ಕರ್ನಾಟಕ

karnataka

ETV Bharat / state

ಮಹಿಳಾ ಹೆಡ್​ಕಾನ್​ಸ್ಟೇಬಲ್​ಗೆ ಕೊರೊನಾ ಯೋಧಳ ಗೌರವ - Women Head Constable

ಮಹಿಳಾ ಹೆಡ್​ಕಾನ್​ಸ್ಟೇಬಲ್ ಆಗಿರುವ ನಯನ ತಮ್ಮ ಸ್ವಇಚ್ಛೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದು ಅವರಿಗೆ ಕೊರೊನಾ ಯೋಧಳ ಗೌರವ ನೀಡಲಾಗಿದೆ.

Women's Head Constable
ಮಹಿಳಾ ಹೆಡ್​ಕಾನ್​ಸ್ಟೇಬಲ್​ಗೆ ಕೊರೊನಾ ಯೋಧೆ ಗೌರವ

By

Published : Apr 20, 2020, 9:10 PM IST

ನಮಂಗಳೂರು:ಕೊರೊನಾ ಸೋಂಕು ದೃಢಪಟ್ಟ ರೋಗಿಗಳು ಮತ್ತು ಕೊರೊನಾ ಶಂಕಿತ ರೋಗಿಗಳನ್ನು ಚಿಕಿತ್ಸೆ ನೀಡುವ ನಗರದ ವೆನ್ಲಾಕ್ ಕೋವಿಡ್ ಆಸ್ಪತ್ರೆಯ ಆಯುಷ್ ಕಟ್ಟಡದಲ್ಲಿ ಮಹಿಳಾ ಹೆಡ್​ಕಾನ್​ಸ್ಟೇಬಲ್ ಆಗಿರುವ ನಯನ ತಮ್ಮ ಸ್ವಇಚ್ಛೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದ್ದರಿಂದ ಅವರಿಗೆ ಇಂದಿನ ಕೋವಿಡ್ ಯೋಧಳ ಗೌರವ ನೀಡಲಾಗಿದೆ.

ಮಹಿಳಾ ಹೆಡ್​ಕಾನ್​ಸ್ಟೇಬಲ್​ ನಯನಾ ಅವರು ವೆನ್ಲಾಕ್ ಆಸ್ಪತ್ರೆಗೆ ದಾಖಲಾಗುವ ರೋಗಿಗಳ ಹಾಗೂ ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆ ಹೊಂದಿರುವವರ ಸ್ವ-ವಿವರವುಳ್ಳ ಮಾಹಿತಿಯನ್ನು ಆಸ್ಪತ್ರೆಯಿಂದ ಪಡೆದು ಕ್ಲಿಪ್ತ ಸಮಯದಲ್ಲಿ ಸಂಬಂಧಪಟ್ಟ ಪೊಲೀಸ್ ಠಾಣೆಗಳಿಗೆ ರವಾನಿಸಲು ಹಾಗೂ ಮೇಲಧಿಕಾರಿಗಳಿಗೆ ಮಾಹಿತಿ ನೀಡುವಲ್ಲಿ ಉತ್ತಮ ಕೆಲಸ ಮಾಡಿರುತ್ತಾರೆ.

ಅಲ್ಲದೇ ಆಸ್ಪತ್ರೆಯ ವೈದ್ಯರೊಂದಿಗೆ ಹಾಗೂ ಸಿಬ್ಬಂದಿಯವರಲ್ಲಿ ಉತ್ತಮ ಒಡನಾಟವಿದ್ದು, ವೆನ್ಲಾಕ್ ಆಸ್ಪತ್ರೆಯನ್ನು ಕೋವಿಡ್-19 ಚಿಕಿತ್ಸೆಗೆ ಮೀಸಲಿರಿಸಿದ್ದರಿಂದ, ಇತರ ಖಾಯಿಲೆಯ ಚಿಕಿತ್ಸೆಗೆಂದು ಬರುವ ರೋಗಿಗಳ ಬಗ್ಗೆ ವೈದ್ಯರೊಂದಿಗೆ ಸಮಾಲೋಚಿಸಿ ವೈದ್ಯರ ಸೂಚನೆಯಂತೆ ಬೇರೆ ಆಸ್ಪತ್ರೆಗೆ ಚಿಕಿತ್ಸೆಯ ಬಗ್ಗೆ ಸಂಪರ್ಕಿಸುವ ಕುರಿತು ಸಲಹೆ ನೀಡುತ್ತಿರುವ ಇವರನ್ನು ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳಿಂದ ಪ್ರಶಂಸೆಗೆ ಪಾತ್ರರಾಗಿರುತ್ತಾರೆ.

For All Latest Updates

ABOUT THE AUTHOR

...view details