ಕರ್ನಾಟಕ

karnataka

ETV Bharat / state

ಚಪ್ಪಲಿ, ಬನಿಯನ್, ಕಾರ್ಟನ್ ಬಾಕ್ಸ್​ನಲ್ಲಿಟ್ಟು ಗೋಲ್ಡ್​ ಸ್ಮಗ್ಲಿಂಗ್.. ಮಂಗಳೂರು ಏರ್​ಪೋರ್ಟ್​ನಲ್ಲಿ ಚಿನ್ನ ವಶಕ್ಕೆ - ಮಂಗಳೂರು ಏರ್​ಪೋರ್ಟ್​ನಲ್ಲಿ ಚಿನ್ನ ವಶಕ್ಕೆ

ಚಪ್ಪಲಿ, ಬನಿಯನ್ ಮತ್ತು ಕಾರ್ಟನ್ ಬಾಕ್ಸ್​ನಲ್ಲಿ ಚಿನ್ನ ಇಟ್ಟು ಸ್ಮಗ್ಲಿಂಗ್ ಮಾಡುತ್ತಿದ್ದ ಆರೋಪಿಗಳನ್ನು ಕಸ್ಟಮ್ಸ್​ ಅಧಿಕಾರಿಗಳು ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.

customs officers caught gold smugglers  gold smugglers in Mangalore Airport  Mangalore Airport news  ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಗಾರ ವಶ  ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ  ಮಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು
ಮಂಗಳೂರು ವಿಮಾನ ನಿಲ್ದಾಣ

By

Published : Sep 7, 2022, 12:08 PM IST

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಬಂಗಾರ ಸಾಗಾಟ ಮಾಡುತ್ತಿದ್ದವರನ್ನು ಕಸ್ಟಮ್ಸ್​ ಅಧಿಕಾರಿಗಳು ಬಂಧಿಸಿದ್ದಾರೆ. ಎರಡು ಪ್ರಕರಣ ಪತ್ತೆ ಹಚ್ಚಿರುವ ಅಧಿಕಾರಿಗಳು ರೂಪಾಯಿ 55.39 ಲಕ್ಷ ರೂ ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ಸೆ.5 ರಂದು ದುಬೈನಿಂದ ಆಗಮಿಸಿದ ನಾಲ್ವರು ಪ್ರಯಾಣಿಕರು ಪೇಸ್ಟ್ ರೂಪದಲ್ಲಿ ಅಕ್ರಮವಾಗಿ ಚಿನ್ನ ಸಾಗಿಸಲು ಯತ್ನಿಸಿದ್ದಾರೆ. ಎರಡು ಜೊತೆ ಚಪ್ಪಲಿಯಲ್ಲಿ ಮುಚ್ಚಿಟ್ಟಿರುವ ಕಪ್ಪು ಬಣ್ಣದ ಪ್ಯಾಕೆಟ್‌ಗಳು ಮತ್ತು ಪ್ರಯಾಣಿಕರು ಧರಿಸಿರುವ ಡಬಲ್ ಲೇಯರ್ಡ್ ವೆಸ್ಟ್‌ನಲ್ಲಿ (ಬನಿಯನ್) ತುಂಬಾ ತೆಳುವಾಗಿ ಪೇಸ್ಟ್‌ನ ರೂಪದಲ್ಲಿ ಮರೆಮಾಡಿ ಇಟ್ಟಿದ್ದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಇವರಿಂದ ರೂ 45,65,730/- ಮೌಲ್ಯದ ಒಟ್ಟು 897.00 ಗ್ರಾಂ ತೂಕದ 24 ಕ್ಯಾರೆಟ್ ಶುದ್ಧತೆಯ 3 ಆಯತಾಕಾರದ ಚಿನ್ನದ ಬಾರ್​ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಂಗಳೂರು ವಿಮಾನ ನಿಲ್ದಾಣ

ಸೆ.6 ರಂದು ಕೇರಳದ ಕಾಸರಗೋಡು ಮೂಲದ ಪ್ರಯಾಣಿಕನಿಂದ ರೂ 9,74,080 ಮೌಲ್ಯದ 190.250 ಗ್ರಾಂ 24 ಕ್ಯಾರೆಟ್ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಈತ ದುಬೈನಿಂದ ಏರ್ ಇಂಡಿಯಾ ಫ್ಲೈಟ್ ಮೂಲಕ ಮಂಗಳೂರಿಗೆ ಆಗಮಿಸಿದ್ದ. ಚಿನ್ನವನ್ನು ಕಾರ್ಟನ್ ಬಾಕ್ಸ್​ನಲ್ಲಿ ಅಡಗಿಸಿ ಸಾಗಣೆ ಮಾಡುತ್ತಿರುವುದು ತನಿಖೆ ಮೂಲಕ ತಿಳಿದಿದೆ.

ಮಂಗಳೂರು ವಿಮಾನ ನಿಲ್ದಾಣ ಬಂಗಾರ ವಶ

ಎರಡು ಪ್ರಕರಣಗಳನ್ನು ಭೇದಿಸಿದ ಮಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಒಟ್ಟು ಐವರು ಪ್ರಯಾಣಿಕರು ಮತ್ತು ಚಿನ್ನವನ್ನು ವಶಪಡಿಸಿಕೊಂಡು ವಿಚಾರಣೆ ಮುಂದುವರಿಸಿದ್ದಾರೆ.

ಓದಿ:ಬೆಂಗಳೂರು ಏರ್‌ಪೋರ್ಟ್‌ನಲ್ಲಿ 60 ಜೀವಂತ ನಕ್ಷತ್ರ ಆಮೆಗಳ ಜಪ್ತಿ

ABOUT THE AUTHOR

...view details