ಕರ್ನಾಟಕ

karnataka

ETV Bharat / state

ಕಡಬ: ಒಂದೂವರೆ ವರ್ಷದ ನಂತರ ಮನೆ ಕಳ್ಳತನ ಆರೋಪಿಗಳು ಸೆರೆ - ದಕ್ಷಿಣ ಕನ್ನಡ ಸುದ್ದಿ

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿ ಒಂದೂವರೆ ವರ್ಷದ ಹಿಂದೆ ಮನೆಗಳ್ಳತನ ಪ್ರಕರಣ ನಡೆದಿದ್ದು, ಇದೀಗ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಮನೆಗಳ್ಳತನ ಕಳ್ಳರ ಬಂಧನ
ಮನೆಗಳ್ಳತನ ಕಳ್ಳರ ಬಂಧನ

By

Published : Jul 17, 2023, 1:34 PM IST

Updated : Jul 17, 2023, 2:40 PM IST

ಕಡಬ (ದಕ್ಷಿಣ ಕನ್ನಡ):ಕಡಬದಲ್ಲಿ ಅಟೋಮೊಬೈಲ್ ಬಿಡಿಭಾಗಗಳ ಅಂಗಡಿ ಮಾಲೀಕನಾಗಿರುವ ವರ್ಗೀಸ್ (ಶಾಜನ್) ಎಂಬವರ ಮನೆಗೆ ನುಗ್ಗಿ ಲಕ್ಷಗಟ್ಟಲೆ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಆರೋಪಿಗಳನ್ನು ಸುಮಾರು ಒಂದೂವರೆ ವರ್ಷಗಳ ನಂತರ ಕಡಬ ಪೊಲೀಸರು ಬಂಧಿಸಿದ್ದಾರೆ.

ಪೇರಡ್ಕ ಪೆಲತ್ರಾಣೆ ನಿವಾಸಿ ಸದ್ದಾಂ ಮತ್ತು ಮೀನಾಡಿ ನಿವಾಸಿ ತಾಜುದ್ದೀನ್ ಬಂಧಿತರು. ಇವರಲ್ಲಿ ಸದ್ದಾಂ ಎಂಬಾತ ಈ ಹಿಂದೆ ನಡೆದ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳ ಆರೋಪಿ. ಈತನ ಮೊಬೈಲ್ ಸಿಡಿಆರ್ ಆಧಾರದಲ್ಲಿ ಕಳ್ಳತನದ ಪ್ರಕರಣ ಪತ್ತೆ ಹಚ್ಚಲಾಗಿದೆ.

ವಿವರ:2021ರ ಡಿಸೆಂಬರ್ 13ರಂದು ಬೆಳಗ್ಗೆ 8:45 ಗಂಟೆಯ ಸುಮಾರಿಗೆ ಮನೆಗೆ ಬೀಗ ಹಾಕಿ ಮಕ್ಕಳನ್ನು ಶಾಲೆಗೆ ಕಳುಹಿಸಿದ ಶಾಜನ್ ಹಾಗೂ ಪತ್ನಿ ತಮ್ಮ ಕೆಲಸಕ್ಕೆ ಹೊರಟಿದ್ದರು. ಈ ಸಂದರ್ಭದಲ್ಲಿ ಮನೆಯಲ್ಲಿ ಕಳ್ಳತನ ನಡೆದಿತ್ತು. ಸಂಜೆ ಸುಮಾರು 4:45 ವೇಳೆಗೆ ಮನೆಗೆ ಬಂದು ಮನೆ ಬೀಗ ತೆರೆದು ನೋಡುವಾಗ ಹಿಂಭಾಗದ ಬಾಗಿಲು ಒಡೆದಿರುವುದು ಗಮನಕ್ಕೆ ಬಂದಿದೆ.

