ಕರ್ನಾಟಕ

karnataka

ETV Bharat / state

ಮಂಗಳೂರಿನಲ್ಲಿ ಕರ್ಫ್ಯೂ :  ನಮಾಜಿಗೆ ಅವಕಾಶ ನೀಡಲು ಮುಸ್ಲಿಂ ಮುಖಂಡರ ಮನವಿ - Tight security i Mangaluru

ಪೌರತ್ವ ತಿದ್ದುಪಡಿ ಕಾಯ್ದೆ ವಿರೊಧಿಸಿ ಪ್ರತಿಭಟನೆ ವೇಳೆ ಉಂಟಾದ ಗಲಭೆಯಿಂದ ಹಲವು ಕಡೆಗಳಲ್ಲಿ ಪ್ರಕ್ಷುಬ್ಧ ವಾತಾವರಣವಿದ್ದು, ಮಂಗಳೂರು ನಗರದಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ.  ನಗರದ ಎಲ್ಲೆಡೆ ಪೊಲೀಸ್​ ಸರ್ಪಗಾವಲು ಹಾಕಲಾಗಿದ್ದು, ಇಂಟರ್ನೆಟ್​ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ.

Curfew in Mangaluru
ಮಂಗಳೂರಿನಲ್ಲಿ ಕರ್ಫ್ಯೂ ಜಾರಿ

By

Published : Dec 20, 2019, 10:03 AM IST

Updated : Dec 20, 2019, 12:38 PM IST

ಬೆಂಗಳೂರು/ಮಂಗಳೂರು:ಪೌರತ್ವ ತಿದ್ದುಪಡಿ ಕಾಯ್ದೆ ವಿರೊಧಿಸಿ ಪ್ರತಿಭಟನೆ ವೇಳೆ ಉಂಟಾದ ಗಲಭೆಯಿಂದ ಹಲವು ಕಡೆಗಳಲ್ಲಿ ಪ್ರಕ್ಷುಬ್ಧ ವಾತಾವರಣವಿದ್ದು, ಮಂಗಳೂರು ನಗರದಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ. ನಗರದ ಎಲ್ಲೆಡೆ ಪೊಲೀಸ್​ ಸರ್ಪಗಾವಲು ಹಾಕಲಾಗಿದ್ದು, ಇಂಟರ್ನೆಟ್​ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ.

ಪ್ರಾರ್ಥನೆಗೆ ಅವಕಾಶ ನೀಡಲು ಮನವಿ: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕರ್ಫ್ಯೂ ಜಾರಿಯಾಗಿದ್ದು, ಇಂದು ಶುಕ್ರವಾರವಾಗಿರುವ ಕಾರಣ ನಮಾಜು ಮಾಡಲು ಕರ್ಫ್ಯೂ ಸಡಿಲಿಸುವಂತೆ ಮುಸ್ಲಿಂ ಸಮುದಾಯದ ಮುಖಂಡರು ಪೊಲೀಸ್​ ಕಮೀಷನರ್​ ಅವರಿಗೆ ಮನವಿ ಮಾಡಿದ್ದಾರೆ.ಮಾಜಿ ಸಚಿವ ಯು.ಟಿ. ಖಾದರ್​, ಮಾಜಿ ಶಾಸಕ ಮೊಯಿದೀನ್​ ಬಾವಾ ಮುಂತಾದವರು ಈ ಬಗ್ಗೆ ಕಮೀಷನರ್​ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದು, ಮನವಿಗೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿದು ಬಂದಿದೆ.

