ಮಂಗಳೂರು: ಕೊರೊನಾಪೀಡಿತ ದಂಪತಿ ನಗರ ಪೊಲೀಸ್ ಕಮೀಷನರ್ಗೆ ಕರೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಸುರತ್ಕಲ್ನ ಚಿತ್ರಾಪುರದ ರಹೆಜಾ ಅಪಾರ್ಟ್ಮೆಂಟ್ನಲ್ಲಿ ನಡೆದಿದೆ. ಇವರ ಪರೀಕ್ಷಾ ವರದಿ ಬಂದಿದ್ದು, ನೆಗೆಟಿವ್ ಆಗಿದೆ. ಆದರೆ ಇವರು ಇದೇ ಭಯದಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ.
ರಮೇಶ್ ಕುಮಾರ್ ಮತ್ತು ಗುಣ ಆತ್ಮಹತ್ಯೆ ಮಾಡಿಕೊಂಡ ದಂಪತಿ ಎಂದು ತಿಳಿದುಬಂದಿದೆ. ರಮೇಶ್ ಕುಮಾರ್ ಮುಂಜಾನೆ 6 ಗಂಟೆ ಸುಮಾರಿಗೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ಅವರಿಗೆ ಕರೆ ಮಾಡಿ ನಾವಿಬ್ಬರೂ ಕೊರೊನಾ ಪೀಡಿತರಾಗಿದ್ದೇವೆ. ನನ್ನ ಹೆಂಡತಿ ಈಗಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದೀಗ ನಾನು ಕೂಡಾ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ನಮ್ಮ ಅಂತ್ಯಸಂಸ್ಕಾರ ಮಾಡಿ ಎಂದು ಮನವಿ ಮಾಡಿದ್ದರು.
ಕೂಡಲೇ ಪೊಲೀಸ್ ಕಮೀಷನರ್ ಆತನಿಗೆ ಕರೆ ಮಾಡಿದರೂ ಅವರು ಕರೆ ಸ್ವೀಕರಿಸಿರಲಿಲ್ಲ. ಆದರೆ ಪೊಲೀಸ್ ಕಮೀಷನರ್ ಆತನ ಜೀವ ಉಳಿಸಲು ಸಾಮಾಜಿಕ ಜಾಲತಾಣದಲ್ಲಿ ಈ ಮಾಹಿತಿ ನೀಡಿದ್ದರಲ್ಲದೆ, ಪೊಲೀಸ್ ಇಲಾಖೆಯ ಮೂಲಕವೂ ಆತನ ಪತ್ತೆಗೆ ಪ್ರಯತ್ನಿಸಿದ್ದಾರೆ. ಕೊನೆಗೆ ಆತನ ನಿವಾಸ ಪತ್ತೆಯಾದರೂ, ಅಷ್ಟರಲ್ಲಿ ಇಬ್ಬರು ನೇಣಿಗೆ ಶರಣಾಗಿದ್ದರು.
ಪತ್ನಿ ಬರೆದ ಡೆತ್ ನೋಟ್
ಮನೆಯಲ್ಲಿ ಪತ್ನಿ ಬರೆದಿರುವ ಡೆತ್ನೋಟ್ ದೊರೆತಿದೆ. ನನಗೆ ಬ್ಲಾಕ್ ಫಂಗಸ್ ಲಕ್ಷಣಗಳಿವೆ. ಇದರಿಂದ ಮುಂದೆ ತೊಂದರೆಯಾಗಲಿದೆ. ಪತಿಗೂ ಕೋವಿಡ್ ಲಕ್ಷಣಗಳಿವೆ. ಹೀಗಾಗಿ ನಾನು ಸಾಯಲು ನಿರ್ಧರಿಸಿದ್ದೇವೆ ಎಂದು ಬರೆದಿದ್ದಾರೆ.