ಕರ್ನಾಟಕ

karnataka

ETV Bharat / state

ಮಂಗಳೂರು: ನಾಯಿಗಳಿಗೆ ಹಾಕಿದ ವಿಷಾಹಾರ ತಿಂದು ಹಸು ಸಾವು; ಆರೋಪಿ ವಿರುದ್ಧ ಕ್ರಮಕ್ಕೆ ಒತ್ತಾಯ - cow died after eating poisonous food

ನಾಯಿಗಳಿಗೆ ಹಾಕಿದ ವಿಷಾಹಾರ ಸೇವಿಸಿ ಹಸು ಸಾವನ್ನಪ್ಪಿರುವ ಘಟನೆ ದಕ್ಷಿಣಕನ್ನಡ ಜಿಲ್ಲೆಯ ತಲಪಾಡಿಯಲ್ಲಿ ನಡೆದಿದೆ.

cow-died-after-eating-poisonous-food-in-ullala-talappady
ನಾಯಿಗಳಿಗೆ ಹಾಕಿದ ವಿಷಾಹಾರ ತಿಂದು ಹಸು ಸಾವು : ಆರೋಪಿ ವಿರುದ್ಧ ಕ್ರಮಕೈಗೊಳ್ಳಲು ಒತ್ತಾಯ

By

Published : Aug 17, 2023, 6:52 PM IST

ಉಳ್ಳಾಲ (ದಕ್ಷಿಣಕನ್ನಡ) :ನಾಯಿಗಳಿಗೆ ಹಾಕಿದ ವಿಷಾಹಾರವನ್ನು ತಿಂದು ಹಸುವೊಂದು ಸಾವನ್ನಪ್ಪಿರುವ ಘಟನೆ ತಲಪಾಡಿಯ ಅಲಂಕಾರಗುಡ್ಡೆ ಎಂಬಲ್ಲಿ ನಡೆದಿದೆ. ದುಷ್ಕರ್ಮಿಗಳು ಇಲ್ಲಿನ ಹಲವು ನಾಯಿಗಳಿಗೆ ವಿಷಪ್ರಾಶನ ಮಾಡಿದ್ದು, ಮೇಯಲು ಬಿಟ್ಟಿದ್ದ ಹಸು ಈ ವಿಷಾಹಾರವನ್ನು ಸೇವಿಸಿ ಸಾವನ್ನಪ್ಪಿದೆ ಎಂದು ಅಮಿತಾ ಆರೋಪಿಸಿದ್ದಾರೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಬಜರಂಗದಳ ಒತ್ತಾಯಿಸಿದೆ.

ಆಹಾರದಲ್ಲಿ ವಿಷವಿಕ್ಕಿ ಸುಮಾರು 25 ನಾಯಿಗಳನ್ನು ಕೊಲ್ಲಲಾಗಿದೆ. ಈ ವೇಳೆ ನಾಯಿಗೆ ಹಾಕಿದ ವಿಷಾಹಾರವನ್ನು ತಿಂದ ಹಸುವು ಸಾವನ್ನಪ್ಪಿದೆ. ಸ್ಥಳೀಯ ವ್ಯಕ್ತಿಯೋರ್ವ ಕೃತ್ಯ ಎಸಗಿದ್ದಾನೆ ಅಮಿತಾ ಆರೋಪಿಸಿದ್ದಾರೆ. ಈ ವ್ಯಕ್ತಿಯು ಮೇಕೆಗಳನ್ನು ಸಾಕುತ್ತಿದ್ದು, ಇತ್ತೀಚಿಗೆ ಆತನ ಮೇಕೆಯೊಂದಕ್ಕೆ ನಾಯಿಗಳು ದಾಳಿ ನಡೆಸಿದ್ದವು. ಇದರಿಂದ ಆ ವ್ಯಕ್ತಿಯು ಕೋಪಗೊಂಡು ಸುತ್ತಮುತ್ತಲಿನ ನಾಯಿಗಳಿಗೆ ವಿಷಾಹಾರ ಉಣಿಸಿದ್ದಾನೆ. ಸುಮಾರು 25ಕ್ಕೂ ಹೆಚ್ಚು ನಾಯಿಗಳು ಸಾವನ್ನಪ್ಪಿದೆ. ನಾಯಿಗಳಿಗೆ ವಿಷಪ್ರಾಶಣ ಮಾಡಿದ ಬಗ್ಗೆ ವ್ಯಕ್ತಿಯು ಖುದ್ದಾಗಿ ಹೇಳಿರುವುದಾಗಿ ಅವರು ತಿಳಿಸಿದ್ದಾರೆ.

