ಕರ್ನಾಟಕ

karnataka

ETV Bharat / state

ಮಂಗಳೂರಿನ ಕರಾವಳಿ ಕಾಲೇಜಿನಲ್ಲಿ 'ಕೈಜನ್-21' ಕಾರ್ಯಕ್ರಮ: ಕಣ್ಮನ ಸೆಳೆದ ವಿದ್ಯಾರ್ಥಿಗಳ ಫ್ಯಾಷನ್ ಶೋ - ಮಂಗಳೂರಿನಲ್ಲಿ ವಿದ್ಯಾರ್ಥಿಗಳ ಫ್ಯಾಶನ್ ಶೋ

ಕರಾವಳಿ ಗ್ರೂಪ್ ಆಫ್ ಕಾಲೇಜಿನ ಅಧ್ಯಕ್ಷ ಗಣೇಶ್ ರಾವ್ ಅವರ ಹುಟ್ಟುಹಬ್ಬದ ಪ್ರಯುಕ್ತ ಕಾಲೇಜು ವಿದ್ಯಾರ್ಥಿಗಳಿಗೆ ಮನರಂಜನಾ ಸ್ಪರ್ಧೆ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಫ್ಯಾಷನ್ ಶೋ ಎಲ್ಲರನ್ನು ರಂಜಿಸಿತು.

By

Published : Feb 25, 2021, 9:00 PM IST

ಮಂಗಳೂರು: ನಗರದ ಕರಾವಳಿ ಕಾಲೇಜಿನಲ್ಲಿ ಸಂಸ್ಥಾಪಕರ ಜನ್ಮದಿನಾಚರಣೆ ಹಿನ್ನೆಲೆ ನಡೆದ 'ಕೈಜನ್ -'21 ಮನರಂಜನಾ ಸ್ಪರ್ಧೆ ಗಮನ ಸೆಳೆಯಿತು.

ಕರಾವಳಿ ಗ್ರೂಪ್ ಆಫ್ ಕಾಲೇಜಿನ ಅಧ್ಯಕ್ಷ ಗಣೇಶ್ ರಾವ್ ಅವರ ಹುಟ್ಟುಹಬ್ಬದ ಪ್ರಯುಕ್ತ ಕಾಲೇಜು ವಿದ್ಯಾರ್ಥಿಗಳಿಗೆ ಮನರಂಜನಾ ಸ್ಪರ್ಧೆ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಫ್ಯಾಷನ್ ಶೋ ಎಲ್ಲರನ್ನು ರಂಜಿಸಿತು.

ಕಣ್ಮನ ಸೆಳೆದ ವಿದ್ಯಾರ್ಥಿಗಳ ಫ್ಯಾಷನ್ ಶೋ

ಕೋವಿಡ್​ ವಿರಾಮದ ಬಳಿಕ ಪುನಾರಂಭವಾದ ಶಿಕ್ಷಣ ಸಂಸ್ಥೆಗಳು, ವಿದ್ಯಾರ್ಥಿಗಳಿಗೆ ಪಠ್ಯ ಚಟುವಟಿಕೆಗಳನ್ನು ನೀಡಲು ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ನಡುವೆ ವಿದ್ಯಾರ್ಥಿಗಳಿಗೆ ಮನರಂಜನೆ ಒದಗಿಸಬೇಕೆಂಬ ನಿಟ್ಟಿನಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಒಂದು ವರ್ಷದ ಬಳಿಕ ಕಾಲೇಜು ಕ್ಯಾಂಪಸ್​ನಲ್ಲಿ ನಡೆದ ಮನರಂಜನಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು.

ಓದಿ : ಅದೆಲ್ಲಿಂದ ಕಲಿತೆಯೋ ನಗುವಲ್ಲೇ ಮೋಡಿ ಮಾಡುವ ಬುದ್ದಿ..!

ಕಾಲೇಜು ಗ್ರೂಪಿನ ವಿವಿಧ ವಿಭಾಗಗಳ ವಿದ್ಯಾರ್ಥಿಗಳು ನಡೆಸಿದ ಫ್ಯಾಷನ್ ಶೋ ಗಮನ ಸೆಳೆಯಿತು. ಸಾಂಪ್ರದಾಯಿಕ, ಮಾಡರ್ನ್ ಉಡುಗೆಗಳೊಂದಿಗೆ ವಿದ್ಯಾರ್ಥಿಗಳು ನಡೆಸಿದ ಕ್ಯಾಟ್ ವಾಕ್ ಕಣ್ಮನ ಸೆಳೆಯಿತು. ಇದೇ ವೇಳೆ ವಿದ್ಯಾರ್ಥಿಗಳ ತಂಡ ನಡೆಸಿದ ವಿವಿಧ ನೃತ್ಯ, ಡೊಳ್ಳು ಕುಣಿತ ಮೊದಲಾದ ಮನರಂಜನಾ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಖುಷಿಗೆ ಕಾರಣವಾಯಿತು.

For All Latest Updates

ABOUT THE AUTHOR

...view details