ಕರ್ನಾಟಕ

karnataka

ETV Bharat / state

ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್​ಗೆ ಕೊರೊನಾ - Corona to Moodabidre MLA Umanatha Kotyan

ಮೂಡಬಿದ್ರೆ ಶಾಸಕ ಉಮನಾಥ ಕೋಟ್ಯಾನ್ ಅವರು ತಮಗೆ ಕೊರೊನಾ ಸೋಂಕು ತಗುಲಿರುವುದನ್ನು ಟ್ವೀಟ್​ ಮೂಲಕ ತಿಳಿಸಿದ್ದಾರೆ.

ಶಾಸಕ ಉಮಾನಾಥ ಕೋಟ್ಯಾನ್​ಗೆ ಕೊರೊನಾ
ಶಾಸಕ ಉಮಾನಾಥ ಕೋಟ್ಯಾನ್​ಗೆ ಕೊರೊನಾ

By

Published : Sep 17, 2020, 8:40 PM IST

ಮಂಗಳೂರು:ಮೂಡಬಿದ್ರೆ ಶಾಸಕ ಉಮನಾಥ ಕೋಟ್ಯಾನ್ ಅವರಿಗೆ ಇಂದು ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ.

ತಮಗೆ ಕೊರೊನಾ ಪಾಸಿಟಿವ್ ದೃಢಪಟ್ಟಿರುವುದನ್ನು ಟ್ವೀಟ್ ಮೂಲಕ ಅವರು ತಿಳಿಸಿದ್ದಾರೆ. ನಾನು ಕೋವಿಡ್-19 ಪರೀಕ್ಷೆಗೆ ಒಳಗಾಗಿದ್ದು, ವರದಿಯಲ್ಲಿ ಪಾಸಿಟಿವ್ ಬಂದಿದೆ. ಇದೀಗ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೇನೆ. ದೇವರ ಅನುಗ್ರಹ ಹಾಗೂ ನಿಮ್ಮ ಆಶೀರ್ವಾದಗಳೊಂದಿಗೆ ಶೀಘ್ರದಲ್ಲೇ ಗುಣಮುಖವಾಗಿ ನಿಮ್ಮ ಸೇವೆ ಮಾಡಲು ಹಾಜರಾಗುವ ವಿಶ್ವಾಸವಿದೆ ಎಂದು ಟ್ವೀಟ್ ಮಾಡಿದ್ದಾರೆ.

ಶಾಸಕ ಉಮಾನಾಥ ಕೋಟ್ಯಾನ್ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರಾಗುವ ನಾಲ್ಕನೇ ಶಾಸಕರಾಗಿದ್ದಾರೆ. ಇದಕ್ಕೆ ಮೊದಲು ಶಾಸಕರಾದ ಭರತ್ ಶೆಟ್ಟಿ, ಹರೀಶ್ ಪೂಂಜಾ, ಅಂಗಾರ ಅವರಿಗೂ ಕೊರೊನಾ ದೃಢಪಟ್ಟಿತ್ತು. ಇದೀಗ ಉಮನಾಥ ಕೋಟ್ಯಾನ್ ಅವರಿಗೂ ಕೊರೊನಾ ದೃಢಪಟ್ಟಿದೆ.

ABOUT THE AUTHOR

...view details