ಕರ್ನಾಟಕ

karnataka

ETV Bharat / state

ದ.ಕ.ಜಿಲ್ಲೆಯಲ್ಲಿಂದು 7 ಸಾವು...166 ಮಂದಿಗೆ ಕೊರೊನಾ ದೃಢ - Dakshinakanada Corona Case

ದಕ್ಷಿಣಕನ್ನಡ ಜಿಲ್ಲೆಯಲ್ಲಿಂದು 7 ಮಂದಿ ಕೊರೊನಾಗೆ ಬಲಿಯಾಗಿದ್ದು, 166 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

Coronation Positive for 166 people in Dakshina Kannada district
ದ.ಕ.ಜಿಲ್ಲೆಯಲ್ಲಿಂದು 7 ಸಾವು...166 ಮಂದಿಗೆ ಕೊರೊನಾ ದೃಢ

By

Published : Aug 7, 2020, 8:55 PM IST

ಮಂಗಳೂರು:ದಕ್ಷಿಣಕನ್ನಡ ಜಿಲ್ಲೆಯಲ್ಲಿಂದು 7 ಮಂದಿ ಕೊರೊನಾಗೆ ಬಲಿಯಾಗಿದ್ದು, 166 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಮಂಗಳೂರಿನಲ್ಲಿ 5, ಪುತ್ತೂರು ಹಾಗೂ ಬೆಳ್ತಂಗಡಿ ತಾಲೂಕಿನಲ್ಲಿ ತಲಾ ಒಬ್ಬರೊಬ್ಬರು ಸಾವನ್ನಪ್ಪಿದ್ದು, ಮೃತರ ಸಂಖ್ಯೆ 208ಕ್ಕೆ ಏರಿಕೆಯಾಗಿದೆ. ಅಲ್ಲದೇ, ಮಂಗಳೂರಿನ 74, ಬಂಟ್ವಾಳ 25, ಬೆಳ್ತಂಗಡಿ 36, ಪುತ್ತೂರು 13, ಸುಳ್ಯ 01 ಹಾಗೂ ಹೊರಜಿಲ್ಲೆಯ 17 ಮಂದಿ ಸೇರಿ 166 ಜನರಿಗೆ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 6,881ಕ್ಕೆ ಏರಿಕೆಯಾಗಿದೆ.

ಇದರಲ್ಲಿ ಐಎಲ್​ಐನಿಂದ 83, ಎಸ್​ಎಆರ್​ಐಯಿಂದ 13, ಪ್ರಾಥಮಿಕ ಸಂಪರ್ಕದಿಂದ 19 ಮಂದಿಗೆ ಸೋಂಕು ದೃಢಪಟ್ಟಿದ್ದು, 51ಜನರ ಸಂಪರ್ಕದ‌ ಮೂಲ ಪತ್ತೆಯಾಗಿಲ್ಲ. ಇಂದು 188 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ 3,304 ಜನರು ಗುಣಮುಖರಾಗಿದ್ದಾರೆ. 3.369 ಸಕ್ರಿಯ ಪ್ರಕರಣಗಳಿವೆ.

ABOUT THE AUTHOR

...view details