ಮಂಗಳೂರು: ನಗರದ ಕುಂಪಲ ನಿವಾಸಿಯ ಮದುವೆ ಕೊರೊನಾ ಭೀತಿಯಿಂದಾಗಿಯಾಗಿ ಮುಂದೂಡಿಕೆಯಾಗಿದೆ.
ನಗರದ ಕುಂಪಲ ನಿವಾಸಿ ಮಾಧವ ಬಂಗೇರ ಹಾಗೂ ಶಾರದಾ ದಂಪತಿಗಳ ಪುತ್ರ ಗೌರವ್ ಎಂಬವರ ಮದುವೆಯು ಶೇಖರ್ ಪೂಜಾರಿ ಎಂಬವವರ ಮಗಳು ಪ್ರಿಯಾಂಕಾ ಜೊತೆಗೆ ನಿಶ್ಚಯವಾಗಿತ್ತು. ಈ ಹಿನ್ನೆಲೆಯಲ್ಲಿ ಸೋಮವಾರ ಅವರ ಮದುವೆ ನಗರದ ಬೆಂದೂರ್ ವೆಲ್ನ ಸಂತ ಸೆಬಾಸ್ಟಿಯನ್ ಚರ್ಚ್ ಪ್ಲಾಟಿನಂ ಜುಬಿಲಿ ಆಡಿಟೋರಿಯಂನಲ್ಲಿ ನಡೆಯಬೇಕಿತ್ತು. ಆದರೆ, ಕೊರೊನಾ ಭೀತಿ ಇದೀಗ ಇವರ ಮದುವೆಯನ್ನೇ ಮುಂದೂಡುವಂತೆ ಮಾಡಿದೆ.
ಸೋಮವಾರ ನಡೆಯಬೇಕಿದ್ದ ಮದುವೆ ಮುಂದೂಡಿಕೆ ಇನ್ನು ಮದುಮಗ ಗೌರವ್ ಹಾಂಕಾಂಗ್, ಸಿಂಗಾಪುರ ಹಾಗೂ ತೈವಾನ್ನಲ್ಲಿ ಸಂಚರಿಸುವ ಪ್ರವಾಸಿ ಹಡಗಿನಲ್ಲಿ ಉದ್ಯೋಗದಲ್ಲಿದ್ದಾರೆ. ಆದರೆ, ಹಾಂಕಾಂಗ್ ನಲ್ಲಿರುವ ಸುಮಾರು 1,700 ಮಂದಿಯ ಇರುವ ಹಡಗಿನಲ್ಲಿ ಹಲವು ಮಂದಿಗೆ ಕೊರೊನಾ ಸೋಂಕು ತಗುಲಿರುವ ಭೀತಿ ಎದುರಾಗಿದೆ. ಆದ್ದರಿಂದ ಹಾಂಕಾಂಗ್ನಲ್ಲಿ ಗೌರವ್ ಇರುವ ಹಡಗನ್ನು ಸಮುದ್ರ ಕಿನಾರೆಗೆ ಬರಲು ಬಿಡದೆ ಸಮುದ್ರದ ಮಧ್ಯೆಯೇ ನಿಲ್ಲಿಸಿದ್ದಾರೆ.
ಮದುವೆಯ ಹಿನ್ನೆಲೆಯಲ್ಲಿ ಗೌರವ್ ಫೆ.4ರಂದು ಊರಿಗೆ ಬರುವ ಬಗ್ಗೆ ಮಾಹಿತಿ ನೀಡಿದ್ದರು. ಇದೀಗ ಅವರಿರುವ ಹಡಗು ಸಮುದ್ರದ ಮಧ್ಯೆಯೇ ಉಳಿದಿರುವ ಕಾರಣ ಗೌರವ್ ಮಂಗಳೂರಿಗೆ ಬಾರದೇ ಮದುವೆಯನ್ನೇ ಮುಂದೂಡುವ ಪರಿಸ್ಥಿತಿ ಉಂಟಾಗಿದೆ.