ಕರ್ನಾಟಕ

karnataka

ETV Bharat / state

ಅಮರನಾಥ ಯಾತ್ರೆ: ಬಂಟ್ವಾಳದ 30 ಜನರ ತಂಡ ಸುರಕ್ಷಿತ

ದಕ್ಷಿಣ ಕನ್ನಡ ಜಿಲ್ಲೆಯಿಂದ ಅಮರನಾಥಕ್ಕೆ ತೆರಳಿದ್ದ 30 ಮಂದಿ ಸೈನಿಕರ ರಕ್ಷಣೆಯಲ್ಲಿದ್ದು, ನಾಳೆ ಅಮರನಾಥ ದರ್ಶನ ಮಾಡಲಿದ್ದಾರೆ.

Dakshina Kannada
ಅಮರನಾಥ ಯಾತ್ರೆ

By

Published : Jul 9, 2022, 4:23 PM IST

ಬಂಟ್ವಾಳ(ದಕ್ಷಿಣ ಕನ್ನಡ) : ಅಮರನಾಥ ಯಾತ್ರೆ ಕೈಗೊಂಡಿರುವ ಬಂಟ್ವಾಳದ 30 ಮಂದಿಯ ತಂಡ ಸುರಕ್ಷಿತವಾಗಿದೆ. ಈ ಕುರಿತು ಶಾಸಕ ರಾಜೇಶ್ ನಾಯ್ಕ್ ಅವರ ನಿರ್ದೇಶನದಂತೆ ಬಂಟ್ವಾಳ ಬುಡಾ ಅಧ್ಯಕ್ಷ ದೇವದಾಸ ಶೆಟ್ಟಿ ಅವರು ತಂಡದೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಬಂಟ್ವಾಳದ ಯಶೋಧರ ಕರ್ಬೆಟ್ಟು, ಸಂತೋಷ್ ರಾಯಿಬೆಟ್ಟು, ಸುರೇಶ್ ಕೋಟ್ಯಾನ್ ಸಹಿತ ಮೂವತ್ತು ಮಂದಿಯೂ ಸೇಫ್ ಆಗಿ ದರ್ಶನ ಪಡೆದು ಬರುವ ವಿಶ್ವಾಸವನ್ನು ಹೊಂದಿದ್ದಾರೆ.

ನಾವು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಿಂದ ಬಂದಿದ್ದೇವೆ. ಕೇವಲ 28 ಕಿಲೊ ಮೀಟರ್ ಅಂತರದಲ್ಲಿ ನಾವು ಅಮರನಾಥ ತಲುಪಲಿದ್ದು, ಸೈನ್ಯದ ಸಹಾಯದಿಂದ ನಾವು ನಾಳೆ ಬೆಳಗ್ಗೆ ತಲುಪುವ ನಿರೀಕ್ಷೆಯಲ್ಲಿದ್ದೇವೆ. ಇಲ್ಲಿ ಸೈನಿಕರು ನಮ್ಮನ್ನು ಸುರಕ್ಷಿತವಾಗಿಟ್ಟಿದ್ದು, ನಿನ್ನೆ ನಡೆದ ದುರ್ಘಟನೆಯಿಂದ ದೂರದ ಪ್ರದೇಶದಲ್ಲಿ ನಾವಿದ್ದು, ಯಾವುದೇ ಅಪಾಯ ಇಲ್ಲಿಲ್ಲ ಎಂದು ತಂಡದ ಸದಸ್ಯ ಬಿ.ಸಿ.ರೋಡ್ ನರಿಕೊಂಬು ನಿವಾಸಿ ಸುರೇಶ್ ಕೋಟ್ಯಾನ್ ತಿಳಿಸಿದ್ದಾರೆ.

ದಕ್ಷಿಣ ಕನ್ನಡದಿಂದ ತೆರಳಿದ್ದ 30 ಜನ ಸುರಕ್ಷಿತ

ರಕ್ಷಣಾ ಕಾರ್ಯ ನಡೆಸುವ ಸೈನಿಕರು ಉತ್ತಮ ಸಹಕಾರ ನೀಡುತ್ತಿದ್ದಾರೆ, ನಾಳೆ ಬೆಳಗ್ಗೆ ಅಮರನಾಥದಲ್ಲಿ ದರ್ಶನ ಭಾಗ್ಯ ಸಿಗುವ ನಿರೀಕ್ಷೆ ಇದೆ ಎಂದವರು ತಿಳಿಸಿದರು.

ಇದನ್ನೂ ಓದಿ:ಅಮರನಾಥ ಯಾತ್ರೆ: ಕಲಬುರಗಿಯ ಬಬಲಾದ ಶ್ರೀ ಸೇರಿ 55 ಮಂದಿ ಸುರಕ್ಷಿತ

ABOUT THE AUTHOR

...view details