ಕರ್ನಾಟಕ

karnataka

ETV Bharat / state

ಫೋಟೋಗ್ರಾಫರ್​​ಗಳ ನಗುವನ್ನೇ ಕಿತ್ತುಕೊಂಡ ಮಹಾಮಾರಿ ಕೊರೊನಾ..! - ಕೊರೊನಾ ಲೆಟಸ್ಟ್ ನ್ಯೂಸ್​​

ಏಪ್ರಿಲ್-ಮೇ ತಿಂಗಳು ಅತೀ ಹೆಚ್ಚು ಮದುವೆ, ಸಮಾರಂಭಗಳು ಇರುವ ಕಾಲ. ಈ ತಿಂಗಳುಗಳಲ್ಲಿ ಫೋಟೋಗ್ರಾಫರ್ಸ್ ಅತೀ ಹೆಚ್ಚು ಕೆಲಸದಲ್ಲಿ ತೊಡಗುತ್ತಿದ್ದರು. ಈ ತಿಂಗಳಲ್ಲಿ ಹೆಚ್ಚು ಹೆಚ್ಚು ದುಡಿದಲ್ಲಿ ಮುಂದೆ ವರ್ಷ ಪೂರ್ತಿ ತಮ್ಮ ಸಂಸಾರದ ನೊಗ ಸಾಗಿಸಬಹುದು ಎಂಬುದು ಇವರ ನಂಬಿಕೆ. ಸಂಪೂರ್ಣ ಲಾಕ್​ಡೌನ್ ಆದ ಪರಿಣಾಮ ಎಲ್ಲಾ ವಿವಾಹ, ಶುಭ ಸಮಾರಂಭಗಳು ರದ್ದಾಗಿದೆ. ಕೆಲವೊಂದು ವಿವಾಹಗಳು ಸರಳವಾಗಿ ನಡೆದಿದೆ. ಪರಿಣಾಮ ಫೋಟೋಗ್ರಾಫರ್ಸ್​​​ಗಳು ವರ್ಷದಲ್ಲಿ ಕಾಯುತ್ತಿದ್ದ ಸೀಸನ್​ನಲ್ಲೇ ಕೊರೊನಾ ಸೋಂಕು ಆವರಿಸಿ ಸಂಕಷ್ಟಕ್ಕೊಳಗಾಗಿದ್ದಾರೆ.

coronavirus absolutely ruined photographers life
ಫೋಟೋಗ್ರಾಫರ್​​ಗಳ ನಗುವನ್ನೇ ಕಿತ್ತುಕೊಂಡ ಮಹಾಮಾರಿ ಕೊರೊನಾ..!

By

Published : Apr 11, 2020, 11:19 PM IST

ಮಂಗಳೂರು: ಕೊರೊನಾ ಹರಡುವ ನಿಟ್ಟಿನಲ್ಲಿ ಲಾಕ್​ಡೌನ್ ಆದೇಶ ಜಾರಿ ಮಾಡಲಾಯಿತು. ಆದರೆ ಕೊರೊನಾ ವೈರಸ್​ನಿಂದಾಗಿ ಕೋಟ್ಯಂತರ ನಾಗರಿಕರಿಗೆ ಸಮಸ್ಯೆಯಾಗಿದೆ. ರೈತರು, ವ್ಯಾಪಾರಸ್ಥರು, ಕೂಲಿ ಕಾರ್ಮಿಕರು ಹೀಗೆ ಹಲವರು ಸಮಸ್ಯೆ ಎದುರಿಸುತ್ತಿದ್ದಾರೆ. ಇವರ ಸಾಲಿಗೆ ಈಗ ಫೋಟೋಗ್ರಾಫರ್ಸ್​ ಸಹ ಸೇರಿಕೊಂಡಿದ್ದಾರೆ.

ಹೌದು..ಬೇರೆಯವರನ್ನು ಒಂದು ಫೋಟೊಕ್ಕಾಗಿ ಮುಖದಲ್ಲಿ ನಗುಯಿರಲಿ ಎನ್ನುತ್ತಿದ್ದವರು ಈಗ ಸ್ವತಃ ಕಣ್ಣೀರಲ್ಲೇ ಕೈ ತೊಳೆಯುವ ಪರಿಸ್ಥಿತಿ ಬಂದೊದಗಿದೆ.

