ಕರ್ನಾಟಕ

karnataka

By

Published : Feb 20, 2021, 9:48 PM IST

ETV Bharat / state

ಸೋಮವಾರದಿಂದ ನ್ಯಾಯಾಲಯಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲಿವೆ: ಹೈಕೋರ್ಟ್​ ಮುಖ್ಯ ನ್ಯಾಯಮೂರ್ತಿ

ಹೈಕೋರ್ಟ್​ ನಲ್ಲಿ ವೃತ್ತಿ ನಿರ್ವಹಿಸುವುದು ಅಷ್ಟೇನೂ ಮಹತ್ತರವಾದ ವಿಚಾರವಲ್ಲ. ಆದರೆ ಕೆಳ ಹಂತದ ನ್ಯಾಯಾಲಯಗಳಲ್ಲಿ ವಕೀಲಿ ವೃತ್ತಿ ನಿರ್ವಹಿಸುವುದು ಸವಾಲಿನ ಕೆಲಸ. ಸಿವಿಲ್ ಪ್ರಕರಣಗಳನ್ನು ಅಧೀನ ನ್ಯಾಯಾಲಯದಲ್ಲಿ ನಡೆಸುವುದು ವಕೀಲರಿಗೆ ಸವಾಲಿನ ವಿಷಯ ಎಂದರು.

A S Oka
ನ್ಯಾ. ಎ.ಎಸ್ ಓಕಾ

ಮಂಗಳೂರು: ಮುಂದಿನ ಸೋಮವಾರದಿಂದ ರಾಜ್ಯದ ಎಲ್ಲಾ ನ್ಯಾಯಾಲಯಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಲಿವೆ ಎಂದು ರಾಜ್ಯ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಹೇಳಿದ್ದಾರೆ.

ಮಂಗಳೂರಿನಲ್ಲಿ ವಕೀಲರ ಸಂಘದ ಸಭೆಯಲ್ಲಿ ಭಾಗವಹಿಸಿದ ಅವರು, ಕೊರೊನಾ ಸೋಂಕಿನ ನಿರ್ಬಂಧದ ಬಳಿಕ ಇದೇ ಮೊದಲ ಬಾರಿಗೆ ರಾಜ್ಯದ ಎಲ್ಲಾ ನ್ಯಾಯಾಲಯಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲಿವೆ. ಆದರೆ ಕಕ್ಷಿದಾರರ ಅಗತ್ಯವಿದ್ದಲ್ಲಿ ಮಾತ್ರ ಅವರ ಹಾಜರಾತಿಯನ್ನು ಖಾತ್ರಿಗೊಳಿಸುವಂತೆ ವಕೀಲರಿಗೆ ಕರೆ ನೀಡಿದ ಅವರು, ನ್ಯಾಯದಾನ ವ್ಯವಸ್ಥೆಯಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಕಿವಿಮಾತು ಹೇಳಿದರು.

ಸೋಮವಾರದಿಂದ ಎಂದಿನಂತೆ ನ್ಯಾಯಾಲಯಗಳ ಕಾರ್ಯಕಲಾಪ ಆರಂಭ: ನ್ಯಾ. ಎ.ಎಸ್.ಓಕಾ

ಹೈಕೋರ್ಟ್​​ನಲ್ಲಿ ವೃತ್ತಿ ನಿರ್ವಹಿಸುವುದು ಅಷ್ಟೇನೂ ಮಹತ್ತರವಾದ ವಿಚಾರವಲ್ಲ. ಆದರೆ ಕೆಳ ಹಂತದ ನ್ಯಾಯಾಲಯಗಳಲ್ಲಿ ವಕೀಲಿ ವೃತ್ತಿ ನಿರ್ವಹಿಸುವುದು ಸವಾಲಿನ ಕೆಲಸ. ಸಿವಿಲ್ ಪ್ರಕರಣಗಳನ್ನು ಅಧೀನ ನ್ಯಾಯಾಲಯದಲ್ಲಿ ನಡೆಸುವುದು ವಕೀಲರಿಗೆ ಸವಾಲಿನ ವಿಷಯ. ಈ ಸವಾಲನ್ನು ನಿಭಾಯಿಸಲು ವಕೀಲರು ಮುಂದಾಗಬೇಕು. ಈ ಮೂಲಕ ನ್ಯಾಯದಾನ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದರು.

ನ್ಯಾಯಾಲಯ ಆವರಣದಲ್ಲಿ ನಿರ್ಮಿಸಲು ಉದ್ದೇಶಿಸಿರುವ ವಕೀಲರ ಸಂಘದ ಕಟ್ಟಡದ ನಿವೇಶನ ಪರಿಶೀಲಿಸಿದ ನ್ಯಾಯಮೂರ್ತಿಗಳು, ಪಾಳು ಬಿದ್ದಿರುವ ಸರ್ಕಾರಿ ಅಭಿಯೋಜಕರ ಕಟ್ಟಡದ ಬಗ್ಗೆ ವರದಿ ನೀಡುವಂತೆ ನ್ಯಾಯಾಂಗ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭ ಜಿಲ್ಲಾ ನ್ಯಾಯಾಲಯಗಳ ಆಡಳಿತಾತ್ಮಕ ನ್ಯಾಯಮೂರ್ತಿ ದಿನೇಶ್ ಕುಮಾರ್, ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಮುರಳೀಧರ ಪೈ, ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎನ್.ನರಸಿಂಹ ಹೆಗ್ಡೆ ಉಪಸ್ಥಿತರಿದ್ದರು.

ಇದನ್ನೂ ಓದಿ:ಸಂಪತ್ ರಾಜ್, ಅಬ್ದುಲ್ ರಕೀಬ್ ಜಾಕಿರ್​ಗೆ ಜಾಮೀನು ಪ್ರಶ್ನಿಸಿ ಸುಪ್ರೀಂ ಗೆ ಅರ್ಜಿ

ABOUT THE AUTHOR

...view details