ಕರ್ನಾಟಕ

karnataka

ETV Bharat / state

ದನ ಕಳವು ಪ್ರಕರಣ: ಮೂವರು ಖದೀಮರ ಬಂಧನ - ಮಂಗಳೂರು ದನ ಕಳವು ಪ್ರಕರಣ

ಮಂಗಳೂರಿನ ಕೊಣಾಜೆಯ ಮನೆಯೊಂದರಿಂದ ನಾಲ್ಕು ದನಗಳನ್ನು ಕಳವು ಮಾಡಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

konaje Cow theft case, ಕೊಣಾಜೆ ದನ ಕಳವು ಪ್ರಕರಣ
ದನ ಕಳವು ಪ್ರಕರಣ

By

Published : Dec 18, 2019, 5:30 AM IST

ಮಂಗಳೂರು:ಇಲ್ಲಿನ ಕೊಣಾಜೆಯ ಮನೆಯೊಂದರಿಂದ ನಾಲ್ಕು ದನಗಳನ್ನು ಕಳವು ಮಾಡಿದ್ದ ಮೂವರು ಆರೋಪಿಗಳನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ‌.

ಮೂಡಬಿದ್ರೆ ನೀರಳಿಕೆಯ ಕಲಂದರ್ ಶಾಫಿ (28), ಹರೇಕಳ ದಬ್ಬೇಲಿಯ ಮಹಮ್ಮದ್ ಸಾದಿಕ್ (30) ಹಾಗೂ ನರಿಂಗಾನ ಗ್ರಾಮದ ವಿದ್ಯಾನಗರ ಕಟ್ಟೆಯ ಆಸಿಫ್ (23) ಬಂಧಿತ ಆರೋಪಿಗಳು.

ಬಂಧಿತರಿಂದ ಕೃತ್ಯಕ್ಕೆ ಬಳಸುತ್ತಿದ್ದ ಕಾರು ಮತ್ತು ಕಳವುಗೈದ ನಾಲ್ಕು ದನಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೊಣಾಜೆ ಗ್ರಾಮದ ನಡುಪದವಿನ ಕಲ್ಯಾಣಿ ಎಂಬುವರ ಮನೆಯಿಂದ ನಾಲ್ಕು ದನಗಳ ಕಳವು ನಡೆದಿತ್ತು. ಈ ಬಗ್ಗೆ ಕೊಣಾಜೆ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ABOUT THE AUTHOR

...view details