ಬಂಟ್ವಾಳ: ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಮತ್ತು ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮವನ್ನು ಸಂಪರ್ಕಿಸುವ ನೇತ್ರಾವತಿ ನದಿ ಕಿನಾರೆಯ ಕೂಟೇಲು ಎಂಬಲ್ಲಿ ಗೋಮಾಂಸದ ತ್ಯಾಜ್ಯವನ್ನು ನೀರಿಗೆ ಎಸೆದು ಪರಾರಿಯಾದ ಘಟನೆ ಸೋಮವಾರ ಸಂಜೆ ಬೆಳಕಿಗೆ ಬಂದಿದೆ.
ಬಂಟ್ವಾಳದಲ್ಲಿ ಗೋಮಾಂಸದ ತ್ಯಾಜ್ಯ ನೇತ್ರಾವತಿ ನದಿಗೆ ಎಸೆದು ಕಿಡಿಗೇಡಿಗಳು ಪರಾರಿ - ವಿಶ್ವ ಹಿಂದು ಪರಿಷತ್
ನೇತ್ರಾವತಿ ನದಿ ಕಿನಾರೆಯ ಕೂಟೇಲು ಎಂಬಲ್ಲಿ ಗೋ ಮಾಂಸದ ತ್ಯಾಜ್ಯವನ್ನು ನೀರಿಗೆ ಎಸೆದು ಕಿಡಿಗೇಡಿಗಳು ಪರಾರಿಯಾಗಿದ್ದಾರೆ.
ಗೋ ತ್ಯಾಜ್ಯಾ
ಸೋಮವಾರ ಸಂಜೆ ಸೇತುವೆಯಿಂದ ಹಾದು ಹೋಗುವ ಸಂದರ್ಭದಲ್ಲಿ ಸ್ಥಳೀಯರಿಗೆ ಹಸುವಿನ ಕಾಲು ಮತ್ತು ತ್ಯಾಜ್ಯಗಳು ಇರುವುದು ಕಂಡುಬಂತು. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಮಹಜರು ನಡೆಸಿದ್ದಾರೆ.
ಈ ಕುರಿತು ಬಂಟ್ವಾಳ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.