ಕರ್ನಾಟಕ

karnataka

ETV Bharat / state

Mangaluru crime: ಮಂಗಳೂರಿನಲ್ಲಿ ಯುವಕನ ಮೇಲೆ ತಲ್ವಾರ್​​ ದಾಳಿ.. 24 ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸಿದ ಉರ್ವ ಪೊಲೀಸರು - three arrested in Talwar attack in Mangalore

ಮಂಗಳೂರಿನಲ್ಲಿ ಯುವಕನ ಮೇಲೆ ತಲ್ವಾರ್​ ದಾಳಿ ನಡೆಸಿದ ಮೂವರು ಆರೋಪಿಗಳನ್ನು ಉರ್ವ ಠಾಣೆ ಪೊಲೀಸರು 24 ಗಂಟೆಗಳ ಒಳಗೆ ಬಂಧಿಸಿದ್ದಾರೆ.

three-arrested-in-talwar-attack-on-youth-in-mangalore
ಮಂಗಳೂರಿನಲ್ಲಿ ಯುವಕನ ಮೇಲೆ ತಲ್ವಾರ್​​ ದಾಳಿ : 24 ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸಿದ ಉರ್ವ ಪೊಲೀಸರು

By ETV Bharat Karnataka Team

Published : Aug 22, 2023, 3:25 PM IST

ಮಂಗಳೂರು :ಯುವಕನ ಮೇಲೆ ತಲ್ವಾರ್ ದಾಳಿ ನಡೆಸಿದ ಮೂವರು ಆರೋಪಿಗಳನ್ನು 24 ಗಂಟೆಯೊಳಗೆ ಬಂಧಿಸುವಲ್ಲಿ ಕಾವೂರು ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ. ನಗರದ ಪಂಜಿಮೊಗರುವಿನ ಉರುಂದಾಡಿಗುಡ್ಡೆ ನಿವಾಸಿ ಚರಣ್ ರಾಜ್ ಯಾನೆ ಚರಣ್ ಯಾನೆ ಚರಣ್ ಉರುಂದಾಡಿಗುಡ್ಡ (24), ಸುರತ್ಕಲ್​ನ ಕುಳಾಯಿಯ ಹೊಸಬೆಟ್ಟು ನಿವಾಸಿ ಸುಮಂತ್ ಬರ್ಮನ್ (24), ನಗರದ ಕೋಡಿಕಲ್​​ನ ಸುಂಕದಕಟ್ಟೆ ಕಲ್ಲಬಾವಿ ನಿವಾಸಿ ಅವಿನಾಶ್​​ (24) ಬಂಧಿತ ಆರೋಪಿಗಳು.

ಕಳೆದ ಆಗಸ್ಟ್​​ 20ರಂದು ಕಾವೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಎಮ್​ವಿ ಶೆಟ್ಟಿ ಕಾಲೇಜು ರಸ್ತೆಯಲ್ಲಿ ನಡೆದುಕೊಂಡು ಮನೆಗೆ ಹೋಗುತ್ತಿದ್ದ ಯುವಕನ ಮೇಲೆ ಈ ಮೂವರು ಆರೋಪಿಗಳು ತಲ್ವಾರ್ ದಾಳಿ ನಡೆಸಿದ್ದರು. ಸ್ಕೂಟಿಯಲ್ಲಿ ಬಂದ ಮೂವರು ಆರೋಪಿಗಳು ಯುವಕನನ್ನು ಅಡ್ಡಗಟ್ಟಿ ತಲ್ವಾರ್ ಬೀಸಿದ್ದರು. ಈ ವೇಳೆ ಯುವಕ ತಪ್ಪಿಸಿಕೊಂಡಿದ್ದು, ಆತನ ಮುಖಕ್ಕೆ ಗಾಯವಾಗಿತ್ತು. ಅದೃಷ್ಟವಶಾತ್ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಸಂಬಂಧ ಕಾರ್ಯಾಚರಣೆ ನಡೆಸಿದ ಕಾವೂರು ಠಾಣಾ ಪೊಲೀಸರು ಕೇವಲ 24 ಗಂಟೆಗಳ ಒಳಗಾಗಿ ಮೂವರ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಮಂಗಳೂರು ನಗರ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್, ಡಿಸಿಪಿಗಳಾದ ಅಂಶು ಕುಮಾ‌ರ್, ದಿನೇಶ್ ಕುಮಾರ್​ ಅವರ ಮಾರ್ಗದರ್ಶನದಲ್ಲಿ ಎಸಿಪಿ ಮನೋಜ್ ಕುಮಾರ್ ಅವರ ಸಲಹೆಯಂತೆ ಉರ್ವ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ತಲ್ವಾರ್ ಹಾಗೂ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರೋಪಿ ಚರಣ್ ಉರುಂದಾಡಿಗುಡ್ಡ ವಿರುದ್ಧ ಈ ಮೊದಲು ಉರ್ವಾ ಪೊಲೀಸ್ ಠಾಣೆಯಲ್ಲಿ 1 ಪ್ರಕರಣ, ಪಣಂಬೂರು ಪೊಲೀಸ್ ಠಾಣೆಯಲ್ಲಿ- 1 ಮತ್ತು ಕಾವೂರು ಪೊಲೀಸ್ ಠಾಣೆಯಲ್ಲಿ- 3 ಪ್ರಕರಣಗಳು ದಾಖಲಾಗಿದ್ದು ಒಟ್ಟು 5 ಪ್ರಕರಣಗಳು ದಾಖಲಾಗಿದೆ. ಆರೋಪಿ ಸುಮಂತ್‌ ಬರ್ಮನ್‌ ವಿರುದ್ದ ಈ ಮೊದಲು ಪಣಂಬೂರು ಪೊಲೀಸ್ ಠಾಣೆಯಲ್ಲಿ 1 ಪ್ರಕರಣ, ಬರ್ಕೆ ಪೊಲೀಸ್ ಠಾಣೆಯಲ್ಲಿ-1 ಮತ್ತು ಕಾವೂರು ಪೊಲೀಸ್ ಠಾಣೆಯಲ್ಲಿ-2 ಪ್ರಕರಣಗಳು ದಾಖಲಾಗಿದ್ದು, ಒಟ್ಟು 4 ಪ್ರಕರಣಗಳು ದಾಖಲಾಗಿದೆ.

ಆರೋಪಿ ಅವಿನಾಶ್​​ ವಿರುದ್ಧ ಈ ಮೊದಲು ಉರ್ವಾ ಪೊಲೀಸ್‌ ಠಾಣೆಯಲ್ಲಿ-4 ಮತ್ತು ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ 1 ಒಟ್ಟು 5 ಪ್ರಕರಣಗಳು ದಾಖಲಾಗಿರುತ್ತವೆ. ಪ್ರಸ್ತುತ ಈತ ಉರ್ವಾ ಪೊಲೀಸ್ ಠಾಣೆ ವ್ಯಾಪ್ತಿಯಿಂದ ಗಡಿಪಾರು ಆದೇಶದಲ್ಲಿರುತ್ತಾನೆ ಎಂದು ಪೊಲೀಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ :ಮಂಗಳೂರು: ಜೆಸಿಬಿ ಬಳಸಿ ATM ಕಳವು ಯತ್ನ; ನಾಲ್ವರ ಬಂಧನ, ₹15.50 ಮೌಲ್ಯದ ಸೊತ್ತು ವಶಕ್ಕೆ

ABOUT THE AUTHOR

...view details