ಮಂಗಳೂರು: ಮನೆಯಲ್ಲಿದ್ದ ಸಿಲಿಂಡರ್ ಲೀಕ್ ಆಗಿ ಸ್ಫೋಟಗೊಂಡು, ಇಬ್ಬರು ಗಾಯಗೊಂಡಿರುವ ಘಟನೆ ನಗರದ ವಾಸ್ಲೇನ್ನಲ್ಲಿ ಸಂಭವಿಸಿದೆ.
ಮಂಗಳೂರಲ್ಲಿ ಸಿಲಿಂಡರ್ ಸ್ಫೋಟ: ಇಬ್ಬರಿಗೆ ಗಾಯ - ಮಂಗಳೂರಿನಲ್ಲಿ ಸಿಲಿಂಡರ್ ಗ್ಯಾಸ್ ಸ್ಫೋಟ
ಮನೆಯಲ್ಲಿದ್ದ ಸಿಲಿಂಡರ್ ಗ್ಯಾಸ್ ಸೋರಿಕೆಯಾಗಿ ಸ್ಫೋಟಗೊಂಡ ಪರಿಣಾಮ ಇಬ್ಬರು ಗಾಯಗೊಂಡಿರುವ ಘಟನೆ ಮಂಗಳೂರಿನ ವಾಸ್ ಲೇನ್ನಲ್ಲಿ ನಡೆದಿದೆ.

ಮಂಗಳೂರಿನಲ್ಲಿ ಸಿಲಿಂಡರ್ ಗ್ಯಾಸ್ ಸ್ಪೋಟ
ಮಂಗಳೂರಿನಲ್ಲಿ ಸಿಲಿಂಡರ್ ಗ್ಯಾಸ್ ಸ್ಪೋಟ: ಇಬ್ಬರಿಗೆ ಗಾಯ
ಮನೆಯಲ್ಲಿದ್ದ ಮಂಜುನಾಥ್ (25) ಮತ್ತು ರೇಖಾ (20) ಗಾಯಗೊಂಡವರು. ಗಾಯಾಳುಗಳನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಮನೆಯಲ್ಲಿದ್ದ ಸಿಲಿಂಡರ್ ಸೋರಿಕೆ ಆಗಿ ಮನೆಯೊಳಗೆ ಶೇಖರಣೆಯಾಗಿತ್ತು. ವಿದ್ಯುತ್ ಸ್ವಿಚ್ ಹಾಕಿದ ಕೂಡಲೇ ಬೆಂಕಿ ಹೊತ್ತಿಕೊಂಡಿದ್ದು, ಮನೆಯ ಕಿಟಕಿ ಗಾಜು ಪುಡಿಯಾಗಿದೆ. ಜೊತೆಗೆ ಮನೆಯ ಹೊರಗಿದ್ದ ಕಾರಿನ ಗಾಜು ಕೂಡ ಪುಡಿ ಪುಡಿಯಾಗಿದೆ.
ಪಾಂಡೇಶ್ವರ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ರಕ್ಷಣಾ ಕಾರ್ಯ ನಡೆಸಿದ್ದಾರೆ.
Last Updated : Nov 25, 2019, 12:50 PM IST