ಪತ್ರಕರ್ತರ ಬಂಧನ:ಮಂಗಳೂರು ನಗರದಲ್ಲಿ ಕರ್ಫ್ಯೂ ವಿಧಿಸಿರುವ ಹಿನ್ನೆಲೆ ಗುರುತಿನ ಚೀಟಿ ಇಲ್ಲದೆ ವೆನ್ಲಾಕ್​ ಆಸ್ಪತ್ರೆ ಶವಾಗಾರಕ್ಕೆ ಬಂದ ಕೇರಳದ ಮೂಲದ 25ಕ್ಕೂ ಹೆಚ್ಚು ಪತ್ರಕರ್ತರನ್ನು ವಶಕ್ಕೆ ಪಡೆಯಲಾಗಿತ್ತು. ನಂತರ ಗುರುತಿನ ಚೀಟಿ ತೋರಿಸಿದ ಬಳಿಕ ಅವರನ್ನು ಬಿಡುಗಡೆಗೊಳಿಸಲಾಗಿದೆ.

ಬಸ್​ಗಳಿಗೆ ಕಲ್ಲು ತೂರಾಟ: ಬಿಗಿ ಪೊಲೀಸ್​ ಬಂದೋ ಬಸ್ತ್​ ನಡುವೆಯೂ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಕೆಲವೆಡೆ ಬಸ್​ಗಳ ಮೇಲೆ ಕಲ್ಲು ತೂರಾಟ ನಡೆದಿದೆ. ಉಪ್ಪಿನಂಗಡಿ ಸಮೀಪ ಬಸ್​ಗಳ ಮೇಲೆ ಕಲ್ಲು ತೂರಾಟ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ವಿಟಿಯು, ಮಂಗಳೂರು ವಿವಿ ಪರೀಕ್ಷೆಗಳು ಮುಂದೂಡಿಕೆ: ಜಿಲ್ಲೆಯಲ್ಲಿ ಬಿಗುವಿನ ವಾತವಾರಣ ಹಿನ್ನಲೆ ಇಂದು ನಡೆಯಬೇಕಿದ್ದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪರೀಕ್ಷೆಗಳು ಮುಂದೂಡಲಾಗಿದೆ. ಈ ಬಗ್ಗೆ ವಿಟಿಯು ಪ್ರಕಟನೆ ಹೊರಡಿಸಿದ್ದು, ಪರೀಕ್ಷೆ ಮುಂದೂಡಿಕೆ ಬಗ್ಗೆ ಎಲ್ಲಾ ಇಂಜಿನಿಯರಿಂಗ್​ ಕಾಲೇಜುಗಳ ಪ್ರಾಂಶುಪಾಲರಿಗೆ ಮಾಹಿತಿ ರವಾನಿಸಿದ್ದು, ಮುಂದಿನ ದಿನಾಂಕವನ್ನು ತನ್ನ ಅಧಿಕೃತ ವೆಬ್​ಸೈಟ್​ನಲ್ಲಿ ಪ್ರಕಟಿಸುವುದಾಗಿ ಹೇಳಿದೆ. ಅದೇ ರೀತಿ ಮಂಗಳೂರು ವಿವಿಯು ವಿವಿಧ ಪರಿಕ್ಷೇಗಳನ್ನು ಮುಂದೂಡಿದೆ.

