ಕರ್ನಾಟಕ

karnataka

ETV Bharat / state

ಪುತ್ತೂರಿನಲ್ಲಿ ಸ್ಫೋಟಕ ಸಿಡಿತ: ವ್ಯಕ್ತಿಗೆ ಗಂಭೀರ ಗಾಯ - ಪ್ರಾಣಿಗಳನ್ನು ಕೊಲ್ಲುವ ಸ್ಪೋಟಕ ಸಿಡಿತ ಲೆಟೆಸ್ಟ್ ನ್ಯೂಸ್​

ಕೃಷಿ ಬೆಳೆಗಳನ್ನು ನಾಶ ಮಾಡುವ ಪ್ರಾಣಿಗಳನ್ನು ಕೊಲ್ಲಲು ಬಳಸುವ ಸ್ಫೋಟಕ ತಯಾರಿಸುತ್ತಿದ್ದ ಮನೆಯಲ್ಲಿ ಮದ್ದು ಸಿಡಿದ ಘಟನೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬೆಟ್ಟಂಪಾಡಿ ಗ್ರಾಮದಲ್ಲಿ ನಡೆದಿದೆ.

ಪ್ರಾಣಿಗಳನ್ನು ಕೊಲ್ಲುವ ಸ್ಪೋಟಕ ಸಿಡಿತ
animal Explosive Blast

By

Published : Dec 6, 2019, 12:06 PM IST

ಮಂಗಳೂರು:ಕೃಷಿ ಬೆಳೆಗಳನ್ನು ನಾಶ ಮಾಡುವ ಪ್ರಾಣಿಗಳನ್ನು ಕೊಲ್ಲಲು ಬಳಸುವ ಸ್ಫೋಟಕ ತಯಾರಿಸುತ್ತಿದ್ದ ಮನೆಯಲ್ಲಿ ಸಿಡಿ ಮದ್ದು ಸ್ಫೋಟಿಸಿರುವ ಘಟನೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬೆಟ್ಟಂಪಾಡಿ ಗ್ರಾಮದಲ್ಲಿ ನಡೆದಿದೆ.

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬೆಟ್ಟಂಪಾಡಿ ಗ್ರಾಮದಲ್ಲಿನ ಕೇಪುಗೌಡ ಹಾಗೂ ಅವರ ಪುತ್ರ ಬಾಲಕೃಷ್ಣ ಎಂಬುವವರು ಕೃಷಿ ಬೆಳೆಗಳಿಗೆ ಹಾನಿ ಮಾಡುವ ಕಾಡು ಪ್ರಾಣಿಗಳನ್ನು ಕೊಲ್ಲಲು ಸ್ಫೋಟಕ ಸಾಮಗ್ರಿಗಳನ್ನು ತಂದು ಮನೆಯಲ್ಲೇ ಕಚ್ಚಾ ಸ್ಫೋಟಕವನ್ನು ತಯಾರಿಸಿಸುತ್ತಿದ್ದರು. ಈ ವೇಳೆ, ಸ್ಫೋಟಕ ಸಿಡಿದು ಬಾಲಕೃಷ್ಣ ಗಂಭೀರವಾಗಿ ಗಾಯಗೊಂಡಿದ್ದು, ಅವರ ಮಗ ಬಾಲಕೃಷ್ಣ ಮತ್ತು ನಾದಿನಿ ವೇದಾವತಿ ಸೇರಿದಂತೆ ಅವರ ಮಕ್ಕಳಿಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಗೊಂಡಿರುವ ಬಾಲಕೃಷ್ಣರನ್ನು ಮಂಗಳೂರಿನ ಎ.ಜೆ.ಆಸ್ಪತ್ರೆಗೆ ಹಾಗೂ ಉಳಿದವರನ್ನು ಪುತ್ತೂರಿನ ಹಿತ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ಪುತ್ತೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು ತನಿಖೆ ನಡೆಸುತ್ತಿದ್ದಾರೆ.

ABOUT THE AUTHOR

...view details