ಕರ್ನಾಟಕ

karnataka

ETV Bharat / state

ಮಂಗಳೂರಿನಲ್ಲಿ ಸುತ್ತಾಡಿದ ನೈಜೀರಿಯಾ ಪ್ರಜೆ: ನಗರದಲ್ಲಿ ಮತ್ತಷ್ಟು ಆತಂಕ - ಕೊರೊನಾ ಸೋಂಕು ಭೀತಿ

ಮಂಗಳೂರಿನ ನವಭಾರತ್ ಸರ್ಕಲ್​ನಲ್ಲಿ ಈ ನೈಜೀರಿಯಾ ಪ್ರಜೆ ತಿರುಗಾಡುತ್ತಿರುವುದನ್ನು ಕಂಡ ಸ್ಥಳೀಯರು ಆತಂಕಕ್ಕೀಡಾಗಿದ್ದಾರೆ‌. ಕಾರಣ ಇಷ್ಟೇ ಕೊರೊನಾ ವೈರಸ್​

Coronavirus anxiety
ಕೊರೊನಾ ಸೋಂಕು ಭೀತಿ: ನೈಜಿರಿಯಾ ಪ್ರಜೆ ಮಂಗಳೂರಿನಲ್ಲಿ ಸುತ್ತಾಡಿ ಮತ್ತಷ್ಟು ಆತಂಕ

By

Published : Mar 21, 2020, 8:03 PM IST

ಮಂಗಳೂರು:ಕೊರೊನಾ ಸೋಂಕು ಭೀತಿಯಿಂದ ತತ್ತರಿಸಿರುವ ಮಂಗಳೂರು ಜನತೆಗೆ ನೈಜೀರಿಯಾ ಪ್ರಜೆಯೋರ್ವ ನಗರದಲ್ಲಿ ಸುತ್ತಾಡಿ ಇನ್ನಷ್ಟು ಆತಂಕ ಸೃಷ್ಟಿಸಿರುವ ಘಟನೆ ಇಂದು ನಡೆದಿದೆ‌.

ಕೊರೊನಾ ಸೋಂಕು ಭೀತಿ: ನೈಜೀರಿಯಾ ಪ್ರಜೆ ಮಂಗಳೂರಿನಲ್ಲಿ ಸುತ್ತಾಡಿ ಮತ್ತಷ್ಟು ಆತಂಕ

ಮಂಗಳೂರಿನ ನವಭಾರತ್ ಸರ್ಕಲ್​ನಲ್ಲಿ ಈ ನೈಜೀರಿಯಾ ಪ್ರಜೆ ತಿರುಗಾಡುತ್ತಿರುವುದನ್ನು ಕಂಡ ಸ್ಥಳೀಯರು ಆತಂಕಕ್ಕೀಡಾಗಿದ್ದಾರೆ‌. ಈ ಬಗ್ಗೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಯಿತು‌. ಪೊಲೀಸರು ತಕ್ಷಣ ಆ್ಯಂಬುಲೆನ್ಸ್​ಗೆ ಕರೆ ಮಾಡಿದ್ದಾರೆ‌. ಆದರೆ, ಅರ್ಧಗಂಟೆ ಬಳಿಕವೂ ಸರ್ಕಾರಿ ಆ್ಯಂಬುಲೆನ್ಸ್ ಸ್ಥಳಕ್ಕೆ ಆಗಮಿಸಲೇ ಇಲ್ಲ. ಇದರಿಂದ ಸ್ಥಳೀಯರು ಆಕ್ರೋಶಗೊಂಡ ಘಟನೆಯೂ ನಡೆಯಿತು.

ಬಳಿಕ ಆಗಮಿಸಿದ ಆ್ಯಂಬುಲೆನ್ಸ್ ನಲ್ಲಿ‌ ನೈಜೀರಿಯಾ ಪ್ರಜೆಯನ್ನ ವೆನ್ಲಾಕ್ ಆಸ್ಪತ್ರೆ ಸಿಬ್ಬಂದಿ ಕರೆದುಕೊಂಡು ಹೋದ ಬಳಿಕ ಪರಿಸ್ಥಿತಿ ತಣ್ಣಗಾಯಿತು.

ABOUT THE AUTHOR

...view details