ಕರ್ನಾಟಕ

karnataka

ನಾಳೆ ಕೇಂದ್ರ ಬಜೆಟ್​; ದಕ್ಷಿಣ ಕನ್ನಡದ ಜನರಲ್ಲಿ ಹಲವು ನಿರೀಕ್ಷೆ: ಐಸಕ್ ವಾಸ್

ಈ ಬಜೆಟ್​ ದಕ್ಷಿಣ ಕನ್ನಡ ಜಿಲ್ಲೆಯ ಜನರಲ್ಲಿ ಹಲವು ನಿರೀಕ್ಷೆಗಳನ್ನು ಮೂಡಿಸಿದೆ ಎಂದು ಕೆನರಾ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿಯ ಅಧ್ಯಕ್ಷರಾದ ಐಸಕ್ ವಾಸ್ ಹೇಳಿದ್ದಾರೆ.

By

Published : Jan 31, 2020, 7:45 PM IST

Published : Jan 31, 2020, 7:45 PM IST

union-budget
union-budget

ಮಂಗಳೂರು: ನಾಳೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಈ ಬಜೆಟ್​ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ನಿರೀಕ್ಷೆಗಳನ್ನು ಮೂಡಿಸಿದೆ ಎಂದು ಕೆನರಾ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿಯ ಅಧ್ಯಕ್ಷರಾದ ಐಸಕ್ ವಾಸ್ ಹೇಳಿದ್ದಾರೆ.

ಕೇಂದ್ರ ಬಜೆಟ್​-2020

ಈ ಕುರಿತು ಮಾತನಾಡಿದ ಅವರು, ವಾಣಿಜ್ಯ ನಗರವಾಗಿರುವ ಮಂಗಳೂರಿನಲ್ಲಿ ವ್ಯವಹಾರ ವೃದ್ದಿಗೆ ದೊಡ್ಡ ತೊಡಕಾಗಿರುವುದು ಸಂಚಾರ ಅವ್ಯವಸ್ಥೆ. ಬಸ್ಸು, ರೈಲು, ವಿಮಾನ ಸಂಪರ್ಕ ಇದ್ದರೂ ಸುಸಜ್ಜಿತ ಸಂಪರ್ಕ ವ್ಯವಸ್ಥೆ ಕೊರತೆ ಇದೆ. ಇದಕ್ಕಾಗಿ ಹಳೆ ಬೇಡಿಕೆಯಾಗಿರುವ ಬೆಂಗಳೂರು-ಮಂಗಳೂರು ಮಧ್ಯೆ ಟನೆಲ್ ನಿರ್ಮಾಣ ಯೋಜನೆ ಮಾಡಬೇಕಾಗಿದೆ. ರಾಜಧಾನಿ ಬೆಂಗಳೂರು ಸಂಪರ್ಕಕ್ಕೆ ಟನೆಲ್ ನಿರ್ಮಾಣದಿಂದ ಬಹಳಷ್ಟು ಕೊಡುಗೆಯಾಗಲಿದೆ. ಆದರೆ ಇದಕ್ಕೆ ಹಣವನ್ನು ಮಂಜೂರು ಮಾಡಬೇಕಾದದ್ದು ಕೇಂದ್ರ ಸರಕಾರ. ಈ ಬಜೆಟ್​ನಲ್ಲಿ ಅದಕ್ಕೆ ಹಣ ತೆಗೆದಿರಿಸುವ ವಿಶ್ವಾಸ ಹೊಂದಲಾಗಿದೆ ಎಂದರು.

ಜೊತೆಗೆ ಬೆಂಗಳೂರು-ಮಂಗಳೂರು ನಡುವೆ ರೈಲ್ವೆ ಸಂಚಾರದ ಉತೇಜನಕ್ಕೂ ಬಜೆಟ್​ನಲ್ಲಿ ನಿರೀಕ್ಷೆ ಹೊಂದಲಾಗಿದೆ. ಮಂಗಳೂರಿನಲ್ಲಿ ಕೈಗಾರಿಕೆಗಳಿಗೆ ಬೇಕಾದ ಜಾಗಗಳು ಸಿಗುತ್ತಿಲ್ಲ ಎಂಬುದು ಮತ್ತೊಂದು ಸಮಸ್ಯೆ. ಇದಕ್ಕೆ ಬೇಕಾದ ಹಣಕಾಸು ವ್ಯವಸ್ಥೆ ಈ ಬಜೆಟ್​ನಲ್ಲಿ ಬರಲಿದೆ ಎಂಬುದು ಮತ್ತೊಂದು ನಿರೀಕ್ಷೆಯಾಗಿದೆ. ಸಾಗರಮಾಲ ಯೋಜನೆಯನ್ನು ಶೀಘ್ರ ಅನುಷ್ಠಾನ ಮಾಡಲು ಕ್ರಮ ಕೈಗೊಳ್ಳುವುದು ಹಾಗೂ ಎಪಿಎಂಸಿ ಹೊಸ ಕಾಯ್ದೆಯಿಂದ ರೈತರಿಗೆ ಪ್ರಯೋಜನವಿಲ್ಲ, ರಫ್ತು ಮಾಡುವವರಿಗೂ ಉಪಯೋಗ ಇಲ್ಲ. ವ್ಯಾಪಾರಿಗಳು ಇದರಿಂದ ತುಂಬಾ ಬಳಲುತ್ತಿದ್ದಾರೆ‌ ಈ ಬಗ್ಗೆಯು ಸರಿಯಾದ ನಿರ್ಧಾರ ಕೈಗೊಳ್ಳಬೇಕೆಂಬ ನಿರೀಕ್ಷೆಗಳನ್ನು ಈ ಬಾರಿಯ ಕೇಂದ್ರ ಬಜೆಟ್​ನಲ್ಲಿ ಇಡಲಾಗಿದೆ ಎಂದು ತಿಳಿಸಿದರು.



ABOUT THE AUTHOR

...view details