ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಒಂದೇ ದಿನ 167 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಜಿಲ್ಲೆಯ ಜನತೆಯಲ್ಲಿ ಆತಂಕ ಹೆಚ್ಚಿಸಿದೆ.
ದಕ್ಷಿಣ ಕನ್ನಡದಲ್ಲಿ ಇಂದು 3 ವರ್ಷದ ಮಗು ಸೇರಿ 167 ಜನರಿಗೆ ಕೊರೊನಾ! - 167 people have corona including 3-year-old child
ದಕ್ಷಿಣ ಕನ್ನಡ ಜಿಲ್ಲೆಯಲ್ಲಿಂದು 167 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈವರೆಗೆ 1709 ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ 702 ಮಂದಿ ಗುಣಮುಖರಾಗಿದ್ದಾರೆ. 30 ಮಂದಿ ಸಾವನ್ನಪ್ಪಿದ್ದಾರೆ.
ಇಂದು ಮೂರು ವರ್ಷದ ಮಗುವಿನಲ್ಲಿ ಕೂಡ ಸೋಂಕು ಪತ್ತೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಪತ್ತೆಯಾದ 167 ಪ್ರಕರಣಗಳಲ್ಲಿ 64 ಪ್ರಾಥಮಿಕ ಸಂಪರ್ಕದಿಂದ ಪತ್ತೆಯಾದರೆ, 42 ಐಎಲ್ಐ ಪ್ರಕರಣದಿಂದ ಪತ್ತೆಯಾಗಿವೆ. 6 ಸಾರಿ ಪ್ರಕರಣದಿಂದ, 1 ಅಂತರ್ ಜಿಲ್ಲಾ ಪ್ರವಾಸದಿಂದ, 3 ವಿದೇಶ ಪ್ರವಾಸದಿಂದ, 13 ಸರ್ಜರಿ ಸ್ಯಾಂಪಲ್ ವೇಳೆ ಪತ್ತೆಯಾಗಿವೆ. 38 ಮಂದಿಯ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 7 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 1709 ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ 702 ಮಂದಿ ಗುಣಮುಖರಾಗಿದ್ದಾರೆ. 30 ಮಂದಿ ಸಾವನ್ನಪ್ಪಿದ್ದು, 977 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ 7 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.