ಕರ್ನಾಟಕ

karnataka

ETV Bharat / state

ವಿದ್ಯುತ್ ದುರಸ್ತಿ ವೇಳೆ ಶಾಕ್​​, ಲೈನ್​ಮ್ಯಾನ್ ಸಾವು - undefined

ವಿದ್ಯುತ್​ ಲೈನ್​ ದುರಸ್ತಿ ಮಾಡುವಾಗ ಲೈನ್​ ಮ್ಯಾನ್​ ಪವರ್​​ ಶಾಕ್​ ಹೊಡೆದು ಸಾವನ್ನಪ್ಪಿರುವ ಘಟನೆ ಪುತ್ತೂರಿನಲ್ಲಿ ನಡೆದಿದೆ.

ಮಿಟ್ಯಾನಾಯಕ್

By

Published : Jun 13, 2019, 8:53 AM IST

ಮಂಗಳೂರು: ವಿದ್ಯುತ್ ಲೈನ್​​​ ದುರಸ್ತಿ ವೇಳೆ ಶಾಕ್ ಹೊಡೆದು ಲೈನ್​ಮ್ಯಾನ್ ಸಾವನ್ನಪ್ಪಿರುವ ಘಟನೆ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಸಮೀಪದ ನೆಕ್ಕಿಲಾಡಿಯಲ್ಲಿ ನಡೆದಿದೆ.

ದಾವಣಗೆರೆ ನಿವಾಸಿ ಮಿಟ್ಯಾ ನಾಯಕ್ (35) ಮೃತ ಲೈನ್​ಮ್ಯಾನ್​. ಮಿಟ್ಯಾ ನಾಯಕ್​ ಉಪ್ಪಿನಂಗಡಿ ಮೆಸ್ಕಾಂ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ನಿನ್ನೆ ಪೊಲೀಸ್ ವಸತಿ ಗೃಹದ ಬಳಿ ಲೈನ್ ಆಫ್ ಮಾಡಿ ವಿದ್ಯುತ್ ಸಂಪರ್ಕ ದುರಸ್ತಿ ಕಾರ್ಯ ನಡೆಸಲಾಗುತ್ತಿತ್ತು.ಈ ದುರಸ್ತಿ ಕಾರ್ಯ ಮುಗಿದ ಬಳಿಕ ವಿದ್ಯುತ್ ಪೂರೈಕೆ ಮಾಡುವ ವೇಳೆ ಶಾಕ್ ಹೊಡೆದು ಮಿಟ್ಯಾ ನಾಯಕ್​ ಮೃತಪಟ್ಟಿದ್ದಾರೆ. ಈ ಸಂಬಂಧ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For All Latest Updates

TAGGED:

ABOUT THE AUTHOR

...view details