ಮಂಗಳೂರು:ಪೌರತ್ವ (ತಿದ್ದುಪಡಿ) ಮಸೂದೆ ಕಿಚ್ಚು ಮಂಗಳೂರಿನಲ್ಲಿ ಎರಡು ಜೀವನಗಳನ್ನು ಬಲಿ ತೆಗೆದುಕೊಂಡಿತ್ತು. ಉದ್ವಿಗ್ನ ಪರಿಸ್ಥಿತಿ ನಿಯಂತ್ರಿಸಲು ಹೇರಲಾಗಿದ್ದ ಕರ್ಫ್ಯೂ ಇದೀಗ ಸಂಜೆ 6 ಗಂಟೆವರೆಗೆ ಹಿಂತೆಗೆಲಾಗಿದೆ. ಸ್ತಬ್ಧಗೊಂಡಿದ್ದ ಜನಜೀವನ ಸಹಜ ಸ್ಥಿತಿಗೆ ಮರಳಿದೆ. ಬಣಗುಡುತ್ತಿದ್ದ ಬಸ್ ನಿಲ್ದಾಣ, ಸಾರ್ವಜನಿಕ ಸ್ಥಳಗಳು ಮರಳಿ ಕ್ರಿಯಾಶೀಲಗೊಂಡಿವೆ.
ಸಂಜೆ 6 ಗಂಟೆವರೆಗೆ ಮಂಗಳೂರಿನಲ್ಲಿ ಕರ್ಫ್ಯೂ ರಿಲೀಫ್.. ಇಂದು ಮೃತರ ಮನೆಗಳಿಗೆ ಹೆಚ್‌ಡಿಕೆ ಭೇಟಿ - today Curfew Relief in mangalore
ಪೌರತ್ವ (ತಿದ್ದುಪಡಿ) ಮಸೂದೆ ಕಿಚ್ಚು ಮಂಗಳೂರಿನಲ್ಲಿ ಎರಡು ಜೀವಗಳನ್ನು ಬಲಿ ತೆಗೆದುಕೊಂಡಿತ್ತು. ಉದ್ವಿಗ್ನ ಪರಿಸ್ಥಿತಿ ನಿಯಂತ್ರಿಸಲು ಹೇರಲಾಗಿದ್ದ ಕರ್ಫ್ಯೂ ಇದೀಗ ಸಂಜೆ 6 ಗಂಟೆವರೆಗೆ ಹಿಂತೆಗೆಯಲಾಗಿದೆ. ಸ್ತಬ್ಧಗೊಂಡಿದ್ದ ಜನಜೀವನ ಸಹಜ ಸ್ಥಿತಿಗೆ ಮರಳಿದೆ. ಬಣಗುಡುತ್ತಿದ್ದ ಬಸ್ ನಿಲ್ದಾಣ, ಸಾರ್ವಜನಿಕ ಸ್ಥಳಗಳು ಮರಳಿ ಕ್ರಿಯಾಶೀಲಗೊಂಡಿವೆ.
![ಸಂಜೆ 6 ಗಂಟೆವರೆಗೆ ಮಂಗಳೂರಿನಲ್ಲಿ ಕರ್ಫ್ಯೂ ರಿಲೀಫ್.. ಇಂದು ಮೃತರ ಮನೆಗಳಿಗೆ ಹೆಚ್‌ಡಿಕೆ ಭೇಟಿ Curfew Relief until 6pm today](https://etvbharatimages.akamaized.net/etvbharat/prod-images/768-512-5454765-thumbnail-3x2-mng.jpg)
ಸಂಜೆ 6 ಗಂಟೆವರೆಗೆ ಕರ್ಫ್ಯೂ ರಿಲೀಫ್
ಇಂದು ಬೆಳಗ್ಗೆ ತೆರೆಯಲಾದ ಮಾರುಕಟ್ಟೆಗೆ ತುಸು ಹೆಚ್ಚಾಗಿಯೇ ಜನದಟ್ಟಣೆ ನೆರೆದಿತ್ತು. ಎರಡು ದಿನದಿಂದ ಅಗತ್ಯ ವಸ್ತುಗಳಿಗಾಗಿ ಸಾರ್ವಜನಿಕರು ಪರದಾಡುತ್ತಿದ್ದರು.
ಸಂಜೆ 6 ಗಂಟೆವರೆಗೆ ಕರ್ಫ್ಯೂ ರಿಲೀಫ್..
ಹಿಂಸಾಚಾರ, ಕಲ್ಲುತೂರಾಟ, ಗದ್ದಲ ಕೂಗಾಟಗಳಿಂದ ಕೂಡಿದ್ದ ಮಂಗಳೂರು ಶಾಂತವಾಗಿದೆ. ಇಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಮೃತಪಟ್ಟ ಇಬ್ಬರು ಕುಟುಂಬ ಸದಸ್ಯರನ್ನ ಭೇಟಿಯಾಗಿ ಸಾಂತ್ವನ ಹೇಳಲಿದ್ದಾರೆ.