ಕರ್ನಾಟಕ

karnataka

ETV Bharat / state

ಮಂಗಳೂರು: ಮಾರಕಾಸ್ತ್ರಗಳಿಂದ ವ್ಯಕ್ತಿ ಕೊಲೆಗೈದು ತಲೆಮರೆಸಿಕೊಂಡ ಆರೋಪಿ ಸೆರೆ - ETV Bharath Kannada news

Mangaluru crime news: ಆಗಸ್ಟ್​ 17 ರಂದು ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

Mangaluru crime
ಮಂಗಳೂರು ಪೊಲೀಸರ ಕ್ಷಿಪ್ರ ಕಾರ್ಯಾಚರಣೆ

By ETV Bharat Karnataka Team

Published : Aug 22, 2023, 6:09 PM IST

ಮಂಗಳೂರು (ದಕ್ಷಿಣ ಕನ್ನಡ): ಇತ್ತೀಚೆಗೆ ವ್ಯಕ್ತಿಯೊಬ್ಬರನ್ನು ಕೊಲೆಗೈದು ತಪ್ಪಿಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ನಗರ ಪಣಂಬೂರು ಠಾಣೆಯ ಪೊಲೀಸ್ ನಿರೀಕ್ಷಕರ ನೇತೃತ್ವದ ತಂಡ ಯಶಸ್ವಿಯಾಗಿದೆ. ಕೇರಳದ ಕಣ್ಣೂರಿನ ನ್ಯೂ ನಡುವಿಲ್​ನ ಮನು ಸೆಬಾಸ್ಟಿಯನ್ (33) ಬಂಧಿತ ಆರೋಪಿ.

ಆಗಸ್ಟ್​ 17 ರಂದು ರಾತ್ರಿ 10:30ರ ಸುಮಾರಿಗೆ ಮಂಗಳೂರು ತಾಲೂಕು ಬೈಕಂಪಾಡಿ ಗ್ರಾಮದ ಎಪಿಎಮ್​ಸಿ ಕಟ್ಟಡದ ವಾಣಿಜ್ಯ ಮಳಿಗೆಯ ಹಿಂಭಾಗದಲ್ಲಿ 45 ವರ್ಷ ವಯಸ್ಸಿನ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಲಾಗಿತ್ತು. ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿರುವುದು ಪ್ರಾಥಮಿಕ ತನಿಖಾ ವರದಿಯಲ್ಲಿ ಕಂಡುಬಂದಿತ್ತು.

ಇ-ಸಿಗರೇಟ್ ಮಾರಾಟ- ನಾಲ್ವರ ಬಂಧನ: ಪ್ರತ್ಯೇಕ ಪ್ರಕರಣದಲ್ಲಿ ಇ-ಸಿಗರೇಟ್​ ಮಾರುತ್ತಿದ್ದ ನಾಲ್ವರನ್ನು ಬಂಧಿಸಲಾಗಿದೆ. ಕಾನೂನುಬಾಹಿರವಾಗಿ ನಗರದ ಮಣ್ಣಗುಡ್ಡೆಯ ಬಳಿ ಕು. ಸ್ವಾತಿ (26), ಶಿವಕುಮಾರ್ ಯಾನೆ ಶಿವು ದೇಶಕೋಡಿ (34), ನಗರದ ಕುತ್ತಾರ್ ಪದವಿನ ಹಸನ್ ಶರೀಫ್ (50), ರೆಹಮತುಲ್ಲಾ (45) ಇ ಸಿಗರೇಟ್​ ಮಾರಾಟ ಮಾಡುತ್ತಿದ್ದದ್ದು ತಿಳಿದುಬಂದಿದೆ.

ನಗರದ ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯ ಲಾಲ್‌ಬಾಗ್‌ ಬಳಿಯ ಸಾಯಿಬಿನ್ ಕಾಂಪ್ಲೆಕ್ಸ್‌ನ ನೆಲಮಹಡಿಯಲ್ಲಿರುವ ಆಮಂತ್ರಣ, ಯೂನಿಕ್ ವರ್ಲ್ಡ್ ಮತ್ತು ಫಂಟಾಸ್ಟಿಕ್ ವರ್ಲ್ಡ್ ಎಂಬ ಅಂಗಡಿಯಲ್ಲಿ ಕೇಂದ್ರ ಸರ್ಕಾರದಿಂದ ನಿಷೇಧವಾಗಿರುವ ಇ-ಸಿಗರೇಟ್‌ ಮತ್ತು ಸರ್ಕಾರಿ ಎಚ್ಚರಿಕೆಯ ಚಾಹೀರಾತು ನಮೂದಿಸದ ವಿದೇಶಿ ಸಿಗರೇಟ್‌ಗಳನ್ನು ಕಾನೂನುಬಾಹಿರವಾಗಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ 2,70,000 ರೂ ಮೌಲ್ಯದ ಇ-ಸಿಗರೇಟ್ ಹಾಗೂ ವಿದೇಶಿ ಸಿಗರೇಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸಾರ್ವಜನಿಕ ಸ್ಥಳದಲ್ಲಿ ವೈಯುಕ್ತಿಕ ಕಲಹ - ಇಬ್ಬರ ಬಂಧನ:ನಗರದ ಹೊರವಲಯದ ಗುರುಪುರ ಕೈಕಂಬ ಬಸ್ ನಿಲ್ದಾಣದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜಗಳವಾಡುತ್ತಿದ್ದ ಇಬ್ಬರನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ತಾಲೂಕು ತೆಂಕಬೆಳ್ಳೂರು ಗ್ರಾಮದ ನಿವಾಸಿ ಶಿವಪ್ರಸಾದ್ (39) ಮತ್ತು ಶಕ್ತಿನಗರ ನಿವಾಸಿ ಷಡ್ರಕ್ ಇಮ್ಯಾನುವಲ್ ಯಾನೆ ಮನು (39) ಬಂಧಿತರು.

ವೈಯಕ್ತಿಕ ವಿಚಾರದಲ್ಲಿ ಆರೋಪಿಗಳಿಬ್ಬರು ಬಸ್ ನಿಲ್ದಾಣದಲ್ಲಿ ಪರಸ್ಪರ ಅವಾಚ್ಯ ಶಬ್ದಗಳಿಂದ ನಿಂದಿಸಿ ಹೊಡೆದಾಡಿಕೊಂಡಿದ್ದಾರೆ. ಇದರಿಂದ ಕೆಲಕಾಲ ಬಸ್ ನಿಲ್ದಾಣದಲ್ಲಿ ಭೀತಿಯ ವಾತಾವರಣ ಸೃಷ್ಟಿಯಾಗಿತ್ತು. ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ.

ಇದನ್ನೂ ಓದಿ:Mangaluru crime: ಮಂಗಳೂರಿನಲ್ಲಿ ಯುವಕನ ಮೇಲೆ ತಲ್ವಾರ್​​ ದಾಳಿ.. 24 ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸಿದ ಉರ್ವ ಪೊಲೀಸರು

ABOUT THE AUTHOR

...view details