ಸುಳ್ಯ(ದಕ್ಷಿಣ ಕನ್ನಡ):ವಿದೇಶದಲ್ಲಿರುವ ಪತಿಯೋರ್ವ ವಾಟ್ಸಾಪ್ ಮೂಲಕ ಸುಳ್ಯದಲ್ಲಿನ ತನ್ನ ಪತ್ನಿಗೆ ತ್ರಿವಳಿ ತಲಾಖ್ ನೀಡಿದ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಳ್ಯದ ಜಯನಗರ ನಿವಾಸಿ ಮಿಸ್ರಿಯಾ ಎಂಬವರು ಈ ಕುರಿತು ಸುಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ ಮಹಿಳೆ. ಇವರನ್ನು ಕೇರಳ ರಾಜ್ಯದ ತ್ರಿಶ್ಯೂರ್ ಮೂಲದ ಅಬ್ದುಲ್ ರಶೀದ್ ಎಂಬಾತ ಏಳು ವರ್ಷಗಳ ಹಿಂದೆ ವಿವಾಹವಾಗಿದ್ದ. ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ವಿದೇಶದಲ್ಲಿರುವ ಪತಿಯಿಂದ ಪತ್ನಿಗೆ ವಾಟ್ಸಾಪ್ ಮೂಲಕ ತ್ರಿವಳಿ ತಲಾಖ್.. ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು - ಈಟಿವಿ ಭಾರತ ಕರ್ನಾಟಕ
ವಿದೇಶದಲ್ಲಿರುವ ಪತಿಯೋರ್ವ ಸುಳ್ಯದಲ್ಲಿನ ತನ್ನ ಪತ್ನಿಗೆ ವಾಟ್ಸಾಪ್ ಮೂಲಕ ತ್ರಿವಳಿ ತಲಾಖ್ ನೀಡಿರುವ ಘಟನೆ ಬೆಳಕಿಗೆ ಬಂದಿದೆ.
Published : Sep 18, 2023, 7:58 PM IST
ಈತನು ಎರಡು ವರ್ಷಗಳ ಹಿಂದೆ ಮಿಸ್ರಿಯಾ ಅವರನ್ನು ವಿದೇಶಕ್ಕೆ ಕರೆಸಿಕೊಂಡಿದ್ದನು. ಆ ಬಳಿಕ ಎರಡನೇ ಮಗುವಿನ ಹೆರಿಗೆಗಾಗಿ ಪತ್ನಿಯನ್ನು ಸುಳ್ಯಕ್ಕೆ ಕರೆತಂದು ತವರು ಮನೆಯಲ್ಲಿ ಬಿಟ್ಟು ಆತ ಮತ್ತೆ ವಿದೇಶಕ್ಕೆ ತೆರಳಿದ್ದನು. ಆದರೆ ಕಳೆದ ಆರು ತಿಂಗಳಿನಿಂದ ಇವರ ಸಂಸಾರದಲ್ಲಿ ವಿರಸ ಉಂಟಾಗಿತ್ತು. ಈ ಬಗ್ಗೆ ಸಂಬಂಧಿಕರು, ಹಿರಿಯರು ಮಾತನಾಡಿ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಪಟ್ಟಿದ್ದರು. ಆದರೆ ಇದಕ್ಕೆ ಆಸ್ಪದ ನೀಡದೇ ಅಬ್ದುಲ್ ರಶೀದ್ ಪತ್ನಿಯ ಮೊಬೈಲ್‌ಗೆ ವಾಟ್ಸಾಪ್ ಸಂದೇಶದ ಮೂಲಕ ತ್ರಿವಳಿ ತಲಾಖ್ ಕಳುಹಿಸಿದ್ದಾನೆ. ಇದರಿಂದ ಮನನೊಂದ ಮಿಸ್ರಿಯಾ ಅವರು ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ:ಎರಡು ತಿಂಗಳ ಹಿಂದೆ ಪ್ರೇಮ ವಿವಾಹ.. ಪತ್ರದ ಮೂಲಕ ಪತ್ನಿಗೆ ತಲಾಖ್ ನೀಡಿದ ಗಂಡ!!