ಅಮಿತಾ ದನ ಸಾಕಣೆ ಮಾಡುತ್ತಿದ್ದು, ಬುಧವಾರ ಸಂಜೆ ಹಸುವೊಂದನ್ನು ಮೇಯಲು ಮನೆ ಪಕ್ಕದ ದೈವಸ್ಥಾನದ ಬಳಿ ಕಟ್ಟಿ ಹಾಕಿದ್ದರು. ಹಸು ಅಲ್ಲಿಯೇ ಇದ್ದ ವಿಷಾಹಾರವನ್ನು ಸೇವಿಸಿದೆ. ಬಳಿಕ ರಾತ್ರಿ ವೇಳೆಗೆ ಅಸ್ವಸ್ಥಗೊಂಡು ಹಸು ಸಾವನ್ನಪ್ಪಿದೆ. ಈ ಬಗ್ಗೆ ಪರಿಶೀಲನೆ ನಡೆಸಿದ ಪಶು ವೈದ್ಯರು ಹಸು ವಿಷಾಹಾರ ಸೇವಿಸಿ ಸತ್ತಿರುವುದಾಗಿ ಹೇಳಿದ್ದಾರೆ.

ಘಟನಾ ಸ್ಥಳಕ್ಕೆ ಬಜರಂಗದಳ ಉಳ್ಳಾಲ ನಗರ ಪ್ರಖಂಡ ಸಂಯೋಜಕ ಅರ್ಜುನ್ ಮಾಡೂರು ಭೇಟಿ ನೀಡಿ, ಕೃತ್ಯ ಎಸಗಿದ ಆರೋಪಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಅಲ್ಲದೆ ಸೂಕ್ತ ಪರಿಹಾರ ಒದಗಿಸುವಂತೆ ಒತ್ತಾಯಿಸಿದ್ದಾರೆ.

ಬೆಂಗಳೂರಿನಲ್ಲಿ ನಾಯಿಗಳಿಗೆ ವಿಷಾಹಾರ ಉಣಿಸಿ ಹತ್ಯೆ: ಇತ್ತೀಚೆಗೆ ಬೀದಿ ಶ್ವಾನಗಳಿಗೆ ವಿಷವುಣಿಸಿ ಹತ್ಯೆಗೈದಿದ್ದ ಅಮಾನವೀಯ ಘಟನೆ ಬೆಂಗಳೂರಿನ ರಾಜರಾಜೇಶ್ವರಿ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಸುಮಾರು ಹದಿನೆಂಟು ನಾಯಿಗಳ ಕಳೇಬರ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅನಿಮಲ್ ವೆಲ್​ಫೇರ್ ಆ್ಯಕ್ಟಿವಿಸ್ಟ್ ಒಬ್ಬರು ನೀಡಿದ ದೂರಿನನ್ವಯ ಈ ಸಂಬಂಧ ಪ್ರಕರಣ ದಾಖಲಾಗಿತ್ತು.

ಇಲ್ಲಿನ ರಾಜರಾಜೇಶ್ವರಿ ನಗರ, ಹೊಸಕೆರೆಹಳ್ಳಿ ವಾರ್ಡ್ ಭಾಗದಲ್ಲಿ ನಾಯಿಗಳ ಶವಗಳು ಬಹುತೇಕ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದವು. ನಾಯಿಗಳ ಮೃತದೇಹಗಳನ್ನು ಚೀಲದಲ್ಲಿ ಹಾಕಿ ತುಂಬಿ ದುಷ್ಕರ್ಮಿಗಳು ಎಸೆದಿದ್ದರು. ಈ ಬಗ್ಗೆ ರಾಜರಾಜೇಶ್ವರಿ ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ :Bengaluru crime: ವಿಷವುಣಿಸಿ 18 ಬೀದಿ ನಾಯಿಗಳ ಹತ್ಯೆ.. ಎಫ್ಐಆರ್ ದಾಖಲು

ABOUT THE AUTHOR

...view details