನೋಣಾಲ್ಗುತ್ತು ರಶ್ಮಿತ್ ಶೆಟ್ಟಿ ಕೈತ್ರೋಡಿ ಅಧ್ಯಕ್ಷತೆ ವಹಿಸಿದ್ದರು. ಓಟದ ಕೋಣಗಳನ್ನು ಕೊಂಬು, ಬ್ಯಾಂಡ್, ವಾದ್ಯಗಳ ಘೋಷದೊಂದಿಗೆ ಸಾಂಪ್ರದಾಯಿಕವಾಗಿ ಕಂಬಳ ಕರೆಗೆ ಇಳಿಸಲಾಯಿತು. ಕೋಣಗಳ ಹಣೆಗೆ ಕುಂಕುಮ ಹಚ್ಚಿ, ಅವುಗಳ ಮಾಲೀಕರಿಗೆ ಅಡಿಕೆ ಸಹಿತ ವೀಳ್ಯೆದೆಲೆ ನೀಡಿ ಕಂಬಳ ಪದಾಧಿಕಾರಿಗಳು ಸ್ವಾಗತಿಸಿದರು.

ABOUT THE AUTHOR

...view details