ಕರ್ನಾಟಕ

karnataka

ETV Bharat / state

ವಿದ್ಯುತ್ ಶಾಕ್: ಕೊಕ್ರಾಡಿಯಲ್ಲಿ ದಂಪತಿ ದಾರುಣ ಸಾವು - undefined

ವಿದ್ಯುತ್ ಶಾಕ್​ನಿಂದ ದಂಪತಿ ದಾರುಣವಾಗಿ ಮೃತಪಟ್ಟಿರುವ ಘಟನೆ ದಕ್ಷಿಣಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಕೊಕ್ರಾಡಿಯಲ್ಲಿ ನಡೆದಿದೆ.

ದಂಪತಿ ಸಾವು

By

Published : Apr 5, 2019, 8:43 PM IST

ಮಂಗಳೂರು:ವಿದ್ಯುತ್ ಶಾಕ್​ನಿಂದ ದಂಪತಿ ಮೃತಪಟ್ಟಿರುವ ಘಟನೆ ದಕ್ಷಿಣಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಕೊಕ್ರಾಡಿಯಲ್ಲಿ ನಡೆದಿದೆ.

ಕೊಕ್ರಾಡಿಯ ಸಂಜೀವ ಮೂಲ್ಯ (55 ) ಮತ್ತು‌ ಸರೋಜಿನಿ (50) ಮೃತ ದಂಪತಿ. ಸ್ವಿಚ್ ಬೋರ್ಡ್​ನಲ್ಲಿ ಬೆಂಕಿ ಕಂಡಿದ್ದು, ಸರೋಜಿನಿ ಫ್ಯೂಸ್​ ತೆಗೆಯಲು ಹೋಗಿದ್ದರು. ಈ ವೇಳೆ ಅವರಿಗೆ ವಿದ್ಯುತ್ ಶಾಕ್ ಹೊಡೆದಿದ್ದರಿಂದ ಅವರು ಕೂಗಿಕೊಂಡಿದ್ದರು.ಇದನ್ನು ಗಮನಿಸಿದ ಪತಿ ಸಂಜೀವ್ ಪತ್ನಿಯ ಸಹಾಯಕ್ಕೆ ಮುಂದಾಗಿದ್ದ ವೇಳೆ ಅವರಿಗೂ ವಿದ್ಯುತ್ ತಗುಲಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ವಿದ್ಯುತ್​ನ ತಾಂತ್ರಿಕ ದೋಷವೇ ಈ ಅನಾಹುತಕ್ಕೆ ಕಾರಣವೆಂದು ಮೇಲ್ನೊಟಕ್ಕೆ ಕಂಡು ಬಂದಿದೆ. ಈ ಕುರಿತುಸ್ಥಳೀಯ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

For All Latest Updates

TAGGED:

ABOUT THE AUTHOR

...view details