ಸುಮಾರು 24 ಗ್ರಾಂ ತೂಕದ ಚಿನ್ನದ ಸರ, 8 ಗ್ರಾಂ ತೂಕದ ಚಿನ್ನದ ಸರ, 6 ಗ್ರಾಂ ತೂಕದ ಚಿನ್ನದ ಬೆಂಡೋಲೆ, ಮಕ್ಕಳ ಬೆಂಡೋಲೆಗಳು ಸೇರಿದಂತೆ ಅಂದಾಜು ರೂಪಾಯಿ 1.50 ಲಕ್ಷ ಮೌಲ್ಯದ ಸುಮಾರು 41 ಗ್ರಾಂ ಚಿನ್ನಾಭರಣ ಕಳವಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಸ್ತುತ ಕಳ್ಳತನವಾದ 41 ಗ್ರಾಂ ಚಿನ್ನದಲ್ಲಿ 17 ಗ್ರಾಂ ಚಿನ್ನವನ್ನು ಪೊಲೀಸರು ಆರೋಪಿಗಳಿಂದ ವಶಪಡಿಸಿಕೊಂಡಿದ್ದಾರೆ. ಉಳಿದ ಚಿನ್ನಾಭರಣಗಳು ಪತ್ತೆಯಾಗಬೇಕಿದೆ.

ಆರೋಪಿ ಸದ್ದಾಂ ಹೇಳಿಕೆ ನೀಡಿದಂತೆ ಕಳ್ಳತನಕ್ಕೆ ಬಳಸಿದ್ದ ಜೀಪನ್ನು ವಶಕ್ಕೆ ಪಡೆಯಲು ಕಡಬ ಪೊಲೀಸರು ಆರೋಪಿ ಸದ್ದಾಂನ ಮನೆಗೆ ಹೋದಾಗ ಮನೆಯಲ್ಲಿನ ಮಹಿಳೆಯರು ಮಕ್ಕಳೊಂದಿಗೆ ಪೊಲೀಸರನ್ನು ಅಡ್ಡಗಟ್ಟಿದ್ದಾರೆ. ಮನೆಗೆ ಮಹಿಳಾ ಪೊಲೀಸರೊಂದಿಗೆ ಬರುವಂತೇ ಗಲಾಟೆ ಮಾಡಿ, ಜೀಪು ಬಿಟ್ಟುಕೊಡದ ಘಟನೆಯೂ ನಡೆದಿದೆ ಎನ್ನಲಾಗಿದೆ.

ಬಾಗಲಕೋಟೆಲ್ಲಿ ಕಳ್ಳರ ವಿಡಿಯೋ ಸೆರೆ:ರಬಕವಿ-ಬನಹಟ್ಟಿ ನಗರದ ವಿದ್ಯಾನಗರ ಬಡಾವಣೆಯ ವಿವಿಧೆಡೆ ಸರಣಿ ಮನೆಗಳ್ಳತನ ಪ್ರಕರಣಗಳು ನಡೆದಿದೆ. ಇಬ್ಬರು ಯುವಕರು ಏಳೆಂಟು ಮನೆಗಳಿಗೆ ನುಗ್ಗಿ ಕೃತ್ಯ ಎಸಗಿದ್ದಾರೆ. ಮುಸುಕು ಧರಿಸಿ, ಮಾರಕಾಸ್ತ್ರಗಳೊಂದಿಗೆ ಮನೆಗಳಿಗೆ ನುಗ್ಗುವುದು, ಬೀಗ ಒಡೆಯುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿವೆ.

ಇದನ್ನೂ ಓದಿ:ರಾಜಾರೋಷವಾಗಿ ಮನೆಗಳಿಗೆ ನುಗ್ಗುವ ಕಳ್ಳರು; ಬೀಗ ಹಾಕಿದ ಮನೆಗಳೇ ಇವರ ಟಾರ್ಗೆಟ್​- ಸಿಸಿಟಿವಿ ದೃಶ್ಯ

Last Updated : Jul 17, 2023, 2:40 PM IST

ABOUT THE AUTHOR

...view details