ಕರ್ನಾಟಕ

karnataka

ETV Bharat / state

ಹತ್ತು ದಿನ ಕಳೆದ್ರೂ ಬಾರದ ಕೊರೊನಾ ಪರೀಕ್ಷಾ ವರದಿ : ವಿದ್ಯಾರ್ಥಿಗಳು ಅತಂತ್ರ

ಇದೀಗ ಕೋವಿಡ್-19 ಪರೀಕ್ಷಾ ವರದಿ ಬಾರದೆ ಇರುವುದರಿಂದ ಜ.21ರ ಪರೀಕ್ಷೆ ಬರೆಯಲಿರುವ ಹಲವಾರು ವಿದ್ಯಾರ್ಥಿಗಳು ಗೊಂದಲದಲ್ಲಿದ್ದಾರೆ. ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಿ ವಿದ್ಯಾರ್ಥಿಗಳ ಆತಂಕ ದೂರ ಮಾಡುವ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕಿದೆ..

corona
ಕೊರೊನಾ

By

Published : Jan 19, 2021, 7:01 PM IST

ಕಡಬ :ಶಾಲಾ-ಕಾಲೇಜುಗಳು ಪ್ರಾರಂಭವಾಗಿದ್ದರಿಂದ ಕಾಲೇಜಿಗೆ ಪ್ರವೇಶ ಪಡೆಯಲು ಅಲ್ಲದೇ ಮುಖ್ಯವಾಗಿ ಪರೀಕ್ಷೆ ಬರೆಯಲು ಕೊರೊನಾ ವರದಿ ಕಡ್ಡಾಯವಾಗಿದೆ. ಆದರೆ, ಈಗಾಗಲೇ ಹತ್ತು ದಿನಗಳ ಹಿಂದೆ ಮಾಡಲಾದ ಕೊರೊನಾ ಪರೀಕ್ಷೆಯ ವರದಿಗಳು ಈ ತನಕ ಬಾರದೆ ಇರುವುದರಿಂದ ಹಲವಾರು ವಿದ್ಯಾರ್ಥಿಗಳು ಗೊಂದಲದಲ್ಲಿದ್ದಾರೆ.

ಈ ಬಗ್ಗೆ ವಿದ್ಯಾರ್ಥಿಗಳು ಮಾಧ್ಯಮ ವರದಿಗಾರರಿಗೆ ಫೋನ್ ಮೂಲಕ ತಮ್ಮ ಸಮಸ್ಯೆಗಳನ್ನು ಪರಿಹರಿಸಲು ವಿನಂತಿಸಿದ್ದಾರೆ. ಈ ಕುರಿತು ಕಡಬ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸುಚಿತ್ರಾ ರಾವ್ ಅವರನ್ನ ಕೇಳಿದ್ರೇ, ಕಡಬ ಸಮುದಾಯ ಆಸ್ಪತ್ರೆಯಲ್ಲಿ ಜ.8ರ ನಂತರ ನಡೆಸಿದ ಕೋವಿಡ್ ಪರೀಕ್ಷೆಯ ವರದಿಗಳು ಬಂದಿಲ್ಲ ಎಂದು ಉತ್ತರ ನೀಡಿದ್ದಾರೆ.

ಈ ನಡುವೆ ಪುತ್ತೂರು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಅವರು ಈಟಿವಿ ಭಾರತ ಜೊತೆಗೆ ಮಾತನಾಡುತ್ತಾ, ಯಾವ ಶಾಲೆಗಳಲ್ಲೂ ಕೋವಿಡ್ ಪರೀಕ್ಷಾ ವರದಿ ತರಲೇಬೇಕೆಂಬ ನಿಯಮ ಕಡ್ಡಾಯ ಮಾಡಲಾಗಿಲ್ಲ. ವಿದ್ಯಾರ್ಥಿಗಳಿಗೆ ತೊಂದರೆ ಆಗುವ ರೀತಿ ಯಾವ ಶಾಲೆಗಳು ವರ್ತಿಸಬಾರದು ಎಂದು ಹೇಳಿದ್ದಾರೆ.

ಇದೀಗ ಕೋವಿಡ್-19 ಪರೀಕ್ಷಾ ವರದಿ ಬಾರದೆ ಇರುವುದರಿಂದ ಜ.21ರ ಪರೀಕ್ಷೆ ಬರೆಯಲಿರುವ ಹಲವಾರು ವಿದ್ಯಾರ್ಥಿಗಳು ಗೊಂದಲದಲ್ಲಿದ್ದಾರೆ. ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಿ ವಿದ್ಯಾರ್ಥಿಗಳ ಆತಂಕ ದೂರ ಮಾಡುವ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕಿದೆ.

ABOUT THE AUTHOR

...view details