ಕರ್ನಾಟಕ

karnataka

ETV Bharat / state

ಪದ್ಮಶ್ರೀ ಕದ್ರಿ ಗೋಪಾಲನಾಥ್ ಪುಣ್ಯಸ್ಮರಣೆಯಲ್ಲಿ ಅಸ್ವಸ್ಥರಾದ ಪತ್ನಿ : ವೈದ್ಯರಾಗಿ ಚಿಕಿತ್ಸೆ ನೀಡಿದ ಜಿಲ್ಲಾಧಿಕಾರಿ - ವೈದ್ಯರಾಗಿ ಚಿಕಿತ್ಸೆ ನೀಡಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ

ಬಂಟ್ವಾಳ ತಾಲೂಕಿನ ಸಜೀಪದಲ್ಲಿ ಪದ್ಮಶ್ರೀ ಪುರಸ್ಕೃತ ಕದ್ರಿ ಗೋಪಾಲನಾಥ್ ಅವರ ಎರಡನೇ ವರ್ಷದ ಪುಣ್ಯಸ್ಮರಣೆ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ವೇಳೆ ಕದ್ರಿ ಗೋಪಾಲನಾಥ್ ಅವರ ಪತ್ನಿ ಸರೋಜಿನಿ‌ ಅವರು ಅಸ್ವಸ್ಥಗೊಂಡಿದ್ದರು. ಈ ವೇಳೆ ಸ್ಥಳದಲ್ಲಿದ್ದ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ ವಿ ಅವರು ಚಿಕಿತ್ಸೆ ನೀಡಿದರು.

ವೈದ್ಯರಾಗಿ ಚಿಕಿತ್ಸೆ ನೀಡಿದ ಜಿಲ್ಲಾಧಿಕಾರಿ
ವೈದ್ಯರಾಗಿ ಚಿಕಿತ್ಸೆ ನೀಡಿದ ಜಿಲ್ಲಾಧಿಕಾರಿ

By

Published : Dec 6, 2021, 10:59 PM IST

ಮಂಗಳೂರು : ಪದ್ಮಶ್ರೀ ಪುರಸ್ಕೃತ ಕದ್ರಿ ಗೋಪಾಲನಾಥ್ ಅವರ ಎರಡನೇ ವರ್ಷದ ಪುಣ್ಯಸ್ಮರಣೆಯಲ್ಲಿ ಅವರ ಪತ್ನಿ ಅಸ್ವಸ್ಥರಾಗಿದ್ದ ವೇಳೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಅವರು ಚಿಕಿತ್ಸೆ ನೀಡಿದ ಘಟನೆ ನಡೆಯಿತು.

ವೈದ್ಯರಾಗಿ ಚಿಕಿತ್ಸೆ ನೀಡಿದ ಜಿಲ್ಲಾಧಿಕಾರಿ

ಬಂಟ್ವಾಳ ತಾಲೂಕಿನ ಸಜೀಪದಲ್ಲಿ ಪದ್ಮಶ್ರೀ ಪುರಸ್ಕೃತ ಕದ್ರಿ ಗೋಪಾಲನಾಥ್ ಅವರ ಎರಡನೇ ವರ್ಷದ ಪುಣ್ಯಸ್ಮರಣೆ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ವೇಳೆ ಕದ್ರಿ ಗೋಪಾಲನಾಥ್ ಅವರ ಪತ್ನಿ ಸರೋಜಿನಿ‌ ಅವರು ಅಸ್ವಸ್ಥಗೊಂಡಿದ್ದರು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ ವಿ ಅವರು ತತ್​ಕ್ಷಣದಲ್ಲಿ ಸ್ಥಳದಲ್ಲಿಯೇ ಚಿಕಿತ್ಸೆ ನೀಡಿದರು. ವೈದ್ಯರು ಆಗಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸ್ಥಳದಲ್ಲಿ ಚಿಕಿತ್ಸೆ ನೀಡಿ ಇತರ ಆರೋಗ್ಯಾಧಿಕಾರಿಗಳಿಗೆ ಮಾಹಿತಿ ನೀಡಿ ಬಿಪಿ, ಶುಗರ್, ಇಸಿಜಿ ಪರೀಕ್ಷೆ ಮಾಡಲು ಸೂಚಿಸಿದರು. ಸರೋಜಿನಿ ಅವರು ಕೆಲ ಹೊತ್ತಿನ ಬಳಿಕ ಚೇತರಿಸಿಕೊಂಡಿದ್ದಾರೆ.

ಇದನ್ನೂ ಓದಿ : ಒಂಬತ್ತು ಮಕ್ಕಳಿದ್ದರೂ ಒಬ್ಬಂಟಿ ಈ 'ತಾಯಿ': ಮಂಗಳೂರಿನಲ್ಲಿ ಮನಕಲಕುವ ಘಟನೆ

ABOUT THE AUTHOR

...view details