ಏಪ್ರಿಲ್-ಮೇ ತಿಂಗಳು ಅತೀ ಹೆಚ್ಚು ಮದುವೆ, ಸಮಾರಂಭಗಳು ಇರುವ ಕಾಲ. ಈ ತಿಂಗಳುಗಳಲ್ಲಿ ಫೋಟೋಗ್ರಾಫರ್ಸ್ ಅತೀ ಹೆಚ್ಚು ಕೆಲಸದಲ್ಲಿ ತೊಡಗುತ್ತಿದ್ದರು. ಈ ತಿಂಗಳಲ್ಲಿ ಹೆಚ್ಚು ಹೆಚ್ಚು ದುಡಿದಲ್ಲಿ ಮುಂದೆ ವರ್ಷ ಪೂರ್ತಿ ತಮ್ಮ ಸಂಸಾರ ನೊಗ ಸಾಗಿಸಬಹುದು ಎಂಬುದು ಇವರ ನಂಬಿಕೆ.

ಅದಕ್ಕಾಗಿ ಫೆಬ್ರವರಿಯಿಂದಲೇ ಕ್ಯಾಮರಾ, ಅದಕ್ಕೆ ಬೇಕಾದ ವಸ್ತುಗಳನ್ನು ಸಾಲ ಮಾಡಿಯಾದರೂ ಸಿದ್ಧತೆ ಮಾಡಿಕೊಂಡಿರುತ್ತಾರೆ. ಇದೀಗ ಕೊರೊನಾ ಸೋಂಕು ಫೋಟೋಗ್ರಾಫರ್ಸ್ ಸಿದ್ಧತೆಗಳನ್ನೇ ತಲೆಕೆಳಗಾಗಿಸಿದೆ.

ಸಂಪೂರ್ಣ ಲಾಕ್​ಡೌನ್ ಆದ ಪರಿಣಾಮ ಹೆಚ್ಚಿನ ಎಲ್ಲ ವಿವಾಹ, ಶುಭ ಸಮಾರಂಭಗಳು ರದ್ದಾಗಿದೆ. ಕೆಲವೊಂದು ವಿವಾಹಗಳು ಸರಳವಾಗಿ ನಡೆದಿದೆ. ಪರಿಣಾಮ ಫೋಟೋಗ್ರಾಫರ್ಸ್​​​ಗಳು ವರ್ಷದಲ್ಲಿ ಕಾಯುತ್ತಿದ್ದ ಸೀಸನ್​ನಲ್ಲೇ ಕೊರೊನಾ ಸೋಂಕು ಆವರಿಸಿ ಸಂಕಷ್ಟಕ್ಕೊಳಗಾಗಿದ್ದಾರೆ.

ಈ ಬಗ್ಗೆ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್(ರಿ) ದ.ಕ.-ಉಡುಪಿ ಜಿಲ್ಲೆಯ ಮಂಗಳೂರು ವಲಯದ ಅಧ್ಯಕ್ಷ ಮಧು ಮಂಗಳೂರು ಮಾತನಾಡಿ, ನಮಗೆ ಬಹಳಷ್ಟು ಮದುವೆಯ ಕಾರ್ಯಕ್ರಮ ಆರ್ಡರ್ ಬಂದಿತ್ತು. ಆದರೀಗ ಎಲ್ಲಾ ಕಾರ್ಯಕ್ರಮಗಳು ರದ್ದಾಗಿ ನಾವು ಅಡ್ವಾನ್ಸ್ ತೆಗೆದುಕೊಂಡ ಹಣವನ್ನೂ ಹಿಂದಿರುಗಿಸಿದ್ದೇವೆ.

ಅಲ್ಲದೇ ಲಾಕ್​ಡೌನ್ ಪರಿಣಾಮ ಎಲ್ಲಾ ಕ್ಷೇತ್ರಗಳಿಗೂ ಬಹುದೊಡ್ಡ ಹೊಡೆತ ಬಿದ್ದಿದೆ. ಪರಿಣಾಮ ವಿವಾಹ ಸಮಾರಂಭಗಳು ಸರಳವಾಗಿ ನಡೆಯುವ ಮುಂದಕ್ಕೆ ನಮಗೆ ದೊಡ್ಡ ಮಟ್ಟದ ಆರ್ಡರ್​ಗಳು ದೊರೆಯುತ್ತದೆ ಎಂಬ ನಿರೀಕ್ಷೆಗಳೂ ಹುಸಿಯಾಗಿವೆ.

ಮಳೆಗಾಲ ಪೂರ್ತಿ ಯಾವುದೇ ಕೆಲಸವಿಲ್ಲ. ನವೆಂಬರ್​​ನಿಂದ ಜನವರಿವರೆಗೆ ವಿರಳವಾಗಿ ವಿವಾಹ ಸಮಾರಂಭಗಳು ಇರುತ್ತವೆ. ಆದರೆ ನಮ್ಮ ಕುಟುಂಬ ಮಾತ್ರ ಬಹುದೊಡ್ಡ ಸಂಕಷ್ಟಕ್ಕೆ ಸಿಲುಕಿದೆ ಎಂಬುದು ಮಾತ್ರ ಸತ್ಯ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details