ಮಂಗಳೂರು: ಸರ್ಕಾರಿ ಜಾಗದಲ್ಲಿರುವ ಆಟದ ಮೈದಾನ ಕಬಳಿಸುವ ಯತ್ನ ನಡೆದಿದೆ ಎಂದು ಪಚ್ಚನಾಡಿಯ ಸ್ಥಳೀಯರು ಆರೋಪಿಸಿದ್ದಾರೆ. ಈ ಸಂದರ್ಭದಲ್ಲಿ ಕಾರ್ಪೋರೇಟರ್ ಪತಿ ಸ್ಥಳೀಯರನ್ನು ದಬಾಯಿಸಿರುವ ಘಟನೆ ಮಂಗಳೂರು ಹೊರವಲಯದ ಪಚ್ಚನಾಡಿಯ ಕಾರ್ಮಿಕ ನಗರದಲ್ಲಿ ನಡೆಯಿತು. ಪಚ್ಚನಾಡಿ ಕಾರ್ಪೊರೇಟರ್ ಸಂಗೀತ ನಾಯಕ್ ಪತಿ ಮತ್ತು ಸ್ಥಳೀಯರ ಮಧ್ಯೆ ಪರಸ್ಪರ ವಾಗ್ವಾದ ನಡೆದಿದ್ದು, ವಿಡಿಯೋ ವೈರಲ್ ಆಗಿದೆ.
ಎರಡೆಕರೆ ಸರ್ಕಾರಿ ಜಾಗವನ್ನು ಆಟದ ಮೈದಾನ ಮಾಡಲಾಗಿತ್ತು. ಇದೀಗ ಆ ಜಾಗದಲ್ಲಿ ಏಕಾಏಕಿ ಅಕ್ರಮ ಮನೆ ನಿರ್ಮಾಣಕ್ಕೆ ಯತ್ನಿಸಲಾಗುತ್ತಿದೆ. ಸರ್ಕಾರಿ ಜಾಗ ಕಬಳಿಸುವ ಯತ್ನಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕಾಮಗಾರಿಗೆ ತಡೆಯೊಡ್ಡಿದ್ದಾರೆ ಎಂದು ತಿಳಿದುಬಂದಿದೆ.