ಕರ್ನಾಟಕ

karnataka

ಮರವೂರು ಸೇತುವೆಯಲ್ಲಿ ಬಿರುಕು; ಏರ್ಪೋರ್ಟ್‌ಗೆ ಸಂಪರ್ಕ ಕಡಿತ- ಹೀಗಿದೆ ಪರ್ಯಾಯ ವ್ಯವಸ್ಥೆ..

ಮರವೂರು ಸೇತುವೆಯ ಒಂದು ಕಡೆ ಬಿರುಕು ಕಾಣಿಸಿಕೊಂಡಿದೆ. ಪರಿಣಾಮ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ಈ ರಸ್ತೆ ಸಂಚಾರ ಸ್ಥಗಿತಗೊಳಿಸಲಾಗಿದೆ.

By

Published : Jun 15, 2021, 9:18 AM IST

Published : Jun 15, 2021, 9:18 AM IST

Updated : Jun 15, 2021, 10:41 AM IST

ETV Bharat / state

ಮರವೂರು ಸೇತುವೆಯಲ್ಲಿ ಬಿರುಕು; ಏರ್ಪೋರ್ಟ್‌ಗೆ ಸಂಪರ್ಕ ಕಡಿತ- ಹೀಗಿದೆ ಪರ್ಯಾಯ ವ್ಯವಸ್ಥೆ..

Crack on the Maravur Bridge connecting Mangalore International Airport
ಮರವೂರು ಸೇತುವೆಯಲ್ಲಿ ಬಿರುಕು

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ ಮರವೂರು ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ರಸ್ತೆ ಸಂಚಾರ ಸ್ಥಗಿತಗೊಳಿಸಲಾಗಿದೆ.

ಕರಾವಳಿಯಲ್ಲಿ ಭಾರಿ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸೇತುವೆಯ ಪಿಲ್ಲರ್ ಸ್ವಲ್ಪ ಕುಸಿದಿದೆ. ಇದರಿಂದಾಗಿ ಮರವೂರು ಸೇತುವೆಯ ಒಂದು ಕಡೆ ಬಿರುಕು ಕಾಣಿಸಿಕೊಂಡಿದೆ. ರಾತ್ರಿ 3 ಗಂಟೆಗೆ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

ಮರವೂರು ಸೇತುವೆಯಲ್ಲಿ ಬಿರುಕು

ಘಟನಾ ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡ ಪರಿಣಾಮ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ಈ ರಸ್ತೆ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದರು.

ವಿಮಾನ‌ ನಿಲ್ದಾಣಕ್ಕೆ ಮಂಗಳೂರಿನಿಂದ ಹೋಗುವವರು ನಂತೂರು, ವಾಮಂಜೂರು, ಗುರುಪುರ, ಕೈಕಂಬ, ಬಜ್ಪೆ ರಸ್ತೆಯಲ್ಲಿ, ಉಡುಪಿ ಕಡೆಯಿಂದ ಬರುವವರು ಮುಲ್ಕಿ, ಕಟೀಲು, ಬಜ್ಪೆ ಮೂಲಕ ಹೋಗಬಹುದು ಎಂದು ತಿಳಿಸಿದರು.

Last Updated : Jun 15, 2021, 10:41 AM IST

ABOUT THE AUTHOR

...view details