ವಿವಿ ಪರೀಕ್ಷೆಗಳು ರದ್ದು

ಮಂಗಳೂರು ಬಸ್ ಸಂಚಾರ ರದ್ದು:ಈಗಾಗಲೆ ಹಲವೆಡೆ ಬಸ್​ಗಳ ಮೇಲೆ ಕಲ್ಲು ತೂರಾಟ ಮತ್ತು ಬೆಂಕಿ ಹಚ್ಚಿರುವುದರಿಂದ, ಪೋಲಿಸ್ ಇಲಾಖೆ‌ ಸಲಹೆ ಮೇರೆಗೆ ಮತ್ತು ಸಾರ್ವಜನಿಕರ ಸುರಕ್ಷತೆಯಿಂದ ಮಂಗಳೂರಿನ ಮೂರು‌ ಡಿಪೋಗಳಿಂದ‌ ಬಸ್ ಸಂಚಾರ ರದ್ದು ಮಾಡಲಾಗಿದೆ. ಜೊತೆಗೆ ಮಂಗಳೂರಿನಿಂದ ರಾಜ್ಯದ ವಿವಿಧ ಭಾಗಗಳಿಗೆ ತೆರಳುವ ಬಸ್​ಗಳ ಸಂಚಾರ ಕೂಡ ರದ್ದು ಮಾಡಲಾಗಿದ್ದು, ಆಯಾ ಜಿಲ್ಲೆಗಳ ಅಧಿಕಾರಿಗಳನ್ನು ಸಂಪರ್ಕಿಸಿ‌ ನಂತರ ಬಸ್ ಸಂಚಾರದ ಬಗ್ಗೆ ನಿರ್ಧಾರ ಮಾಡಲಾಗುವುದು. ಬೆಂಗಳೂರಿನಿಂದ ಮಂಗಳೂರಿಗೆ ಬಸ್ಸುಗಳು ತೆರಳಲಿದೆ.‌ ಆದರೆ ನಗರದ ಒಳಗೆ ಸಂಚಾರ ಇರುವುದಿಲ್ಲ ಎಂದು ನಿಗಮದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಭದ್ರತೆಗಾಗಿ 11 ಡಿವೈಎಸ್​ಪಿ ಹಾಗೂ 9 ಇನ್ಸ್​ಪೆಕ್ಟರ್ ನಿಯೋಜನೆ

ದಕ್ಷಿಣ ಕನ್ನಡದಲ್ಲಿ 48 ಗಂಟೆಗಳ ಇಂಟರ್​ನೆಟ್ ಬಂದ್ ಮಾಡಿದ್ದ ಬೆನ್ನಲೇ ಕಾನೂನು ಸುವ್ಯವಸ್ಥೆ ತಹಬದಿಗೆ ತರಲು ರಾಜ್ಯ ಸರ್ಕಾರ ಮುಂದಾಗಿದ್ದು ಈ‌ ನಿಟ್ಟಿನಲ್ಲಿ ಹೆಚ್ಚಿನ ಭದ್ರತೆಗಾಗಿ ಮಂಗಳೂರಿನಲ್ಲಿ 11 ಡಿವೈಎಸ್​ಪಿ ಹಾಗೂ 9 ಇನ್ಸ್​ಪೆಕ್ಟರ್​ಗಳನ್ನು ನಿಯೋಜಿಸಿ ಆದೇಶ ಹೊರಡಿಸಿದೆ. ಈ ಕೂಡಲೇ ಮಂಗಳೂರು ಆಯುಕ್ತರ ಬಳಿ ರಿಪೋರ್ಟ್ ಮಾಡಿಕೊಳ್ಳಲು ರಾಜ್ಯ ಪೊಲೀಸ್ ಇಲಾಖೆಯ ಕಾನೂ‌ನು ಸುವ್ಯವಸ್ಥೆ ಎಡಿಜಿಪಿ ಅಮರ್ ಕುಮಾರ್ ಪಾಂಡೆ ಆದೇಶಿಸಿದ್ದಾರೆ. ಮಂಗಳೂರಿನಲ್ಲಿ ಕೆಲಸ ಮಾಡಿ‌ ಅನುಭವ ಇರುವ ಅಧಿಕಾರಿಗಳ ನಿಯೋಜನೆ ಮಾಡಿದ್ದು ಈ ಸಂಬಂಧ ಸಿಸಿಬಿ ಎಸಿಪಿ ವೆಂಕಟೇಶ್ ಪ್ರಸನ್ನ, ಶ್ರೀರಾಮಪುರ ಇನ್ ಸ್ಪೆಕ್ಟರ್ ಸುನೀಲ್ ನಾಯಕ್ ಸೇರಿ ಹಲವರನ್ನು ನಿಯೋಜಿಸಲಾಗಿದೆ.

Last Updated : Dec 20, 2019, 12:38 PM IST

ABOUT THE AUTHOR

...view details