ಕರ್ನಾಟಕ

karnataka

ETV Bharat / state

'ಮಿಂಚಿನ ನೋಂದಣಿ' ಮೂಲಕ ವೋಟರ್ಸ್​ ಲಿಸ್ಟ್​ಗೆ ಮತದಾರರ ಹೆಸರು ಸೇರ್ಪಡೆ: ಡಿಸಿ - dakshina kannada dc press meet

ಮತದಾರರ ಪಟ್ಟಿಯಲ್ಲಿ ಅರ್ಹ ಮತದಾರರ ಹೆಸರು ಸೇರಿಸಲು ಮಿಂಚಿನ ನೋಂದಣಿ ಕಾರ್ಯಕ್ರಮ ನಡೆಸುವುದಾಗಿ ಡಿಸಿ ಸಿಂಧೂ ರೂಪೇಶ್ ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಸುದ್ದಿಗೋಷ್ಠಿ
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಸುದ್ದಿಗೋಷ್ಠಿ

By

Published : Dec 17, 2019, 10:51 PM IST

ಮಂಗಳೂರು:ಅರ್ಹ ಮತದಾರರ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲು ಮಿಂಚಿನ ನೋಂದಣಿ ಕಾರ್ಯಕ್ರಮ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಹೇಳಿದರು.

ಜ.6 ರಿಂದ 8 ರವರೆಗೆ ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲಿ ಕಾರ್ಯಕ್ರಮ ನಡೆಯಲಿದ್ದು, 18 ವರ್ಷ ಪ್ರಾಯ ತುಂಬಿದ ಹಾಗೂ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸದೇ ಇರುವವವರು ತಮ್ಮ ಹೆಸರನ್ನು ಸೇರಿಸಬಹುದು ಎಂದು ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಸುದ್ದಿಗೋಷ್ಠಿ

ಮತದಾರರ ಪಟ್ಟಿಯ ಪರಿಷ್ಕರಣೆಯ ಕರಡು ಪಟ್ಟಿಯು ಡಿ.16 ರಂದು ಪ್ರಕಟಗೊಂಡಿದ್ದು, ಹಕ್ಕು ಮತ್ತು ಆಕ್ಷೇಪಣೆಗಳನ್ನು ಜ.15 ರವರೆಗೆ ಮಾಡಬಹುದಾಗಿದೆ. ಅಂತಿಮ ಮತದಾರರ ಪಟ್ಟಿ ಪ್ರಕಟಣೆ ಫೆ.7 ರಂದು ಹೊರಬೀಳಲಿದೆ ಎಂದರು.

For All Latest Updates

ABOUT THE AUTHOR

...view details