ಮಂಗಳೂರು: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ಮಂಗಳೂರಿಗೆ ಭೇಟಿ ನೀಡಿದ ಪ್ರದೇಶಗಳನ್ನು ಗುರುತಿಸಿ ಮಂಗಳೂರಿಗೆ ಬರುವ ಪ್ರವಾಸಿಗರನ್ನು ಆಕರ್ಷಿಸುವಂತೆ ಕಾರ್ಯಕ್ರಮಗಳನ್ನು ರೂಪಿಸಿ ಎಂದು ಪ್ರವಾಸೋದ್ಯಮ ಸಚಿವ ಸಿ ಟಿ ರವಿ ಸೂಚಿಸಿದ್ದಾರೆ.
ಗಾಂಧಿ ಮಂಗಳೂರಿಗೆ ಭೇಟಿ ನೀಡಿದ ಪ್ರದೇಶ ಗುರುತಿಸಿ ಕಾರ್ಯಕ್ರಮ ರೂಪಿಸಿ: ಸಿಟಿ ರವಿ ಸೂಚನೆ - ಯಾತ್ರಿನಿವಾಸ
ಮಹಾತ್ಮ ಗಾಂಧೀಜಿಯವರ 150 ನೇ ವರ್ಷಾಚರಣೆ ನಿಮಿತ್ತ ಮಂಗಳೂರಿಗೆ ಮಹಾತ್ಮ ಗಾಂಧೀಜಿ ಅವರು ಭೇಟಿ ನೀಡಿದ ಪ್ರದೇಶಗಳಲ್ಲಿ ಗಾಂಧಿ ಚಿಂತನೆಗಳಾದ ಸ್ವಚ್ಚತೆ, ಸಾಮರಸ್ಯ ಮೂಡಿಸುವಂತಹ ಕಾರ್ಯಕ್ರಮಗಳನ್ನು ರೂಪಿಸಿ ಎಂದು ಸಿ ಟಿ ರವಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಸಚಿವರು, ಮಹಾತ್ಮ ಗಾಂಧೀಜಿ ಅವರ 150 ನೇ ವರ್ಷಾಚರಣೆ ನಿಮಿತ್ತ ಮಂಗಳೂರಿಗೆ ಮಹಾತ್ಮ ಗಾಂಧೀಜಿ ಅವರು ಭೇಟಿ ನೀಡಿದ ಪ್ರದೇಶಗಳಲ್ಲಿ ಗಾಂಧಿ ಚಿಂತನೆಗಳಾದ ಸ್ವಚ್ಚತೆ, ಸಾಮರಸ್ಯ ಮೂಡಿಸುವಂತ ಕಾರ್ಯಕ್ರಮಗಳನ್ನು ರೂಪಿಸಿ ಎಂದು ತಿಳಿಸಿದ್ದಾರೆ.
ಹಲವೆಡೆ ಯಾತ್ರಿನಿವಾಸದ ಬಗ್ಗೆ ಮಾಹಿತಿ ಪಡೆದ ಸಚಿವರು, ಅಗತ್ಯ ಇಲ್ಲದ ಜಾಗದಲ್ಲಿ ಯಾತ್ರಿನಿವಾಸ ನಿರ್ಮಾಣ ಮಾಡುವುದಕ್ಕಿಂತ ಎಲ್ಲಿ ಯಾತ್ರಿ ನಿವಾಸ ಅಗತ್ಯವಿದೆ ಎಂಬ ಅಧ್ಯಯನ ಮಾಡಿ ಅದರ ವರದಿಯ ಆಧಾರದಲ್ಲಿ ಯಾತ್ರಿನಿವಾಸ ನಿರ್ಮಾಣಕ್ಕೆ ಮುಂದಾಗುವಂತೆ ಸೂಚಿಸಿದರು.