ಕರ್ನಾಟಕ

karnataka

ಮಸೀದಿ ನವೀಕರಣ ವೇಳೆ ಪ್ರಾಚೀನ ಶೈಲಿಯ ಕಟ್ಟಡ ಪತ್ತೆ; ಪ್ರವೇಶ ನಿಷೇಧಿಸಿ ಕೋರ್ಟ್ ತಡೆಯಾಜ್ಞೆ

ಮಂಗಳೂರು ತಾಲೂಕಿನ ಮಳಲಿಯಲ್ಲಿರುವ ಸರ್ವೇ ನಂ 1/10 ರಲ್ಲಿ ಅಸ್ಸಾಯಿದ್ ಅಬ್ದುಲ್ಲಾಹಿಲ್ ಮದನಿ ಜುಮಾ ಮಸೀದಿ ಕಟ್ಟಡ ನವೀಕರಣ ಸಂದರ್ಭದಲ್ಲಿ ಮಸೀದಿ ಅರ್ಧ ಕಟ್ಟಡ ಕೆಡವಿದಾಗ ಪ್ರಾಚೀನ ಶೈಲಿಯ ಕಟ್ಟಡ ಕುರುಹು ಪತ್ತೆಯಾಗಿತ್ತು.

By

Published : Apr 22, 2022, 9:34 PM IST

Published : Apr 22, 2022, 9:34 PM IST

ಹೈಕೋರ್ಟ್​
ಹೈಕೋರ್ಟ್​

ಮಂಗಳೂರು:ಮಸೀದಿ ನವೀಕರಣದ ವೇಳೆ ಪ್ರಾಚೀನ ಶೈಲಿಯ ಕಟ್ಟಡ ಪತ್ತೆಯಾದ ಹಿನ್ನೆಲೆಯಲ್ಲಿ ಕಟ್ಟಡ ಪ್ರವೇಶಿಸದಂತೆ ಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ‌ನೀಡಿದೆ. ಮಂಗಳೂರು ತಾಲೂಕಿನ ಮಳಲಿಯಲ್ಲಿರುವ ಸರ್ವೇ ನಂ 1/10 ನಲ್ಲಿ ಅಸ್ಸಾಯಿದ್ ಅಬ್ದುಲ್ಲಾಹಿಲ್ ಮದನಿ ಜುಮಾ ಮಸೀದಿ ಕಟ್ಟಡ ನವೀಕರಣ ಸಂದರ್ಭದಲ್ಲಿ ಕಟ್ಟಡ ಕೆಡವಿದಾಗ ಪ್ರಾಚೀನ ಶೈಲಿಯ ಕಟ್ಟಡದ ಕುರುಹುಗಳು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದರು. ಈ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.

ಇದೀಗ ಗಂಜಿಮಠ ನಿವಾಸಿಯಾದ ಧನಂಜಯ ಅವರು ಮಂಗಳೂರಿನ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು ಇದನ್ನು ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಾಲಯವು ದೇವಸ್ಥಾನದಂತೆ ಹೋಲುವ ಸದ್ರಿ ಕಟ್ಟಡದಲ್ಲಿ ಯಾವುದೇ ಕಾಮಗಾರಿ ನಡೆಸದಂತೆ ಮತ್ತು ಕಟ್ಟಡಕ್ಕೆ ಯಾವುದೇ ಹಾನಿ ಮಾಡದಂತೆ ತಡೆಯಾಜ್ಞೆ ನೀಡಿದೆ. ಆ ಕಟ್ಟಡದ ಒಳಗಡೆ ಮಸೀದಿ ಕಮಿಟಿಯವರಾಗಲಿ ಮತ್ತು ಅನುಯಾಯಿಗಳಿಗೆ ಪ್ರವೇಶ ನಿಷೇಧಿಸಿ ಆದೇಶಿಸಿದೆ. ಮುಂದಿನ ವಿಚಾರಣೆಯನ್ನು ಜೂನ್ 3 ಕ್ಕೆ ನಿಗದಿಪಡಿಸಲಾಗಿದೆ.

ಇದನ್ನೂ ಓದಿ:ಶಾರದಾ ಲಕ್ಷ್ಮೀ ನರಸಿಂಹ ದೇವಾಲಯದ ದರ್ಶನ ಪಡೆದ ಬಿಎಸ್​ವೈ, ಅರುಣ್ ಸಿಂಗ್

For All Latest Updates

TAGGED:

ABOUT THE AUTHOR

...view details