ಕರ್ನಾಟಕ

karnataka

ETV Bharat / state

ಟಾರ್ಗೆಟ್ ಇಲಿಯಾಸ್ ಕೊಲೆ ಪ್ರಕರಣ: ಐವರು ಆರೋಪಿಗಳು ಖುಲಾಸೆ - ಕೊಲೆ ಪ್ರಕರಣ ಆರೋಪಿಗಳು ಖುಲಾಸೆ

2018ರಲ್ಲಿ ಮಂಗಳೂರಿನಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಐವರು ಆರೋಪಿಗಳು ದೋಷಮುಕ್ತಗೊಳಿಸಿ ಜಿಲ್ಲಾ ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

ಕೊಲೆ ಪ್ರಕರಣ ಆರೋಪಿಗಳು ಖುಲಾಸೆ
ಕೊಲೆ ಪ್ರಕರಣ ಆರೋಪಿಗಳು ಖುಲಾಸೆ

By ETV Bharat Karnataka Team

Published : Dec 12, 2023, 11:40 AM IST

ಮಂಗಳೂರು: 'ಟಾರ್ಗೆಟ್ ಗ್ಯಾಂಗ್'ನ ಮುಖ್ಯಸ್ಥ ಟಾರ್ಗೆಟ್ ಇಲಿಯಾಸ್‌ನ ಕೊಲೆ ಪ್ರಕರಣದಲ್ಲಿ ಐವರು ಆರೋಪಿಗಳನ್ನು ದೋಷಮುಕ್ತಗೊಳಿಸಿ ಮಂಗಳೂರಿನ ಮೂರನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ. ಉಳ್ಳಾಲ ಧರ್ಮನಗರದ ದಾವೂದ್, ಮಹಮ್ಮದ್ ಶಮೀರ್ ಅಲಿಯಾಸ್ ಕಡಪರ ಶಮೀರ್, ರಿಯಾಜ್, ನಮೀರ್ ಹಂಝ, ಅಬ್ದುಲ್ ಖಾದರ್ ಅಲಿಯಾಸ್ ಜಬ್ಬಾ‌ರ್ ಖುಲಾಸೆಗೊಂಡವರು.

ಟಾರ್ಗೆಟ್ ಇಲಿಯಾಸ್‌ನನ್ನು 2018ರ ಜ.13ರಂದು ನಗರದ ಜಪ್ಪು ಕುಡುಪಾಡಿ ಬಳಿ ಇರುವ ಅಪಾರ್ಟ್‌ಮೆಂಟ್‌ನಲ್ಲಿ ಚೂರಿಯಿಂದ ಇರಿದು ಕೊಲೆ ಮಾಡಲಾಗಿತ್ತು. ಉಳ್ಳಾಲ ದಾವೂದ್, ಮಹಮ್ಮದ್ ಶಮೀರ್, ಉಮ್ಮರ್ ನವಾಫ್, ನೌಶದ್, ಮೊಹಮ್ಮದ್ ನಾಸಿರ್, ರಿಯಾಜ್, ನಮೀರ್ ಹಂಝ, ಅಸ್ಲರ್ ಆಲಿ ಆಲಿಯಾಸ್ ಅಶ್ರಫ್, ಅಬ್ದುಲ್ ಖಾದರ್ ಆಲಿಯಾಸ್ ಜಬ್ಬಾರ್ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಸಮಗ್ರ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸಂಧ್ಯಾ ಎಸ್‌. ಅವರು 5 ಮಂದಿ ಆರೋಪಿಗಳು ನಿರ್ದೋಷಿಗಳೆಂದು ತೀರ್ಪು ನೀಡಿದ್ದಾರೆ.

ಐವರು ಆರೋಪಿಗಳ ಪರವಾಗಿ ನ್ಯಾಯವಾದಿಗಳಾದ ಬಿ.ಜಿನೇಂದ್ರ ಕುಮಾರ್, ಅರವಿಂದ ಕುಮಾರ್ ಕೆ., ಬಿ.ಅಭಿಜಿತ್ ಜೈನ್, ವಸುಧಾ ಬಿ. ಮತ್ತು ಅನುಶ್ರೀ ಹೆಗ್ಡೆ ಎಂ. ವಾದಿಸಿದ್ದರು. ಈ ಪ್ರಕರಣದಲ್ಲಿ ಉಮ್ಮರ್ ನವಾಫ್, ನೌಶದ್‌, ಮೊಹಮ್ಮದ್ ನಾಸಿರ್, ಅಸ್ಟರ್ ಆಲಿ ಆಲಿಯಾಸ್ ಅಶ್ರಫ್ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದಾರೆ.

ಇದನ್ನೂ ಓದಿ:ಕಲಬುರಗಿ ವಕೀಲನ ಕೊಲೆ ಪ್ರಕರಣ ಇಡೀ ನ್ಯಾಯಾಂಗ ವ್ಯವಸ್ಥೆಗೆ ಬೆದರಿಕೆ; ಹೈಕೋರ್ಟ್ ಕಳವಳ

ABOUT THE AUTHOR

...view details